ಫೆ.12ರಂದು ಉಳ್ಳಾಲಕ್ಕೆ ದೇವೇಗೌಡ ಭೇಟಿ

ಉಳ್ಳಾಲ, ಫೆ.11: ಸೈಯದ್ ಮದನಿ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್ ಪ್ರಯುಕ್ತ ಫೆ.12ರಂದು ಸಂಜೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ ನೀಡಲಿದ್ದಾರೆ.
ಉದ್ಯಾವರ ಸಾವಿರ ಜಮಾಅತ್ ಅಧ್ಯಕ್ಷ ಎಂ.ಎ.ಸೈಯದ್ ಅಥಾವುಲ್ಲಾ ತಂಙಳ್ ದುಆಶೀರ್ವಚನ ನೀಡಲಿದ್ದಾರೆ. ಕೋಡಿ ಮಸೀದಿ ಖತೀಬ್ ಆದಂ ಫೈಝಿ ಭಾಷಣ ಮಾಡಲಿದ್ದು, ಸಮೀರ್ ದಾರಿಮಿ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ. ಎಂಎಲ್ಸಿ ಬಿ.ಎಂ.ಫಾರೂಕ್ ಉಪಸ್ಥಿತರಿರಲಿದ್ದಾರೆ.
ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.
Next Story





