ಶ್ರೀನಗರ,ಫೆ.9: ಹಿರಿಯ ಪಿಡಿಪಿ ನಾಯಕ ಗುಲಾಂ ನಬಿ ಹಂಜುರಾ ಅವರು ಬುಧವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು,ಆದರೆ ಪಕ್ಷದ ಪ್ರಾಥಮಿಕ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ನಾಯಕರೋರ್ವರು ತಿಳಿಸಿದರು. ಹಂಜುರಾ ರಾಜೀನಾಮೆಗೆ ಕಾರಣವನ್ನು ಅವರು ತಿಳಿಸಲಿಲ್ಲ.