Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾವೇರಿ-ಪೆನ್ನಾರ್ ಜೋಡಣೆ:...

ಕಾವೇರಿ-ಪೆನ್ನಾರ್ ಜೋಡಣೆ: ಇಂಜಿನಿಯರ್‌ಗಳು ಹೇಳಿದ್ದೇ ಸರಿಯೇ?

ಡಾ. ಡಿ.ಸಿ.ನಂಜುಂಡಡಾ. ಡಿ.ಸಿ.ನಂಜುಂಡ11 Feb 2022 12:51 PM IST
share
ಕಾವೇರಿ-ಪೆನ್ನಾರ್ ಜೋಡಣೆ: ಇಂಜಿನಿಯರ್‌ಗಳು ಹೇಳಿದ್ದೇ ಸರಿಯೇ?

ನದಿ ಜೋಡಣೆಯಿಂದ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ಸಹಾಯವಾಗುತ್ತದೆ ನಿಜ. ಆದರೆ ಭವಿಷ್ಯದಲ್ಲಿ ಉಂಟುಮಾಡುವ ಪರಿಸರ ಹಾನಿಗಳ ಕುರಿತು ಯೋಚನೆ ಮಾಡಲು ಯಾರ ಬಳಿಯೂ ಸಮಯವಿಲ್ಲ. ನಿಜ ಹೇಳಬೇಕೆಂದರೆ ನದಿಗಳ ಜೋಡಣೆ ಪ್ರಪಂಚದಲ್ಲಿ ಇದು ಮೊದಲನೆಯದಲ್ಲ, ಕೊನೆಯದೂ ಅಲ್ಲ. ಈಗಾಗಲೇ ಪ್ರಯತ್ನ ಯುರೋಪಿನ ಕೆಲವು ದೇಶಗಳಲ್ಲಿ ಮತ್ತು ಚೀನಾದಲ್ಲೂ ನಡೆಸಲಾಗಿದೆ. ಆದರೆ ಎಲ್ಲಿಯೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಚೀನಾ ದೇಶವು ಈಗಾಗಲೇ ಇಂತಹ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡಿದೆ. ಚೀನಾದ ಯಸ್ತಿಂಗ್ ನದಿಯ 25 ಶತಕೋಟಿ ವೆಚ್ಚದ ನದಿ ಯೋಜನೆ ಉದ್ಘಾಟನೆ ದಿನವೇ ಅಂತ್ಯವಾಯಿತು!

ಮೊನ್ನೆ ನಡೆದ ಬಜೆಟ್‌ನಲ್ಲಿ ಹೆಚ್ಚು ಸದ್ದು ಮಾಡಿದ್ದು ನದಿ ಜೋಡಣೆ ವಿಚಾರ ಮಾತ್ರ. ನದಿ ಜೋಡಣೆ ವಿಚಾರ ಬ್ರಿಟಿಷ್ ಕಾಲದಷ್ಟು ಹಳೆಯದು. ಈ ಬಾರಿಯ ಬಜೆಟ್‌ನಲ್ಲಿ ದೇಶದ ನದಿಗಳ ಜೋಡಣೆಗೆ ಹೆಚ್ಚುಕಡಿಮೆ 45 ಸಾವಿರ ಕೋಟಿ ರೂ.ಗಳನ್ನು ತೆಗೆದು ಇಡಲಾಗಿದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಯಿಂದ ಅತಿವೃಷ್ಟಿ-ಅನಾವೃಷ್ಟಿ ತಡೆಯುವಿಕೆ ಬಗ್ಗೆ ಬಹಳಷ್ಟು ನಂಬಿಕೆ ಇದ್ದರೂ ಪರಿಸರ ಮತ್ತು ತಾಂತ್ರಿಕ ದೃಷ್ಟಿಯಿಂದ ಇದು ಸಾಧ್ಯವೇ ಎನ್ನುವುದು ಈಗ ಮಿಲಿಯನ್ ಡಾಲರ್ ಪ್ರಶ್ನೆ. ಹಲವಾರು ಪ್ರಶ್ನೆಗಳು ಈ ಸಂಬಂಧ ಕೋರ್ಟಿನಲ್ಲಿವೆ. ನದಿ ಜೋಡಣೆಗಳ ಮೂಲ ಹೆಸರೇ ಗಂಗಾ-ಕಾವೇರಿ ಯೋಜನೆ. ಅಂದು ಮೂರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿದ್ದಾಗ ಯೋಚನೆ ಮಾಡಿದ್ದು ಗಂಗಾ-ಬ್ರಹ್ಮಪುತ್ರ-ಕಾವೇರಿಯನ್ನು ಜೋಡಿಸುವ ಯೋಜನೆ. ದೇಶದ ಬೇರೆ ನದಿಗಳ ವಿಚಾರಕ್ಕಿಂತ ಕರ್ನಾಟಕದಲ್ಲಿ ಕಾವೇರಿ-ಪೆನ್ನಾರ್ ನದಿ ಜೋಡಣೆ ಬಗ್ಗೆ ತಜ್ಞರು, ಜನಸಾಮಾನ್ಯರು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಬ್ರಿಟಿಷ್ ಇಂಜಿನಿಯರ್ ಅರ್ಥರ್ ಕಾಟನ್ 1900ರ ಆದಿಭಾಗದಲ್ಲಿ ಭಾರತದ ನದಿಗಳ ಜೋಡಣೆ ಬಗ್ಗೆ ಮೊದಲ ಸಲ ಮಾತನಾಡಿದರು. 1970ರಲ್ಲಿ ನೀರಾವರಿ ತಜ್ಞ ರಾವ್ ರಾಷ್ಟ್ರೀಯ ವಾಟರ್ ಗ್ರಿಡ್ ಪರಿಕಲ್ಪನೆಯನ್ನು ಹರಿಬಿಟ್ಟರು. ಮುಂದೆ 1980 ಮತ್ತು 1982ರಲ್ಲಿ ವಿಶೇಷ ಸಮಿತಿಗಳನ್ನು ಈ ಸಂಬಂಧ ರಚಿಸಲಾಯಿತು. ಆದರೂ 2003ರವರೆಗೆ ದೇಶದ ಯಾವುದೇ ಸರಕಾರಗಳು ಈ ಕುರಿತು ಮಾತನಾಡಲಿಲ್ಲ. ಆನಂತರ ಬಂದ ಸರಕಾರಗಳು ಹಲವಾರು ಸಮಿತಿಗಳನ್ನು ನೇಮಿಸಿ ದೇಶದ ನದಿಗಳ ಬಗ್ಗೆ ವಿಸ್ತೃತ ವರದಿಯನ್ನು ಪಡೆದರೂ ಯಾವ ವರದಿಗಳು ಸಹ ಪರಿಸರ-ಆರ್ಥಿಕ-ತಾಂತ್ರಿಕವಾಗಿ ನೂರಕ್ಕೆ ನೂರು ಸರಿ ಇರಲಿಲ್ಲ. ಒಂದು ಕಡೆ ಪರಿಸರವಾದಿಗಳು ಹೋರಾಟ ಆರಂಭಿಸಿದರು. ಇನ್ನೊಂದೆಡೆ ಸರಕಾರಗಳು ಗೊಂದಲಕ್ಕೆ ಬಿದ್ದವು. ಈಗ ಗೊಂದಲಗಳು ಕಳವಳಗಳಾಗಿ ಮಾರ್ಪಟ್ಟಿವೆ. ಸದ್ಯ ದೇಶದ ನದಿಗಳ ಜೋಡಣೆ ವಿಚಾರದಲ್ಲಿ ಒಟ್ಟು 55 ನದಿಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ 13,000 ಕಿಲೋಮೀಟರ್ ಉದ್ದದ ಕಾಲುವೆಗಳನ್ನು ಕೊರೆಯಬೇಕಾಗುತ್ತದೆ. ನೀರು ಸಂಗ್ರಹಣೆಗೆ ಹೆಚ್ಚು ಕಡಿಮೆ 40 ಅಣೆಕಟ್ಟುಗಳನ್ನು ಹೊಸದಾಗಿ ಕಟ್ಟಬೇಕಾಗುತ್ತದೆ. ಕೆಲವು ಅಣೆಕಟ್ಟುಗಳನ್ನು ಒಡೆಯಬೇಕಾಗುತ್ತದೆ. ಇದರಿಂದ ಉಂಟಾಗುವ ಪರಿಸರ ನಾಶದ ಬಗ್ಗೆ ಒಮ್ಮೆ ಊಹಿಸಿಕೊಳ್ಳಿ. ವಿಪರೀತ ಹವಮಾನ ವೈಪರೀತ್ಯಕ್ಕೆ ಒಳಗಾಗಿರುವ ದೇಶ ಇದನ್ನು ತಡೆದುಕೊಳ್ಳಬಲ್ಲದು ಎಂದನಿಸುತ್ತದೆಯೇ?

      ಈಗ ರಾಜ್ಯದ ಕಾವೇರಿ-ಪೆನ್ನಾರ್ ಸಂಯೋಜನೆ ಕುತೂಹಲಕಾರಿ ಘಟ್ಟಕ್ಕೆ ಬಂದುನಿಂತಿದೆ. ಈ ಜೋಡಣೆಯಿಂದ ಒಟ್ಟು 347 ಟಿಎಂಸಿ ನೀರು ಸಿಗುತ್ತದೆ ಎನ್ನುವ ಅಂದಾಜಿದೆ. ಇದು ಕೇವಲ ಅಂದಾಜು ಮಾತ್ರ. ಈ 347 ಟಿಎಂಸಿ ಹೆಚ್ಚುವರಿ ನೀರನ್ನು ಪಡೆಯಲು ದಕ್ಷಿಣದ ಐದು ರಾಜ್ಯಗಳು ಪುನಃ ಹೋರಾಡಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಾವೇರಿ-ಪೆನ್ನಾರ್ ಜೋಡಣೆ ಎರಡು ಹಂತದಲ್ಲಿ ನಡೆಯಬೇಕಾಗುತ್ತದೆ. ಮೊದಲು ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಆಂಧ್ರ ಪ್ರದೇಶದ ನಾಗಾರ್ಜುನ ಅಣೆಕಟ್ಟಿಗೆ ತರಬೇಕು. ನಂತರ ಭಾರೀ ಸರ್ಕಸ್ ಮಾಡಿ ಅದನ್ನು ಕೃಷ್ಣಾನದಿಗೆ ಸೇರಿಸಬೇಕು. ಆಮೇಲೆ ಉತ್ತರ ಪಿನಾಕಿನಿ (ಪೆನ್ನಾರ್) ನದಿಗೆ ಕಟ್ಟಿರುವ ಸೋಮಸಿಲ ಅಣೆಕಟ್ಟಿಗೆ ಆ ನೀರನ್ನು ತಂದು ಕೊನೆಗೆ ಅದನ್ನು ತಿರುಚಿರಾಪಳ್ಳಿಯಲ್ಲಿ ಇರುವ ಗ್ರಾಂಡ್ ಅಣೆಕಟ್ಟಿಗೆ ಸೇರಿಸಬೇಕು (ಈ ಗ್ರಾಂಡ್ ಅಣೆಕಟ್ಟಿನ ಆಯಸ್ಸು ಈಗಾಗಲೇ ಮುಗಿದುಹೋಗಿದೆ). ಅಂತಿಮವಾಗಿ ಇದೇ ನೀರನ್ನು ಕಾವೇರಿಗೆ ಜೋಡಿಸಬೇಕು. ನಿಜವಾಗಿಯೂ ಇದೆಲ್ಲವೂ ತಾಂತ್ರಿಕವಾಗಿ ಸಾಧ್ಯವೇ ಎನ್ನುವುದನ್ನು ಆ ದೇವರೇ ಹೇಳಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಗೋದಾವರಿಯ ಹೆಚ್ಚುವರಿ ನೀರನ್ನು ಗುರುತ್ವಾಕರ್ಷಣೆ ತಂತ್ರಜ್ಞಾನದ ಮೂಲಕ ಮಹಾರಾಷ್ಟ್ರದ ನಾಸಿಕ್‌ನಿಂದ ತಂದು ದೂದ್ ಗಂಗಾ ಬಳಿ ಅದನ್ನು ಕೃಷ್ಣ ನದಿಗೆ ಸೇರಿಸಬೇಕಾಗುತ್ತದೆ. ಕೋಲಾರದ ಮುಳಬಾಗಿಲಿನಿಂದ ಸುಮಾರು 27 ಕಿಲೋಮೀಟರ್ ದೂರದಲ್ಲಿ ಕೃಷ್ಣಾ ನದಿಯನ್ನು ಪೆನ್ನಾರ್ ನದಿಗೆ ಸೇರಿಸಬೇಕಾಗುತ್ತದೆ. ಕಾವೇರಿಯನ್ನು ಅಲ್ಲೇ ಸೇರಿಸಬೇಕಾಗುತ್ತದೆ. ಕೆಲವರ ಪ್ರಕಾರ ಅಂತಿಮವಾಗಿ ಹೆಚ್ಚುವರಿ ನೀರು ಮೊದಲು ತಮಿಳುನಾಡಿಗೆ ಸೇರುತ್ತದೆ ಅಂದರೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಮೊದಲ ಅವಕಾಶ ಪಡೆಯುವುದು ತಮಿಳುನಾಡು ಮಾತ್ರ. ಹಾಗಾಗಿ ತಜ್ಞರ ಪ್ರಕಾರ ಈ ಯೋಜನೆಯಿಂದ ತಮಿಳುನಾಡಿಗೆ ಲಾಭ ಹೊರತು ಕರ್ನಾಟಕಕ್ಕೆ ಹೆಚ್ಚಿನದು ಸಿಗುವುದಿಲ್ಲ. ಅಲ್ಲದೆ ಕೃಷ್ಣ ನದಿಯ ಹೆಚ್ಚುಪಾಲು ಆಂಧ್ರಕ್ಕೆ ದಕ್ಕುವುದರಿಂದ ಈ ಹೊಸ ಜೋಡಣೆಯಿಂದ ಆಂಧ್ರ ಮತ್ತೆ ತೆಲಂಗಾಣ ರಾಜ್ಯಗಳಿಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಇದರ ಇನ್ನೊಂದು ಭಾಗವನ್ನು ನೋಡುವುದಾದರೆ ಪೆನ್ನಾರ್ ದಕ್ಷಿಣಭಾರತದ ಒಂದು ಸಾಧಾರಣ ನದಿಯಾಗಿದೆ. ಇದು ಒಟ್ಟು 600 ಕಿಲೋಮೀಟರ್ ಹರಿಯುತ್ತದೆ. ಪೆನ್ನಾರ್ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದರೂ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಈ ನದಿ ಹರಿಯುವುದೇ ಹೆಚ್ಚುಕಡಿಮೆ ಕೇವಲ 30-40 ಕಿಲೋಮೀಟರ್ ಮಾತ್ರ. ಇನ್ನೂ ಕೆಲವು ಆಧಾರಗಳ ಪ್ರಕಾರ ಕರ್ನಾಟಕದಲ್ಲಿ ಪೆನ್ನಾರ್ ನದಿ ಹರಿಯುವುದು ಕೇವಲ ಇಪ್ಪತ್ತೈದು ಕಿಲೋಮೀಟರ್ ಮಾತ್ರ. ಮುಂದೆ ಇದು ತುಮಕೂರಿನ ಪಾವಗಡ ದಲ್ಲಿ ಸ್ವಲ್ಪಹರಿದು ಆಂಧ್ರಪ್ರದೇಶದ ನೆಲ್ಲೂರು ಸೇರಿಕೊಂಡು ಕೊನೆಗೆ ಬಂಗಾಳಕೊಲ್ಲಿಯಲ್ಲಿ ವಿಲೀನವಾಗುತ್ತದೆ. ತಜ್ಞರ ಪ್ರಕಾರ ಪೆನ್ನಾರ್‌ನ್ನು ಕಾವೇರಿಗೆ ಸೇರಿಸುವ ಸ್ಥಳಗಳಲ್ಲಿ ನೀರಾವಿಯನ್ನು ತಡೆಯಲು ನೀರನ್ನು ಸ್ಟೀಲ್‌ಕೊಳವೆ ಮೂಲಕ ಹರಿಸುವ ಯೋಜನೆ ಇದೆಯಂತೆ.

  ನೀವು ದೇಶದ ಭೂಪಟವನ್ನು ಗಮನಿಸಿದರೆ ರಾಜಸ್ಥಾನ ಬಿಟ್ಟರೆ, ಕರ್ನಾಟಕ ಎರಡನೆಯ ಒಣಭೂಮಿ ಇರುವ ಪ್ರದೇಶವಾಗಿದೆ. ಕರ್ನಾಟಕದಲ್ಲಿ ಶೇ. 70ರಷ್ಟು ಭಾಗ ಒಣ ಭೂಮಿ ಇದೆ. ರಾಜ್ಯದಲ್ಲಿ ಹಲವು ನದಿಗಳಿದ್ದರೂ ಹೇಳಿಕೊಳ್ಳುವಂತಹ ಪ್ರಯೋಜನವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಶೇ. 50 ನೀರಾವರಿ ಮಾಡಿದರೆ ನಮ್ಮ ರಾಜ್ಯದಲ್ಲಿ ಅದರ ಪ್ರಮಾಣ ಕೇವಲ ಶೇ. 32. ಈಗಾಗಲೇ ರಾಜ್ಯಕ್ಕೆ ನಿಗದಿಪಡಿಸಿರುವ ಕೃಷ್ಣಾ ಮತ್ತು ಕಾವೇರಿ ನದಿಯ ನೀರನ್ನು ಬಿಟ್ಟು ಈ ಹೊಸ ಜೋಡಣೆಯಿಂದ ರಾಜ್ಯಕ್ಕೆ ಸಿಗುವ ಹೆಚ್ಚುವರಿ ನೀರಿನ ಕುರಿತು ಯಾರಿಗೂ ಸರಿಯಾದ ಅಂದಾಜಿಲ್ಲ. ಆದರೆ ಈ ಯೋಜನೆಯಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಗೆ ಈಗಾಗಲೇ ಸಿಗುವ ಹೆಚ್ಚುವರಿ ಟಿಎಂಸಿ ನೀರನ್ನು ಕೇಂದ್ರ ನಿಗದಿಪಡಿಸಿದೆ. ಎಲ್ಲಾ ಕೇಂದ್ರ ಸರಕಾರಗಳಿಗೂ ಕರ್ನಾಟಕ ಒಂದು ರೀತಿ ಮಲತಾಯಿ ಇದ್ದಂತೆ. ಹಾಗಾಗಿ ರಾಜ್ಯದ ಪಾಲು ಇನ್ನು ಸರಿಯಾಗಿ ನಿಗದಿಯಾಗಿಲ್ಲ. ಡಿಪಿಆರ್‌ನಲ್ಲೂ ಸ್ಪಷ್ಟ ಉಲ್ಲೇಖವಿಲ್ಲ. ಒಂದೊಮ್ಮೆ ಈ ಯೋಜನೆ ಜಾರಿಗೆ ಬಂದರೆ ರಾಜ್ಯಕ್ಕೆ ಹೆಚ್ಚು ಕಡಿಮೆ 75 ಟಿಎಂಸಿಗಿಂತ ಹೆಚ್ಚಿನ ನೀರು ಸಿಗಬೇಕಾಗುತ್ತದೆ ಎನ್ನುತ್ತಾರೆ ರಾಜ್ಯದ ನೀರಾವರಿ ತಜ್ಞರು. ಆದರೆ ಈ ಸಂಬಂಧ ಕೇಂದ್ರ ಬಾಯಿಬಿಡುತ್ತಿಲ್ಲ. ಇಲ್ಲೇ ಸಂಶಯ ಮೂಡುವುದು. ಡಿಪಿಆರ್ ರಚನೆಗೆ ಮುಂಚೆಯೇ ಕರ್ನಾಟಕ ಕೇಂದ್ರದ ಮುಂದೆ ಹಠಹಿಡಿದು ಕೂರಬೇಕಾಗುತ್ತದೆ. ವರ್ಷದಿಂದ ವರ್ಷಕ್ಕೆ ಮಳೆ ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ಇಂತಿಷ್ಟು ಟಿಎಂಸಿ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಇದೇ ರೀತಿ ರಾಜ್ಯದಲ್ಲಿ ನೇತ್ರಾವತಿ -ಹೇಮಾವತಿ, ವರದಾ-ಬೇಡ್ತಿ ನದಿಗಳ ಜೋಡಣೆ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಹೇಮಾವತಿ-ನೇತ್ರಾವತಿ ಯೋಜನೆ ಅಂತಿಮ ಡಿಪಿಆರ್ ಸಿದ್ಧಗೊಂಡಿದೆ ಎಂದು ಹೇಳಲಾಗುತ್ತಿದೆ. ಹೇಮಾವತಿಯನ್ನು ಎತ್ತಿನಹೊಳೆ ಯೋಜನೆಗೆ ಸೇರಿಸಲಾಗುತ್ತಿದೆ. ವರದಾ-ಬೇಡ್ತಿ ಯೋಜನೆ ಬಗ್ಗೆ ಇನ್ನಷ್ಟು ವಿಸ್ತೃತ ವರದಿ ಬರಬೇಕಾಗಿದೆ. ಬೇಡ್ತಿ ನದಿಯ ಒಂದು ಸಮಸ್ಯೆಯೆಂದರೆ ಅದು ಮಳೆಗಾಲದಲ್ಲಿ ಮಾತ್ರ ತುಂಬಿಹರಿಯುವ ನದಿ.

   ನದಿ ಜೋಡಣೆಯಿಂದ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ಸಹಾಯವಾಗುತ್ತದೆ ನಿಜ. ಆದರೆ ಭವಿಷ್ಯದಲ್ಲಿ ಉಂಟುಮಾಡುವ ಪರಿಸರ ಹಾನಿಗಳ ಕುರಿತು ಯೋಚನೆ ಮಾಡಲು ಯಾರ ಬಳಿಯೂ ಸಮಯವಿಲ್ಲ. ನಿಜ ಹೇಳಬೇಕೆಂದರೆ ನದಿಗಳ ಜೋಡಣೆ ಪ್ರಪಂಚದಲ್ಲಿ ಇದು ಮೊದಲನೆಯದಲ್ಲ, ಕೊನೆಯದೂ ಅಲ್ಲ. ಈಗಾಗಲೇ ಪ್ರಯತ್ನ ಯುರೋಪಿನ ಕೆಲವು ದೇಶಗಳಲ್ಲಿ ಮತ್ತು ಚೀನಾದಲ್ಲೂ ನಡೆಸಲಾಗಿದೆ. ಆದರೆ ಎಲ್ಲಿಯೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಚೀನಾ ದೇಶವು ಈಗಾಗಲೇ ಇಂತಹ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡಿದೆ. ಚೀನಾದ ಯಸ್ತಿಂಗ್ ನದಿಯ 25 ಶತಕೋಟಿ ವೆಚ್ಚದ ನದಿ ಯೋಜನೆ ಉದ್ಘಾಟನೆ ದಿನವೇ ಅಂತ್ಯವಾಯಿತು! ಈ ಯೋಜೆನೆಗಾಗಿ ಕೆಲವು ದೇಶಗಳಲ್ಲಿ ಹಳೆಯ ಅಣೆಕಟ್ಟುಗಳನ್ನು ಒಡೆದು ಹಾಕಲಾಗುತ್ತಿದೆ. ಯುರೋಪಿನಲ್ಲಿ ಈ ಪ್ರಯತ್ನದಿಂದ ನದಿಗಳ ಮುಖಜಭೂಮಿಯ ವಿಸ್ತರಣೆ ಕಡಿಮೆಯಾಗಿದೆ. ಜೀವಸಂಕುಲಗಳು ಅಪಾಯಕ್ಕೆ ಸಿಲುಕಿವೆ.

  ನದಿಯ ಹೆಚ್ಚುವರಿ ನೀರು ಸಮುದ್ರ ಸೇರಿ ನಷ್ಟವಾಗುತ್ತದೆ ಎನ್ನುವ ಪರಿಕಲ್ಪನೆ ತಪ್ಪು ಮತ್ತು ಹೆಚ್ಚುವರಿ ನೀರು ಎಂಬುವುದೇ ಇಲ್ಲಿ ತಪ್ಪುಕಲ್ಪನೆ ಎಂಬುದು ವಿಜ್ಞಾನಿಗಳ ವಾದ. ನದಿಯು ಸಮುದ್ರ ಸೇರುವ ಅಷ್ಟು ಉದ್ದಕ್ಕೂ ಜೀವ ಸಂಕುಲಗಳ ಚೈತನ್ಯದ ಮಾರ್ಗವಾಗಿರುತ್ತದೆ. ರಶ್ಯದ ಅರುಲ್ ಸಮುದ್ರ ಈಗ ಹೇಗಿದೆ ಗೊತ್ತಾ? ಈ ಸಮುದ್ರವನ್ನು ಸೇರುತ್ತಿದ್ದ ಎರಡು ನದಿಗಳನ್ನು ರಶ್ಯ ಸಂಯೋಜನೆ ಮಾಡಿದ 30 ವರ್ಷಗಳ ನಂತರ ಸುಮಾರು 40 ಕಿಲೋಮೀಟರ್‌ನಷ್ಟು ದೂರ ಅರುಲ್ ಸಮುದ್ರ ಬತ್ತಿ ಹೋಗಿದೆ ಎನ್ನುವ ವರದಿ ಬಂದಿದೆ. ಅಂದರೆ ನದಿಯ ನೀರು ಸಮುದ್ರವನ್ನು ಸೇರುವುದನ್ನು ತಪ್ಪಿಸಿದರೆ ಒಂದು ದಿನ ಸಮುದ್ರದ ನೀರು ಸಹ ಬತ್ತುವ ಸಾಧ್ಯತೆ ಇರುತ್ತದೆ. ಇದರಿಂದ ಭೂಮಿಯ ಋತುಮಾನಗಳ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಭೌಗೋಳಿಕವಾಗಿ ದಕ್ಷಿಣ ಭಾರತವು ಉತ್ತರ ಭಾರತಕ್ಕಿಂತ ಎತ್ತರದ ಪ್ರದೇಶದಲ್ಲಿರುವುದರಿಂದ ಉತ್ತರದಿಂದ ದಕ್ಷಿಣದ ನದಿಗಳನ್ನು ಜೋಡಿಸಲು ಸಾಧ್ಯವಿಲ್ಲ ಎನ್ನುವುದು ವಿದೇಶಿ ಇಂಜಿನಿಯರ್‌ಗಳ ಅಭಿಪ್ರಾಯ. ತಜ್ಞರ ಪ್ರಕಾರ ಇಂತಹ ಪರಿಸರ ವಿರೋಧಿ ಕೆಲಸಗಳನ್ನು ಕೈಬಿಟ್ಟು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ. ಈಗ ಇರುವ ಜಲಸಂಪನ್ಮೂಲಗಳನ್ನು ನಾವು ಜೋಪಾನವಾಗಿ ಬಳಸಬೇಕು. ದೇಶದ ಸಾಂಪ್ರದಾಯಿಕ ಭಗೀರಥರು ಉದಾಹರಣೆಗೆ ರಾಜಸ್ಥಾನದ ಲಕ್ಷ್ಮಣ ಸಿಂಗ್ ಮತ್ತು ದಕ್ಷಿಣ ಕನ್ನಡದ ಇತ್ತೀಚಿನ ಪದ್ಮಶ್ರೀ ವಿಜೇತ ಅಮೈ ಮಹಾಲಿಂಗ ನಾಯ್ಕ ಮಾಡುತ್ತಿರುವ ಪ್ರಯತ್ನಗಳನ್ನು ಸರಕಾರ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಯಾವಾಗಲೂ ನೀರು ಇಳಿಜಾರಿನತ್ತ ಮಾತ್ರ ಹರಿಯಬೇಕು; ಇಂಜಿನಿಯರ್‌ಗಳು ಹೇಳಿದ ಹಾಗಲ್ಲ ಅಲ್ಲವೇ?

(ಆಧಾರ: ವಿವಿಧ ವರದಿಗಳಿಂದ)

share
ಡಾ. ಡಿ.ಸಿ.ನಂಜುಂಡ
ಡಾ. ಡಿ.ಸಿ.ನಂಜುಂಡ
Next Story
X