ಆರು ವರ್ಷಗಳ ಹಿಂದೆ ಜೀವನ್ಮರಣ ಹೋರಾಟ ನಡೆಸಿದ್ದ ಅಮೆರಿಕದ ಸ್ಟೀವನ್ಸನ್ ಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ

Photo credit: Facebook/Olympics
ಬೀಜಿಂಗ್: 2016 ರಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದ ನಂತರ ಜೀವನ್ಮರಣ ಹೋರಾಟ ನಡೆಸಿದ್ದ ಅಮೆರಿಕದ ಕಾಲ್ಬಿ ಸ್ಟೀವನ್ಸನ್ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಫ್ರೀಸ್ಟೈಲ್ ಸ್ಕೀ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನುಗೆದ್ದುಕೊಂಡು ಅತ್ಯಮೋಘ ಸಾಧನೆ ಮಾಡಿದ್ದಾರೆ.
ಆರು ವರ್ಷಗಳ ಹಿಂದಿನ ಅಪಘಾತದಲ್ಲಿ ಸ್ಟೀವನ್ಸನ್ ತಲೆಬುರುಡೆಯು 48 ತುಂಡುಗಳಾಗಿ ಮುರಿದುಹೋಗಿತ್ತು ಎಂದು ವರದಿಯಾಗಿತ್ತು. ಬಿರುಕು ಬಿಟ್ಟ ಪಕ್ಕೆಲುಬುಗಳು ಹಾಗೂ ಕುತ್ತಿಗೆಯಲ್ಲಿನ ಮುರಿತವು ಅವರು ಮತ್ತೆ ಬದುಕುಳಿದು ಸ್ಪರ್ಧಿಸುವ ಆಸೆಯನ್ನು ಕೈಬಿಡುವಂತೆ ಮಾಡಿದ್ದವು.
ಆದರೆ, ಸ್ಟೀವನ್ಸನ್ ಕೇವಲ ಆರು ತಿಂಗಳಲ್ಲಿ ಬ್ಯಾಕ್ ಅಪ್ ಮತ್ತು ಸ್ಕೀಯಿಂಗ್ ಮಾಡುವ ಮೂಲಕ ಪವಾಡ ಸೃಷ್ಟಿಸಿದ್ದರು. ಸಾವನ್ನು ಗೆದ್ದು ಬಂದ ಆರು ವರ್ಷಗಳ ನಂತರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಫ್ರೀಸ್ಟೈಲ್ ಸ್ಕೀ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಬಿಗ್ ಏರ್ ಪುರುಷರ ಫ್ರೀಸ್ಟೈಲ್ ಸ್ಕೀಯಿಂಗ್ನಲ್ಲಿ ಮೊದಲ ಬಾರಿ ಒಲಿಂಪಿಕ್ ನಲ್ಲಿ ಕಾಣಿಸಿಕೊಂಡ ಅವರು ಬೀಜಿಂಗ್ನಲ್ಲಿ ಬುಧವಾರ ಮಧ್ಯಾಹ್ನ ನಡೆದ ಈವೆಂಟ್ನಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿಯನ್ನು ಪಡೆದರು. ನಾರ್ವೆಯ ಬಿರ್ಕ್ ರುಡ್ ಮೊದಲ ಸ್ಥಾನ ಪಡೆದರು.
24 ವರ್ಷದ ನ್ಯೂ ಹ್ಯಾಂಪ್ಶೈರ್ನ ಸ್ಥಳೀಯ ಆಟಗಾರ ಫೈನಲ್ನ ಮೊದಲ ಓಟದಲ್ಲಿ ಕ್ಲೀನ್ ಜಂಪ್ ಆಗಲಿಲ್ಲ. ಆದರೆ ನಂತರ ಒಟ್ಟು ಸ್ಕೋರ್ 183 ಗಳಿಸಲು ಶಕ್ತರಾದರು. ರೂಡ್ 187.75 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಸ್ವೀಡನ್ನ ಹೆನ್ರಿಕ್ ಹರ್ಲಾಟ್ 181 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಸ್ಲೋಪ್ಸ್ಟೈಲ್ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಸ್ಟೀವನ್ಸನ್, ವಿಶ್ವಕಪ್ ಬಿಗ್ ಏರ್ ಈವೆಂಟ್ನಲ್ಲಿ ಆರನೇ ಸ್ಥಾನಕ್ಕಿಂತ ಹೆಚ್ಚಿನದನ್ನು ಪೂರ್ಣಗೊಳಿಸಿರಲಿಲಿಲ್ಲ.
"ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಅಂದರೆ, ನಾನು ಇಂದು ಒಲಿಂಪಿಕ್ಸ್ ಗೆ ಬಂದಿರುವುದು ಕೇವಲ ಪವಾಡವಾಗಿತ್ತು’’ ಎಂದು ಸ್ಟೀವನ್ಸನ್ ಹೇಳಿದರು.