Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತರಗತಿ ಮುಖ್ಯ, ಸಮವಸ್ತ್ರವಲ್ಲ

ತರಗತಿ ಮುಖ್ಯ, ಸಮವಸ್ತ್ರವಲ್ಲ

ಪರಿಣಿತಾ ಶೆಟ್ಟಿಪರಿಣಿತಾ ಶೆಟ್ಟಿ11 Feb 2022 11:42 AM IST
share
ತರಗತಿ ಮುಖ್ಯ, ಸಮವಸ್ತ್ರವಲ್ಲ

ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಕಲಿಸಿದ ಶಿಕ್ಷಕಿಯಾಗಿ ನಾನು ಇದನ್ನು ಬರೆಯತ್ತಿದ್ದೇನೆ. ಮಂಗಳೂರು ಕರ್ನಾಟಕದ ಕೋಮು ಧ್ರುವೀಕರಣಗೊಂಡ ಪ್ರದೇಶವಾಗಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ವಿಚಾರವಾಗಿ ಸಂಘರ್ಷಗಳು ನಡೆಯುತ್ತಿವೆ. ನನ್ನ ವಿದ್ಯಾರ್ಥಿಗಳು ವಿಭಿನ್ನ ಮತಗಳು, ಜಾತಿಗಳು ಮತ್ತು ದೇಶಗಳಿಗೆ ಸೇರಿದವರಾಗಿದ್ದಾರೆ. ಅವರು ವಿವಿಧ ಮಾತೃಭಾಷೆಗಳನ್ನು ಆಡುತ್ತಾರೆ, ಭಿನ್ನ ಆಹಾರಗಳನ್ನು ಸೇವಿಸುತ್ತಾರೆ ಮತ್ತು ಭಿನ್ನ ಬಟ್ಟೆ ಮತ್ತು ಆಭರಣಗಳನ್ನು ಧರಿಸುತ್ತಾರೆ. ಕೆಲವರು ತಮ್ಮ ಮದುವೆಯ ಗುರುತುಗಳನ್ನು ಧರಿಸುತ್ತಾರೆ, ಕೆಲವರು ತಮ್ಮ ಮತ ವಿಧಿಸುವ ಗುರುತುಗಳನ್ನು ಧರಿಸುತ್ತಾರೆ, ಕೆಲವರು ತಮ್ಮ ಭೌಗೋಳಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ಸೂಚಿಸುವ ಬಟ್ಟೆಗಳನ್ನು ಧರಿಸುತ್ತಾರೆ, ಕೆಲವರು ತಮ್ಮ ಧರ್ಮ ಮತ್ತು ಜಾತಿಯ ಸಂಕೇತಗಳನ್ನು ಧರಿಸುತ್ತಾರೆ ಹಾಗೂ ಎಲ್ಲರೂ ಲಿಂಗಕ್ಕೆ ಸಂಬಂಧಿಸಿದ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ನೋಟ, ನಂಬಿಕೆ, ಯೋಚನೆ, ಮಾತು ಮತ್ತು ಆಹಾರದಲ್ಲಿನ ಭಿನ್ನತೆಯು ತಾವು ಒಂದು ತರಗತಿ ಎನ್ನುವ ಸಮುದಾಯಕ್ಕೆ ಸೇರಿದವರು ಎನ್ನುವ ಅವರ ಭಾವನೆಯ ಮೇಲೆ ಪರಿಣಾಮ ಬಿರಿಲ್ಲ.

ಹಲವು ವಿಧಗಳಲ್ಲಿ, ಸರಕಾರಿ ಶಿಕ್ಷಣ ಸಂಸ್ಥೆಯೊಂದರ ತರಗತಿಯು ಅದಿರುವ ಸಮಾಜವನ್ನು ನೈಜವಾಗಿ ಪ್ರತಿನಿಧಿಸುತ್ತದೆ. ಯಾಕೆಂದರೆ, ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಸಂಸ್ಥೆಯು ತೆರೆದಿದೆ. ಅದೂ ಅಲ್ಲದೆ, ನಮ್ಮ ಸಮಾಜವು ಶ್ರೇಣೀಕೃತವಾಗಿ ರೂಪುಗೊಂಡಿದೆ ಹಾಗೂ ಶೋಷಿತ ಸಮುದಾಯಗಳ ಮಕ್ಕಳಿಗೆ ಹೆಚ್ಚುವರಿ ನೆರವು ಹಾಗೂ ತರಗತಿಗೆ ಹಾಜರಾಗಲು ವಿಶೇಷ ಒತ್ತು ನೀಡಬೇಕೆನ್ನುವುದನ್ನು ಅದು ಒಪ್ಪುತ್ತದೆ.

ಸರ್ವರನ್ನು ಸೇರಿಸಿಕೊಳ್ಳುವ ತರಗತಿಯೊಂದರ ಈ ಗುಣವು ಕಲಿಕಾ ಪ್ರಕ್ರಿಯೆಗೆ ಹೆಚ್ಚಿನ ದೇಣಿಗೆ ನೀಡುತ್ತದೆ. ವಿವಿಧ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳ ನಡುವೆ ಸಂಭಾಷಣೆ ಮತ್ತು ಚರ್ಚೆಗಳು ನಡೆಯುತ್ತವೆ. ಇದರ ಮೂಲಕ ವಿದ್ಯಾರ್ಥಿಗಳು ಯೋಚಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ವಿಭಿನ್ನ ಲಿಂಗ, ಜಾತಿ, ಮತ ಮತ್ತು ರಾಷ್ಟ್ರೀಯತೆಯ ಹಿನ್ನೆಲೆಯ ವಿದ್ಯಾರ್ಥಿಗಳ ನಡುವೆ ನಡೆಯುವ ಇಂಥ ಸಂಭಾಷಣೆಗಳೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಇಂಥ ಸಂಭಾಷಣೆಗಳ ಮೂಲಕವೇ ಶಿಕ್ಷಣವು ಎಲ್ಲ ಮಾನವರ ಸಾಮಾನ್ಯ ದೌರ್ಬಲ್ಯಗಳನ್ನು ಗುರುತಿಸುವ ಪ್ರಕ್ರಿಯೆಯಾಗುತ್ತದೆ.

ತರಗತಿಯು ವಿದ್ಯಾರ್ಥಿಗಳನ್ನು ಸಂಕುಚಿತ ಏಕ ನಿಯಮಕ್ಕೆ ಒಳಪಡಿಸಿದರೆ, ಕಲಿಕೆಯೆನ್ನುವುದು ದೇಹ ಮತ್ತು ಮನಸ್ಸುಗಳನ್ನು ಕಟ್ಟಿಹಾಕುವ ಪ್ರಕ್ರಿಯೆಯಂತಾಗುತ್ತದೆ. ತರಗತಿಯ ಏಕನಿಯಮವು ರಾಜಕೀಯ ವಿಚಾರಗಳಿಂದ ರೂಪುಗೊಂಡರೆ ಹಾಗೂ ರಾಜಕೀಯ ಅಧಿಕಾರದದ ಮೂಲಕ ಜಾರಿಗೊಂಡರೆ ಆಗ ಬೋಧನೆಯೆನ್ನುವುದು ಸಿದ್ಧಾಂತಗಳ ಹೇರಿಕೆಯಾಗುತ್ತದೆ ಹಾಗೂ ಕಲಿಕೆಯು ರಾಜಕೀಯ ಸಿದ್ಧಾಂತಗಳ ಗಿಳಿಪಾಠವಾಗುತ್ತದೆ.

ಶಿಕ್ಷಣವು ದ್ವೇಷದ ಅಧೀನಕ್ಕೆ ಒಳಪಟ್ಟಾಗ, ಜೀವನದ ಸೃಜನಾತ್ಮಕತೆ ಮತ್ತು ಆನಂದ ನಾಶವಾಗುತ್ತದೆ. ಸಮುದಾಯವೊಂದು ತನ್ನ ಭವಿಷ್ಯವನ್ನು ರೂಪಿಸುವ ಹಾಗೂ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುತ್ತದೆ ಹಾಗೂ ಅವರ ಮೇಲೆ ನಂಬಿಕೆಯಿಡುತ್ತದೆ. ಶಿಕ್ಷಕರು ಅಸಹಿಷ್ಣುತೆ ಮತ್ತು ರಾಜಕೀಯ ಹಿತಾಸಕ್ತಿಗಳ ದ್ವಾರಪಾಲಕರಾದರೆ, ಅವರು ಸಮುದಾಯದ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.

ತರಗತಿ ಕೋಣೆಯು ವಿದ್ಯಾರ್ಥಿಗಳನ್ನು ವಿಂಗಡಿಸಲು ಮತ್ತು ಹೊರಗಿಡಲು ತೊಡಗಿದಾಗ, ಅದು ಭವಿಷ್ಯದ ವಿವೇಕಹೀನ ದ್ವೇಷ ಮತ್ತು ವಿವೇಚನಾರಹಿತ ಕ್ರೌರ್ಯಕ್ಕೆ ಅಡಿಗಲ್ಲು ಹಾಕುತ್ತಿದೆ ಎಂದು ತಿಳಿಯಬೇಕು. ಪರಸ್ಪರ ದಯೆ ಮತ್ತು ಪ್ರೀತಿಯ ಮೂಲಕ ಮಾನವ ಕುಲವನ್ನು ಮುಂದುವರಿಸಿಕೊಂಡು ಹೋಗಲು ವಿವೇಕದ ಅಗತ್ಯವಿದೆ. ಆದರೆ, ಇಂಥ ತರಗತಿಗಳು ವಿವೇಕವನ್ನು ಕಳೆದುಕೊಂಡವರ ಪ್ರಯೋಗಾಲಯಗಳಾಗಿ ಮಾರ್ಪಡುತ್ತವೆ. ಇಂಥ ತರಗತಿಗಳಲ್ಲಿ, ವಿದ್ಯಾರ್ಥಿ ಗಳನ್ನು ಮತಗಳನ್ನಾಗಿ ಪರಿವರ್ತಿಸಲಾಗುತ್ತದೆ ಹಾಗೂ ಹೆಗಲಿಗೆ ಹಾಕಿಕೊಳ್ಳುವ ಶಾಲುಗಳು ಅಥವಾ ತಲೆಗೆ ಧರಿಸುವ ಬಟ್ಟೆಗಳ ಬಣ್ಣಗಳ ಮಟ್ಟಕ್ಕೆ ಅವರನ್ನು ಇಳಿಸಲಾಗುತ್ತದೆ. ಅವರಿಗೆ ದ್ವೇಷವನ್ನು ಕಲಿಸಲಾಗುತ್ತದೆ ಹಾಗೂ ಕೋಪದಿಂದ ಮಾಡುವ ಹಿಂಸೆಯ ತರಬೇತಿ ನೀಡಲಾಗುತ್ತದೆ. ಬಳಿಕ, ಏಕರೂಪಗೊಂಡ ದೇಹದ ಏಕರೂಪತೆಯನ್ನು ತೋರಿಸದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಬಾಗಿಲು ಹಾಕುತ್ತವೆ. ಹಾಗೂ , ತರಗತಿಯಲ್ಲಿ ಯೋಚಿಸುವ, ಅಚ್ಚರಿಪಡುವ ಮತ್ತು ಪ್ರಶ್ನಿಸುವ ಪ್ರಕ್ರಿಯೆಗಳನ್ನು ಮುಚ್ಚಿ ಹಾಕುತ್ತಾರೆ. ಬಳಿಕ ಶಿಕ್ಷಣ ಸಂಸ್ಥೆಗಳು ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಗಳನ್ನು ಮುಚ್ಚುತ್ತವೆ. ಸಮಾನ, ಸರ್ವರನ್ನೊಳಗೊಳ್ಳುವ, ಅನುಕಂಪಭರಿತ ಹಾಗೂ ಜಾಣ ಸಮಾಜವೊಂದನ್ನು ನಿರ್ಮಿಸಬಲ್ಲ ವಿಧಾನಗಳೊಂದಿಗೆ ಪರೀಕ್ಷೆ ಮಾಡುವ ಅವಕಾಶವೂ ಕೊನೆಗೊಳ್ಳುತ್ತದೆ.
ಹಾಗಾಗಿ, ತರಗತಿಗಳಲ್ಲಿ ಸಂಭಾಷಣೆಗಳನ್ನು ಆರಂಭಿಸುವುದು ಹಾಗೂ ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಪ್ರತಿನಿಧಿಸುವ ಧ್ವನಿಗಳಿಂದ ಬರುವ ಮಾತುಗಳನ್ನು ಕೇಳುವುದು ಅಗತ್ಯವಾಗಿದೆ.

ನನ್ನ ವಿದ್ಯಾರ್ಥಿಗಳೊಂದಿಗೆ ಸ್ನೇಹ ಸಂಪಾದಿಸಲು ನಾನು ಕಷ್ಟಪಟ್ಟಿದ್ದೇನೆ. ಅದಕ್ಕಾಗಿ ಕಲಿಸುವವರು ಮತ್ತು ಕಲಿಯುವವರು ಎಂಬ ತರಗತಿ ಕೋಣೆಯ ಶ್ರೇಣೀಕೃತ ವ್ಯವಸ್ಥೆಯನ್ನು ಮುರಿಯಬೇಕಾಗಿದೆ. ಅವರ ಧ್ವನಿಗಳಲ್ಲಿರುವ ವಿಭಿನ್ನ ಸಾಮಾಜಿಕ ಸ್ವರಗಳನ್ನು ಆಲಿಸಲು ಯತ್ನಿಸಿದ್ದೇನೆ. ನಾನು ಅವರ ಮಾತುಗಳನ್ನು ಅವರ ವ್ಯಾಕರಣದ ಮೂಲಕ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ, ನನ್ನ ವ್ಯಾಕರಣದ ಮೂಲಕ ಅಲ್ಲ. ನನ್ನ ವಿದ್ಯಾರ್ಥಿಗಳು ತಮ್ಮ ಹಿನ್ನೆಲೆಗಳನ್ನು ತರಗತಿಗೆ ತರುವ ಮೂಲಕ ನನಗೆ ಔದಾರ್ಯ ತೋರಿಸಿದ್ದಾರೆ.
ಜಾಗತಿಕ ವ್ಯವಸ್ಥೆಯನ್ನು ಕಲಿಯುವ ಪ್ರಕ್ರಿಯೆಯನ್ನು ನನ್ನೊಂದಿಗೆ ಹಂಚಿಕೊಂಡ ವಿದ್ಯಾರ್ಥಿಗಳ ಹಲವು ತಲೆಮಾರುಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಸಾಂಗತ್ಯ ಮತ್ತು ನಿಮ್ಮ ಮಾತುಗಳಿಲ್ಲದೆ ಇದನ್ನು ಮಾಡಲು ಯಾವತ್ತೂ ಸಾಧ್ಯವಾಗುತ್ತಿರಲಿಲ್ಲ. ನಾವು ಜೊತೆಯಾಗಿ ರೂಪಿಸಿದ ಈ ತರಗತಿಯನ್ನು ಎಲ್ಲಾ ರೀತಿಯ ಆಕ್ರಮಣಗಳಿಂದ ರಕ್ಷಿಸೋಣ ಹಾಗೂ ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವ ಜಗತ್ತು ಕುಸಿಯುತ್ತಿರುವಂತೆ ಕಂಡುಬಂದಿರುವ ಹೊರತಾಗಿಯೂ ನಮ್ಮ ಪ್ರಯತ್ನಗಳನ್ನು ಮುಂದುವರಿಸೋಣ.

ಕೃಪೆ: Indian Express

share
ಪರಿಣಿತಾ ಶೆಟ್ಟಿ
ಪರಿಣಿತಾ ಶೆಟ್ಟಿ
Next Story
X