ಡಾ.ಎಂ. ಮುರಳಿಕುಮಾರ್‌ಗೆ ಪ್ರಶಸ್ತಿ

ಮಂಗಳೂರು, ಫೆ. 9: ಕರ್ನಾಟಕ ಜನತಾ ಸೇನಾ ದಳವು ಡಾ. ಶಿವಕುಮಾರ್ ಸ್ವಾಮೀಜಿಯ ಪುಣ್ಯಸ್ಮರಣೆಯ ಅಂಗವಾಗಿ ನಗರದ ಪಾರಂಪರಿಕ ವೈದ್ಯ ಡಾ. ಎಂ.ಮುರಳಿ ಕುಮಾರ್‌ಗೆ ಸಿದ್ಧಗಂಗಾ ಶ್ರೀ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಿಸಿದೆ.
ಫೆ.13ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ನಯನಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story