ಮೂರನೇ ಏಕದಿನ: ವೆಸ್ಟ್ಇಂಡೀಸ್ಗೆ 266 ರನ್ ಗುರಿ ನೀಡಿದ ಭಾರತ

Photo: BCCI
ಅಹಮದಾಬಾದ್: ಶ್ರೇಯಸ್ ಅಯ್ಯರ್ ಅವರ ವೀರೋಚಿತ ಬ್ಯಾಟಿಂಗ್ ಹಾಗೂ ರಿಷಭ್ ಪಂತ್ ಅರ್ಧಶತಕದ ಸಹಾಯದಿಂದ ಭಾರತ ತಂಡ ವೆಸ್ಟ್ಇಂಡೀಸ್ ತಂಡಕ್ಕೆ 3ನೇ ಪಂದ್ಯದ ಗೆಲುವಿಗೆ 266 ರನ್ ಗುರಿ ನೀಡಿದೆ.
ಶುಕ್ರವಾರ ಟಾಸ್ ಜಯಿಸಿದ ಭಾರತವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತವು 42 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(13) ಹಾಗೂ ಶಿಖರ್ ಧವನ್ (10)ಉತ್ತಮ ಆರಂಭ ಒದಗಿಸಲು ವಿಫಲರಾದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸಂಪಾದಿಸಿ ನಿರಾಸೆಗೊಳಿಸಿದರು.
ಆಗ 4ನೇ ವಿಕೆಟ್ಗೆ 111 ರನ್ ಜೊತೆಯಾಟ ನಡೆಸಿದ ಅಯ್ಯರ್(80 ರನ್, 111 ಎಸೆತ, 9 ಬೌಂಡರಿ) ಹಾಗೂ ಪಂತ್(56, 54 ಎಸೆತ, 6 ಬೌಂ., 1 ಸಿ.) ತಂಡವನ್ನು ಆಧರಿಸಿದರು. ಈ ಇಬ್ಬರು ಔಟಾದ ಬಳಿಕ ದೀಪಕ್ ಚಹಾರ್ (38, 38 ಎಸೆತ) ಹಾಗೂ ವಾಷಿಂಗ್ಟನ್ ಸುಂದರ್(33, 34 ಎಸೆತ) 7ನೇ ವಿಕೆಟ್ಗೆ 53 ರನ್ ಜೊತೆಯಾಟ ನಡೆಸಿ ಭಾರತವು ನಿಗದಿತ 50 ಓವರ್ಗಳಲ್ಲಿ 265 ರನ್ ಗಳಿಸಲು ನೆರವಾದರು.
ವಿಂಡೀಸ್ ಪರವಾಗಿ ಜೇಸನ್ ಹೋಲ್ಡರ್(4-34)ಯಶಸ್ವಿ ಬೌಲರ್ ಎನಿಸಿಕೊಂಡರು. ಅಲ್ಝಾರಿ ಜೋಸೆಫ್(2-54) ಹಾಗೂ ಹೇಡನ್ ವಾಲ್ಶ್(2-59)ತಲಾ ಎರಡು ವಿಕೆಟ್ಗಳನ್ನು ಪಡೆದರು.





