ಉಳ್ಳಾಲಕ್ಕೆ ತಹಶೀಲ್ದಾರ್ ನೇಮಕ
ಮಂಗಳೂರು, ಫೆ.10: ನೂತನವಾಗಿ ರಚನೆಗೊಂಡಿರುವ ಉಳ್ಳಾಲ ತಾಲೂಕಿಗೆ ಮಂಗಳೂರಿನ ನಿಕಟಪೂರ್ವ ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶಿಸಿದೆ.
ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಟಿ.ಜಿ.ಗುರುಪ್ರಸಾದ್ (ಗ್ರೇಡ್ 1)ಅವರನ್ನು ಉಳ್ಳಾಲ ತಾಲೂಕು ತಹಶೀಲ್ದಾರ್ ಆಗಿ ನೇಮಿಸಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ) ಅಧಿಸೂಚನೆ ಹೊರಡಿಸಿದ್ದಾರೆ.
Next Story





