ಕಾಶಿಪಟ್ನ : ದಾರುನ್ನೂರ್ ನಲ್ಲಿ ಗಮನಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ಕಾಶಿಪಟ್ನ: ದಾರುನ್ನೂರ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ Techno Philia-22 ವಿಜ್ಞಾನ ಪ್ರದರ್ಶನವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ವಿಭಾಗದ ಅಧ್ಯಕ್ಷ ರಾದ ಪ್ರೊ. ಎ.ಎಂ.ಖಾನ್ ಹಾಗೂ ಮಂಗಳೂರು ಯುನಿಟಿ ಆಸ್ಪತ್ರೆಯ ಡೈರೆಕ್ಟರ್ ಅಷ್ಫಾಕ್ ಮೊಯಿದೀನ್ ಇವರ ಉಪಸ್ಥಿತಿಯಲ್ಲಿ ದಾರುನ್ನೂರ್ ವಿದ್ಯಾ ಕೇಂದ್ರದ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.
ದಾರುನ್ನೂರ್ ವಿದ್ಯಾರ್ಥಿಗಳು ಹಲವು ವಿಧದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮೋಟಾರ್ ಉಪಕರಣಗಳ ಪ್ರಯೋಗಗಳ ಮಾದರಿಗಳನ್ನು ಸಿದ್ಧಪಡಿಸಿ ಸಂದರ್ಶಕರಿಗೆ ಮಾಹಿತಿಗಳನ್ನು ನೀಡಿದರು.
ವಿದ್ಯಾರ್ಥಿಗಳ ಕಲಾತ್ಮಕ ಅಭಿವೃದ್ಧಿಯ ಬಗ್ಗೆ ಅತಿಥಿಗಳು ಸಂತಸವನ್ನು ವ್ಯಕ್ತಪಡಿಸಿ ಇನ್ನಷ್ಟು ಉನ್ನತಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.
ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಕೋಶಾಧಿಕಾರಿ ಹಾಜಿ ಮೊಹಮ್ಮದ್ ಹನೀಫ್, ಉಪಾಧ್ಯಕ್ಷರಾದ ಉಸ್ಮಾನ್ ಏರ್ ಇಂಡಿಯಾ, ಹಾಸ್ಕೋ ಅಬ್ದುಲ್ ರಹ್ಮಾನ್ ಹಾಜಿ, ಪಿ.ಟಿ.ಎ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಸದಸ್ಯ ರಾದ ಅಹ್ಮದ್ ಹುಸೇನ್, ಅಝೀಝ್ ಮಾಲಿಕ್, ಪ್ರಾಂಶುಪಾಲರಾದ ಅಮೀನ್ ಹುದವಿ, ಸದ್ರ್ ಮದರಿಸ್ಸ್ ಹುಸೇನ್ ರಹ್ಮಾನಿ, ವ್ಯವಸ್ಥಾಪಕರಾದ ಅಬ್ದುಲ್ ಹಕೀಮ್, ಸಮಿತಿ ಪದಾಧಿಕಾರಿಗಳು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಶಿಪಟ್ಣ ಸರಕಾರಿ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ಹಲವಾರು ಮಂದಿ ವಸ್ತುಪ್ರದರ್ಶನದ ವೇದಿಕೆಯನ್ನು ಸಂದರ್ಶಿಸಿದರು. ತೀರ್ಪುಗಾರರಾಗಿ ಮೂಡಬಿದ್ರಿ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರೊ.ಆಶಾದ್ ಮುಹಮ್ಮದ್ ಪಾಲ್ಗೊಂದಿದ್ದರು.