ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಗ್ಗ ಜುಮಾ ಮಸೀದಿ ಆಶ್ರಯದಲ್ಲಿ ವಿನ್ಯಾಸ ಟೈಲರಿಂಗ್ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ

ಮಂಗಳೂರು : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮಾ ಮಸ್ಜಿದ್ ವಗ್ಗ ಇದರ ಜಂಟಿ ಆಶ್ರಯದಲ್ಲಿ ವಿನ್ಯಾಸ ಟೈಲರಿಂಗ್ ಸೆಂಟರ್ 19ನೇ ಬ್ಯಾಚ್‍ನ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವು ಮಆದನುಲ್ ಉಲೂಂ ಮದ್ರಸ ಸಭಾಂಗದಲ್ಲಿ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಕಾವಳಪಡುರು ವಗ್ಗ ಇದರ ಶಿಕ್ಷಕಿ ಹೆಲೆನ್ ಸಿಕ್ವೇರ ಮುಖ್ಯ ಅತಿಥಿಯಾಗಿ ಆಗಮಿಸಿ ಸ್ವಉದ್ಯೋಗ ಮಹಿಳೆಯರಿಗೆ ದೇವರು ನೀಡಿದ ಮಹಾ ಅನುಗ್ರಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ವಿಮೆನ್ಸ್ ಫೌಂಡೇಶನ್ ಇದರ ನಿರ್ದೇಶಕರಾದ ಮರ್ಯಮ್ ಶಬೀನ ಪುತ್ತಿಗೆ ವಹಿಸಿದರು. ಕಾರ್ಯಕ್ರಮದಲ್ಲಿ ಶರಫುನ್ನೀಸ ಕಂಕನಾಡಿ, ಝೊಹರ ಖಾದರ್, ಸೆಫಿಯ ಅಬ್ದುಲ್ ರಹ್ಮಾನ್ ಮತ್ತು ಶಬನ ಶೇಖ್ ಉಪಸ್ಥಿತರಿದ್ದರು. ಆತಿಕಾ ರಫೀಕ್ ಸಂದರ್ಬೋಚಿತವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ನಿಶಾ, ಸಂಶೀನ ಕಿರಾಅತ್ ಪಠಿಸಿದರು. ಝೊಹರ ಉಳ್ಳಾಲ ವಂದಿಸಿದರು. ಮುಮ್ತಾಝ್ ಪಕಳಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story







.jpeg)

