ಫೆ.11: ಮಾಜಿ ಪ್ರಧಾನಿ ದೇವೇಗೌಡ ದ.ಕ.ಜಿಲ್ಲಾ ಪ್ರವಾಸ
ಮಂಗಳೂರು, ಫೆ.10: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಫೆ.11, 12,13ರಂದು ದ.ಕ.ಜಿಲ್ಲಾ ಪ್ರವಾಸದಲ್ಲಿರುತ್ತಾರೆ.
ಫೆ.11ರಂದು ರಾತ್ರಿ 8:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, 10:30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವರು. ಫೆ.12ರಂದು ಸಂಜೆ 5ಕ್ಕೆ ತೊಕ್ಕೊಟ್ಟು ಸಮೀಪದ ಕಲ್ಲಾಪಿನ ಯುನಿಟಿ ಹಾಲ್‌ನಲ್ಲಿ ನಡೆಯುವ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾನೆ ನೀಡಲಿದ್ದಾರೆ. ಫೆ.13ರಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಳಿಕ ಹಾಸನಕ್ಕೆ ತೆರಳಲಿದ್ದಾರೆ ಎಂದು ಎಂದು ಪ್ರಕಟನೆ ತಿಳಿಸಿದೆ.
Next Story