ಹಿರಿಯರಲ್ಲಿ ಕೋವಿಡ್ ಸೋಂಕಿನ ಬಳಿಕ ಹೊಸ ಸಮಸ್ಯೆ ಸೃಷ್ಟಿ: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ
’ ಬಾಸ್ಟನ್, ಫೆ.10: 2020ರಲ್ಲಿ ಕೋವಿಡ್-19 ಸೋಂಕಿಗೆ ಒಳಪಟ್ಟ ಮೂವರಲ್ಲಿ ಒಬ್ಬ ವಯಸ್ಕರಲ್ಲಿ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು ಇದಕ್ಕೆ ಆರಂಭಿಕ ಸೋಂಕಿನ ನಂತರದ ದಿನಗಳಲ್ಲಿ ವೈದ್ಯಕೀಯ ಆರೈಕೆ ಅಗತ್ಯವಾಗಿತ್ತು ಎಂದು ಹೊಸ ಅಧ್ಯಯನ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಹೃದಯ, ಕಿಡ್ನಿ, ಶ್ವಾಸಕೋಶ ಮತ್ತು ಯಕೃತ್ತು(ಲಿವರ್) ಸಹಿತ ಪ್ರಮುಖ ಅಂಗ ಹಾಗೂ ವ್ಯವಸ್ಥೆಗೆ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇದಾಗಿತ್ತು ಎಂದು ಅಮೆರಿಕದ ಆಪ್ಟಮ್ ಲ್ಯಾಬ್ಸ್ ಮತ್ತು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ಸಂಶೋಧಕರು ‘ದಿ ಬಿಎಂಜೆನಿಯತಕಾಲಿಕದಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
2020ರ ಎಪ್ರಿಲ್ 1ಕ್ಕೂ ಮುನ್ನದ ಕೋವಿಡ್-19 ಸೋಂಕಿಗೆ ಒಳಗಾದ 65 ವರ್ಷ ಮೀರಿದ 1,33,366 ವ್ಯಕ್ತಿಗಳ ಆರೋಗ್ಯ ವಿಮೆ ದಾಖಲೆಯನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. 2020, 2019ರಲ್ಲಿ ಕೋವಿಡ್ ಸೋಂಕಿಗೆ ಒಳಗಾದ 2 ವಿಭಾಗ ಮತ್ತು ಕಡಿಮೆ ತೀವ್ರತೆಯ ಸೋಂಕಿಗೆ ಒಳಗಾದ ವ್ಯಕ್ತಿಗಳ ವಿಭಾಗದ ಜತೆ 65 ವರ್ಷ ಮೀರಿದ ಸೋಂಕಿತರ ವಿವರವನ್ನು ಹೋಲಿಕೆ ಮಾಡಲಾಗಿದೆ. ಬಳಿಕ ಕೋವಿಡ್-19 ರೋಗನಿರ್ಣಯದ 21 ದಿನಗಳ ಬಳಿಕದ ನಿರಂತರ ಅಥವಾ ಹೊಸ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲಾಗಿದೆ. ವಯಸ್ಸು, ಜನಾಂಗ, ಲಿಂಗ, ಕೋವಿಡ್-19 ಸೋಂಕಿನಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎಂಬ ಅಂಶಗಳ ಆಧಾರದಲ್ಲಿ, ರೋಗದಿಂದ ಪ್ರಚೋದಿಸಲ್ಪಟ್ಟ ಪರಿಸ್ಥಿತಿ ಸೃಷ್ಟಿಸಿದ ಅಪಾಯವನ್ನು ಲೆಕ್ಕಹಾಕಲಾಗಿದೆ ಎಂದು ವರದಿ ಹೇಳಿದೆ.







