‘ಮನೆ-ಮನೆ ಪ್ರಚಾರವು ರೋಡ್ಶೋನಂತೆ ಕಾಣುತ್ತಿದೆ' ಎಂದು ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲಿಸಿದ ಉತ್ತರಪ್ರದೇಶ ಪೊಲೀಸರು

Photo:ANI
ಲಕ್ನೊ: ಮೊರಾದಾಬಾದ್ನಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಿಝ್ವಾನ್ ಖುರೇಷಿ ಅವರ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ "ರೋಡ್-ಶೋ ರೀತಿಯ ಪರಿಸ್ಥಿತಿ" ಕಂಡುಬಂದ ನಂತರ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ರಿಝ್ವಾನ್ ಖುರೇಷಿ ಮನೆ-ಮನೆ ಪ್ರಚಾರಕ್ಕೆ ಮಾತ್ರ ಅನುಮತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ಏಕೆ ಇದೇ ರೀತಿಯ ಪ್ರಕರಣಗಳನ್ನು ದಾಖಲಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.
Next Story





