Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವೀರ ಕೇಸರಿಗಳೇ ಈಗಲಾದರೂ...

ವೀರ ಕೇಸರಿಗಳೇ ಈಗಲಾದರೂ ಅರ್ಥಮಾಡಿಕೊಳ್ಳುವಿರಾ?

ಶಿವಸುಂದರ್ಶಿವಸುಂದರ್11 Feb 2022 3:52 PM IST
share
ವೀರ ಕೇಸರಿಗಳೇ ಈಗಲಾದರೂ ಅರ್ಥಮಾಡಿಕೊಳ್ಳುವಿರಾ?

ನಿಮ್ಮ ನಿರುದ್ಯೋಗಿ ಅಣ್ಣನ ಕೊರಳಿಗೆ ಉರುಳುಹಾಕಿದ ಹಿಂದೂ ಬಂಧು ಯಾರೆಂದು ಕೇಳುವಿರಾ?

- ಮೊನ್ನೆ ಸಂಸತ್ತಿನಲ್ಲಿ ಮೋದಿ ಸರಕಾರದ ಜೂನಿಯರ್ ಗೃಹಮಂತ್ರಿ ನಿತ್ಯಾನಂದ ರಾಯ್ ಸಂಸತ್ತಿಗೆ ಕೊಟ್ಟಿರುವ ಉತ್ತರದ ಪ್ರಕಾರ:

ಕೋವಿಡ್ ಕಾಲಘಟ್ಟದಲ್ಲಿ ಈ ದೇಶದಲ್ಲಿ 25,000ಕ್ಕೂ ಹೆಚ್ಚು ನಿರುದ್ಯೋಗಿಗಳು, ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಿಗಳು ಮೋದಿ ಸರಕಾರದ ಲಾಕ್‌ಡೌನ್ ‘ಮಾಸ್ಟರ್ ಸ್ಟ್ರೋಕ್’ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಶೇ. 95ರಷ್ಟು ಜನರಾದರೂ ಹಿಂದೂಗಳೇ ಆಗಿದ್ದಾರೆ.

The Telegraph -ಇತ್ತೀಚಿನ ವರದಿಯ ಪ್ರಕಾರ 2018-20ರ ನಡುವೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅತಿ ಹೆಚ್ಚು ಜನ ನಿರುದ್ಯೋಗಿಗಳು..

ಅದರ ಪ್ರಕಾರ 2018ರಲ್ಲಿ 2,741 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ.. 2020ರ ‘ಲಾಕ್ ಡೌನ್ ಸುವರ್ಣ ಯುಗ’ದ ಅವಧಿಯಲ್ಲಿ 3,548 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

5,213 ಸಣ್ಣಪುಟ್ಟ ಉದ್ಯಮಿ ಬಂಧುಗಳೂ ಲಾಕ್‌ಡೌನ್ ಸುಖ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

(https://epaper.telegraphindia.com/imageview/386411/165044374/71.html)

ಮೋದಿ ಸರಕಾರದ ಮತ್ತೊಂದು ವರದಿಯ ಪ್ರಕಾರ:

ಹಿಂದೂ ಹೃದಯ ಸಾಮ್ರಾಟ ಮೋದಿ ಪ್ರಧಾನಿಯಾದ ನಂತರ 2016- 2020ರ ಅವಧಿಯಲ್ಲಿ 45,406 ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಅವರಲ್ಲಿ 29,000 ದಷ್ಟು ದೇಶ ಬಂಧುಗಳು ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದವರು. 16,565 ಬಂಧುಗಳು ನಿರುದ್ಯೋಗಿಗಳು.

ಕಾರಣ ದೇಶಬಂಧು, ಹಿಂದೂ ಹೃದಯ ಸಾಮ್ರಾಟ ಮೋದಿಯವರು ದೇಶದ ಮೇಲೆ ಮಾಡಿದ ಮೂರು ಮಹಾನ್ ‘ಮಹಾನ್ ಸ್ಟ್ರೋಕ್’ಗಳು:

1. 2016ರ ನೋಟು ನಿಷೇಧ, 2. 2017ರ ಜಿಎಸ್‌ಟಿ ಮತ್ತು 3. 2020ರ ಲಾಕ್‌ಡೌನ್

(https://timesofindia.indiatimes.com/city/bengaluru/2020-stats-30-suicides/day-due-to-poverty-unemployment/articleshow/87749894.cms)

ಅವರಲ್ಲಿ ಬಹುಪಾಲು ಯುವಕ-ಯುವತಿಯರು ನಿಮ್ಮಂತೆ ಕೇಸರಿ ಶಾಲು ಹೊದ್ದುಕೊಂಡು, ಮೋದಿ ಸರಕಾರ ಹಿಂದೂಗಳ ಸುವರ್ಣ ಯುಗವನ್ನು ಸಾಕಾರ ಮಾಡುತ್ತದೆಂದೂ, ಬ್ಯಾಂಕ್ ಅಕೌಂಟಿಗೆ 15 ಲಕ್ಷ ರೂ. ಹಾಕದಿದ್ದರೂ ಉದ್ಯೋಗ ದಯಪಾಲಿಸುತ್ತಾರೆಂದು ಕನಸು ಕಂಡವರೇ ಆಗಿದ್ದರು..

ಅಷ್ಟು ಮಾತ್ರವಲ್ಲ Centre For Monitoring Indian Economy (CMIE) ಎಂಬ ಸ್ವತಂತ್ರ ಸಂಸ್ಥೆಯ ಅಧಿಕೃತ ಅಧ್ಯಯನದ ಪ್ರಕಾರ ಮೋದಿ ಸರಕಾರದ ಅಮೃತಮಯಿ ಆರ್ಥಿಕ ನೀತಿಗಳಿಂದಾಗಿ ಕಳೆದ ಎರಡು ವರ್ಷದಲ್ಲಿ 4.6 ಕೋಟಿ ದೇಶಬಂಧುಗಳು ಹೊಸದಾಗಿ ಬಡತನದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಅವರಲ್ಲಿ ನಿಮ್ಮ ಕುಟುಂಬಗಳು ಇರಬಹುದೇ? ಯಾವಾಗಲಾದರೂ ಕೇಸರಿ ಶಾಲು ತೆಗೆದಿಟ್ಟಾಗ... ಮನೆಯವರಿಗೆ ಮೂರು ಹೊತ್ತು ಊಟ ಹೊಂಚಲು ಮೊದಲಿಗಿಂತ ಹೆಚ್ಚು ಪರದಾಡುತ್ತಿರುವ ನಿಮ್ಮ ಅಪ್ಪ-ಅಮ್ಮಂದಿರನ್ನೋ, ಅಣ್ಣ-ಅಕ್ಕಂದಿರನ್ನೋ ಕೇಳಿ ನೋಡಿ...

(https://www.cmie.com/kommon/bin/sr.php?kall=warticle&dt=2021-05-06 11:53:48&msec=653)

ಆದರೆ ಅದೇ ಸಮಯದಲ್ಲಿ ಈ ದೇಶದ ನೂರು ಕೋಟಿ ಶ್ರೀಮಂತ ಮೋದಿಯ ಆಪ್ತ ಹಿಂದೂ ಬಂಧುಗಳು ಮಾತ್ರ ರೂ. 32 ಲಕ್ಷ ಕೋಟಿಗೂ ಹೆಚ್ಚು ಲಾಭವನ್ನು ಗಳಿಸಿದ್ದಾರೆ.

(https://www.business-standard.com/article/current-affairs/india-s-billionaire-count-at-142-in-2021-84-households-see-income-decline-122011700601_1.html)

ಮತ್ತೊಂದು ಕಡೆ ಈ ಬಜೆಟ್‌ನಲ್ಲಿ ಅಲ್ಪಸ್ವಲ್ಪಉದ್ಯೋಗ ನೀಡುತ್ತಿದ್ದ MNREGA ದಂಥ ಯೋಜನೆಗಳಿಗೆ, ಪಡಿತರ ಯೋಜನೆಗೆ ಹೋದ ವರ್ಷಕ್ಕಿಂತ ಶೇ. 30-40 ರಷ್ಟು ಬಜೆಟ್ ಕಡಿತವನ್ನು ದೇಶಬಂಧು ಮೋದಿ ಮಾಡಿದ್ದಾರೆ.

ಅದೇ ಸಮಯದಲ್ಲಿ ದೇಶಬಂಧು ಅದಾನಿ ಮತ್ತು ಅಂಬಾನಿ ಬಂಧುಗಳ ಆಸ್ತಪಾಸ್ತಿಗಳನ್ನು ಮತ್ತಷ್ಟು ಹೆಚ್ಚಿಸುವ ರಸ್ತೆ-ಬಂದರು ಯೋಜನೆಗೆ 1.5 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಕೊಡಲಾಗಿದೆ.

ಸಾಲದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಬಂಧು ಕೊಳ್ಳಲು ಹಿಂದುಮುಂದೆ ನೋಡಿದಾಗ ಅದರ ಮೇಲಿದ್ದ 65,000 ಕೋಟಿ ಸಾಲವನ್ನು ಈ ದೇಶದ ಸಾಮಾನ್ಯ ಬಂಧುಗಳ ಮೇಲೆ ವರ್ಗಾಯಿಸಿ ದೇಶಬಂಧು ಟಾಟಾಗೆ ಏರ್ ಇಂಡಿಯಾ ಮಾರಲಾಗಿದೆ.

ಅದನ್ನು ಕೊಳ್ಳಲು ಬೇಕಿದ್ದ ಹಣವನ್ನು ದೇಶದ ಬ್ಯಾಂಕುಗಳಲ್ಲಿ ದೇಶದ ಬಡಬಂಧುಗಳು ಇಟ್ಟಿರುವ ಡಿಪಾಸಿಟ್ ಹಣದಿಂದಲೇ ಕೇವಲ ಶೇ. 4 ರ ಬಡ್ಡಿದರದಲ್ಲಿ ಒದಗಿಸಲು ಹಿಂದೂಬಾಂಡ್ ಮೋದಿ ನಿರ್ಧರಿಸಿದ್ದಾರೆ.

(https://sabrangindia.in/article/air-india-sale-making-one-lakh-crore-scam)

ಆದ್ದರಿಂದ... ವೀರ ಕೇಸರಿಗಳೇ...

ಹಿಜಾಬು ಕೀಳಹೊರಟಿರುವ ವೀರ ಶೂರ ಪುರುಷರೇ..

ಈಗಲಾದರೂ ಸ್ವಲ್ಪಬಿಡುವು ಮಾಡಿಕೊಳ್ಳುವಿರಾ?

ನಿಮ್ಮನ್ನು ಹಿಜಾಬಿನ ಯುದ್ಧಕ್ಕೆ ದೂಡಿ...

ನಿಮ್ಮ ಜಾಬನ್ನು, ಭವಿಷ್ಯವನ್ನು ಕಿತ್ತುಕೊಳ್ಳುತ್ತಿರುವ ಸಂಚುಕೋರ ಯಾರೆಂದು ಈಗಲಾದರೂ ಅರ್ಥಮಾಡಿಕೊಳ್ಳುವಿರಾ? ನಿಮ್ಮನ್ನು ಯುದ್ಧಕ್ಕೆ ದೂಡಿದ ನಿಮ್ಮ ಸೇನಾಧಿಪತಿಯೇ ನಿಮ್ಮ ಅಸಲೀ ಶತ್ರು ಎಂದು ಗ್ರಹಿಸಬಲ್ಲಿರಾ?

share
ಶಿವಸುಂದರ್
ಶಿವಸುಂದರ್
Next Story
X