ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರ ಸಹಿತ ವಿದೇಶಿ ಕರೆನ್ಸಿ ವಶ

ಮಂಗಳೂರು : ದುಬೈ ಮತ್ತು ಶಾರ್ಜಾಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಇಬ್ಬರು ಪ್ರಯಾಣಿಕರಿಂದ ವಿದೇಶಿ ಕರೆನ್ಸಿಯನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈ ಮತ್ತು ಶಾರ್ಜಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದ ವೇಳೆ ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ.8ರಂದು ದುಬೈಗೆ ತೆರಳಲು ಮುಂದಾಗಿದ್ದ ಪ್ರಯಾಣಿಕನಿಂದ ಯುಎಇ ರಾಷ್ಟ್ರದ 90 ಸಾವಿರ ದಿರ್‌ಹಮ್ (ಭಾರತದ ಮೌಲ್ಯ ಸುಮಾರು 17,77,500) ಮತ್ತು ಫೆ.7ರಂದು ಶಾರ್ಜಾಕ್ಕೆ ತೆರಳಲು ಮುಂದಾಗಿದ್ದ ಪ್ರಯಾಣಿಕನಿಂದ 10 ಸಾವಿರ ಡಾಲರ್ ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕರು ಕಾಸರಗೋಡು ಮತ್ತು ಮಂಗಳೂರು ಮೂಲದವರು ಎನ್ನಲಾಗಿದ್ದು, ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಒಟ್ಟು 25.17 ಲಕ್ಷ ರೂ. ಮೌಲ್ಯದ ಕರೆನ್ಸಿ ವಶಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story