ಸಚಿವ ಈಶ್ವರಪ್ಪಹೇಳಿಕೆಗೆ ಹರೀಶ್ ಕುಮಾರ್ ಖಂಡನೆ
ಮಂಗಳೂರು, ಫೆ.10: ಮುಂದಿನ ದಿನಗಳಲ್ಲಿ ಕೇಸರಿ ಬಾವುಟ ರಾಷ್ಟ್ರಧ್ವಜ ಆಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತೀವೃವಾಗಿ ಖಂಡಿಸಿದ್ದಾರೆ.
ಸಂವಿಧಾನಕ್ಕೆ ಗೌರವ ನೀಡುವವರು ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡುವುದಿಲ್ಲ. ಈಶ್ವರಪ್ಪರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಅವರು ಸಚಿವರಾಗುವಾಗ ಏನು ಪ್ರಮಾಣ ವಚನ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ. ಈಶ್ವರಪ್ಪ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅವರ ಹೇಳಿಕೆಗೆ ಕಿವಿಕೊಡುವವರು ಯಾರೂ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪರಿಗೆ ಬಿಜೆಪಿಯಲ್ಲೇ ಗೌರವ ಇಲ್ಲ. ಇವರೊಬ್ಬ ಜೋಕರ್ ನಂತೆ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿಯ ಹೇಳಿಕೆ ನೀಡಿದ ಸಚಿವರಿಗೆ ಆ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯು ಇಲ್ಲ. ಹಾಗಾಗಿ ಅವರು ರಾಜಿನಾಮೆ ನೀಡಬೇಕು ಎಂದು ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
Next Story





