ಫೆಬ್ರವರಿ, ಮಾರ್ಚ್ ತಿಂಗಳ ಮೀನುಗಾರ ಸಬ್ಸಿಡಿ ಡೀಸೆಲ್ ಬಿಡುಗಡೆ: ಬಸವರಾಜ್ ಬೊಮ್ಮಾಯಿ

ಮಲ್ಪೆ : ಕರಾವಳಿಯ ಮೀನುಗಾರರ ಬೋಟುಗಳಿಗೆ ಪೂರೈಕೆ ಮಾಡ ಲಾಗುತ್ತಿರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸಬ್ಸಿಡಿ ಡೀಸೆಲನ್ನು ಒದಗಿಸ ಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮೀನುಗಾರ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ನಿಯೋಗವು ಶುಕ್ರವಾರ ಬೆಂಗಳೂರಿನ ವಿಧಾನ ಸೌಧದಲ್ಲಿ ಸಲ್ಲಿಸಿದ ವಿವಿಧ ಬೇಡಿಕೆಗಳನ್ನು ಆಲಿಸಿ ಅವರು ಭರವಸೆ ನೀಡಿದರು.
2021ರ ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿಯಿರುವ ಡೀಸೆಲ್ ಸಬ್ಸಿಡಿ ಯನ್ನು ಅತೀ ಶೀಘ್ರದಲ್ಲಿ ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
2022-2023 ನೇ ಸಾಲಿನ ಬಜೆಟ್‌ನಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಹಣ ಕಾಯ್ದಿರಿಸುವ ಬಗ್ಗೆ ಮೀನುಗಾರರು ಮುಖ್ಯ ಮಂತ್ರಿಯ ಬಳಿ ಮನವಿ ಮಾಡಿದರು. ಯಾಂತ್ರಿಕ ಬೋಟುಗಳಿಗೆ ವಾರ್ಷಿಕ 2 ಲಕ್ಷ ಕಿ.ಲೀ. ತೆರಿಗೆ ರಿಯಾಯಿತಿ ಡೀಸೆಲ್ ನೀಡಬೇಕು. ನಾಡದೋಣಿಗಳಿಗೆ ಸಬ್ಸಿಡಿ ಸೀಮೆಎಣ್ಣೆಯನ್ನು ತಿಂಗಳಿಗೆ 400 ಲೀ. ನಂತೆ ನೀಡಬೇಕು. ರಾಜ್ಯದ ಎಲ್ಲಾ ಬಂದರುಗಳ ಹೂಳೆತ್ತುವುದು ಮತ್ತು ಬಂದರುಗಳನ್ನು ವಿಸ್ತರಿಸಬೇಕು.
ಬಂದರಿನ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ರಾಜ್ಯದ ಎಲ್ಲಾ ತಾಲೂಕು ಗಳಲ್ಲಿ ಹೈಟೆಕ್ ಮೀನು ಮಾರುಕಟ್ಟೆ ಯನ್ನು ಸ್ಥಾಪಿಸಬೇಕು. ಮೀನುಗಾರಿಕಾ ಕೈಗಾರಿಕಾ ವಲಯ ರಚನೆ ಮತ್ತು ಮಂಗಳೂರಿನಲ್ಲಿ ಮೀನುಗಾರಿಕಾ ವಿಶ್ವವಿದ್ಯಾ ಲಯ ರಚನೆ ಮಾಡಬೇಕು. ಕುಮಟಾ ತಾಲೂಕಿನ ಅಗನಾಶಿನಿ ನದಿಯಲ್ಲಿ ನಡೆಯುತಿರುವ ಅಕ್ರಮ ಚಿಪ್ಪು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು.
ಮಹಿಳಾ ಮೀನುಗಾರರ ಬಾಕಿಯಿರುವ ಸಾಲ ಮನ್ನಾ, ಬಡ್ಡಿ ರಹಿತ ಸಾಲ ಮತ್ತು ಮೀನುಗಾರರ ಬಡ್ಡಿ ಮನ್ನಾ, ಮೀನುಗಾರ ಕಾರ್ಮಿಕರಿಗೆ ಪಿಂಚಣಿ, ನಾಡದೋಣಿ ಇಂಜಿನ್ ಖರೀದಿಗೆ ಈ ಹಿಂದಿನಂತೆ ಸಬ್ಸಿಡಿ ನೀಡಬೇಕು. ಮೀನುಗಾರರ ವಸತಿ ಯೋಜನೆಗೆ 1.25 ಲಕ್ಷ ನೀಡಲಾಗುತ್ತಿದ್ದು ಅದನ್ನು 5 ಲಕ್ಷ ರೂ.ಗೆ ಏರಿಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷರುಗಳಾದ ಅನಿಲ್ ಕುಮಾರ್, ಮೋಹನ್ ಬೆಂಗ್ರೆ, ರಾಮಚಂದ್ರ ಕುಂದರ್, ಆನಂದ ಖಾರ್ವಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ, ಸಂಘಟನಾ ಕಾರ್ಯದರ್ಶಿ ಸುಭಾಶ್ ಮೆಂಡನ್, ಸಮಿತಿಯ ಮಾಜಿ ಅಧ್ಯಕ್ಷ ಮನೋಹರ್ ಬೋಳೂರು, ಕೆಎ್ಡಿಸಿ ಅಧ್ಯಕ್ಷ ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







