ಸಿಬಿಎಸ್ಇ 10,12ನೇ ತರಗತಿಗಳ 2ನೇ ಅವಧಿಯ ಪರೀಕ್ಷೆ: ಎ.26ರಿಂದ ಆಫ್ ಲೈನ್ ನಲ್ಲಿ ಆರಂಭ

ಹೊಸದಿಲ್ಲಿ,ಫೆ.9: ಸಿಬಿಎಸ್ಇ 10 ಮತ್ತು 12ನೇ ತರಗತಿಗಳಿಗಾಗಿ 2ನೇ ಅವಧಿಯ ಪರೀಕ್ಷೆಯನ್ನು ಎ.26ರಿಂದ ಆಫ್ ಲೈನ್ ವಿಧಾನದಲ್ಲಿ ನಡೆಸಲಿದೆ ಎಂದು ಮಂಡಳಿಯ ಅಧಿಕಾರಿಗಳು ಬುಧವಾರ ತಿಳಿಸಿದರು.
ವಿವಿಧ ಪಾಲುದಾರರೊಂದಿಗೆ ಚರ್ಚೆ ಮತ್ತು ದೇಶದಲ್ಲಿನ ಕೋವಿಡ್ ಸ್ಥಿತಿಯನ್ನು ಪರಿಗಣಿಸಿದ ಬಳಿಕ 2ನೇ ಅವಧಿಯ ಪರೀಕ್ಷೆಯನ್ನು ಆಫ್ ಲೈನ್ ವಿಧಾನದ ಮೂಲಕ ಮಾತ್ರವೇ ನಡೆಸಲು ಮಂಡಳಿಯು ನಿರ್ಧರಿಸಿದೆ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸಂಯಮ ಭಾರದ್ವಾಜ್ ತಿಳಿಸಿದರು.
ಥಿಯರಿ ಪರೀಕ್ಷೆಗಳು 2022,ಎ.26ರಿಂದ ಆರಂಭವಾಗಲಿವೆ. 10 ಮತ್ತು 12ನೇ ತರಗತಿಗಳಿಗೆ ದಿನಾಂಕ ಪಟ್ಟಿ ಶೀಘ್ರವೇ ಬಿಡುಗಡೆಗೊಳ್ಳಲಿದೆ ಎಂದರು.
Next Story





