ಎನ್ಐಟಿಕೆ ಟೋಲ್ ಗೇಟ್ ವಿರುದ್ಧದ ಧರಣಿ ಐದನೇ ದಿನಕ್ಕೆ

ಸುರತ್ಕಲ್; ಎನ್ಐಟಿಕೆ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಆಸೀಫ್ ಆಪತ್ಬಾಂಧವ ಅವರ ನೇತೃತ್ವ ದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯು ಶುಕ್ರವಾರ ಐದನೇ ದಿನಕ್ಕೆ ಕಾಲಿರಿಸಿದೆ.
ಇಂದು ಮುಂಜಾನೆಯಿಂದಲೇ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಧರಣಿ ಸ್ಥಳಕ್ಕೆ ಬಂದು ಆಸಿಫ್ ಆಪದ್ಬಾಂಧವ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯ ನಡುವೆ ವಿಶೇಷವಾಗಿ ಶವಸಂಸ್ಕಾರ ಮಾಡುವ ರೀತಿಯಲ್ಲಿ ಶವದ ಬಟ್ಟೆ ತೊಟ್ಟು ಧರಣಿ ವೇದಿಕೆಯ ಮುಂದೆ ನಿರ್ಜೀವದಂತೆ ಮಲಗಿದ ಆಸಿಫ್ ಆಪದ್ಬಾಂಧವ ವಿನೂತನವಾಗಿ ಪ್ರತಿಭಟಿಸುತ್ತ ಸಾರ್ವಜನಿಕರ ಗಮನ ಸೆಳೆದರು.
ಆಮ್ ಆದ್ಮಿಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರು ರಾಜೇಂದ್ರ ಕುಮಾರ್, ಸದಸ್ಯರಾದ ಬೇನೆಟ್, ದಿಲೀಪ್, ಲೋಬೊ, ಚೊಕ್ಕಬೆಟ್ಟು ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಶೈಫಾರ್ ಅಲಿ, ಮಹಿಳಾ ಮಂಡಳ ಹಳೆಯಂಗಡಿ ಇದರ ಅಧ್ಯಕ್ಷೆ ರೇಷ್ಮಾ ಅಶ್ರಫ್, ಉಲ್ಲಾಲ ಯುವ ಜೆಡಿಎಸ್ ಅಧ್ಯಕ್ಷರು ಅಸ್ಫಾಖ್ ಇನೋಲಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಕುಮಾರ್, ಧನರಾಜ್ ಕೋಟ್ಯಾನ್, ಸಮಾಜ ಸೇವಕ ರಾದ ಮೋಹನ್ ಬಂಗೇರ, ಮೊಹಮ್ಮದ್ ಅಶ್ರಫ್, ನಫೀಶಾ ಹಂಝ ಭಾಗವಹಿಸಿ ಹೋರಾಟವನ್ನು ಬೆಂಬಲಸಿ, ಅಕ್ರಮ ಟೋಲ್ ಗೇಟ್ ವಿರುದ್ಧ ಧಿಕ್ಕಾರ ಕೂಗಿದರು.