ಹೆಬ್ರಿ: ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೃಷಿಕ
ಹೆಬ್ರಿ, ಫೆ.11: ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಮಾಡಿರುವ ಸಾಲವನ್ನು ಪಾವತಿಸಲಾಗದೆ ಮನನೊಂದ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.10ರಂದು ಬೆಳಗ್ಗೆ ಸೋಮೇಶ್ವರ ಸಮೀಪದ ಆಗುಂಬೆ ಘಾಟಿಯಲ್ಲಿ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಿಣಕಲ್ ನಿವಾಸಿ ಜಿ.ಎನ್.ಲೋಕಣ್ಣ(54) ಎಂದು ಗುರುತಿಸಲಾಗಿದೆ.
ಇವರು ಅಡಿಕೆ ತೋಟದ ಬಗ್ಗೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಸಾಲವನ್ನು ಮಾಡಿದ್ದರು. ಆದರೆ ಅಡಿಕೆ ತೋಟದ ರೋಗ ಬಾದೆಯಿಂದ ಪಸಲು ಬಾರದ ಕಾರಣ ಅವರು ನಷ್ಟಕ್ಕೆ ಒಳಗಾಗಿದ್ದರು. ಇದರಿಂದ ಅವರಿಗದೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಮಾಡಿದ ಸಾಲವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಸಾಲದ ಬಾದೆಯಿಂದ ಮನನೊಂದು ಇವರ್ಲು ಸೋಮೇಶ್ವರ ಘಾಟಿಯ 2 ನೇ ತಿರುವಿನ ಬಳಿ ತಾನು ಚಲಾಯಿಸಿಕೊಂಡು ಬಂದಿದ್ದ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತುಕೊಂಡು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story