ಉಳ್ಳಾಲ ದರ್ಗಾಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ

ಉಳ್ಳಾಲ, ಫೆ.11: ಸೈಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಶುಕ್ರವಾರ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ದಿನಕರ್, ಉಳ್ಳಾಲ ಇನ್‌ಸ್ಪೆಕ್ಟರ್ ಸಂದೀಪ್, ಕೊಣಾಜೆ ಇನ್‌ಸ್ಪೆಕ್ಟರ್ ಪ್ರಕಾಶ್, ಕಂಕನಾಡಿ ಠಾಣಾ ಇನ್‌ಸ್ಪೆಕ್ಟರ್ ಅಶೋಕ್ ಮತ್ತು ಕಂಕನಾಡಿ ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಜಾನ್‌ಡಿಸೋಜ ದರ್ಗಾ ಭೇಟಿ ನೀಡಿ ಕಾರ್ಯಕ್ರಮ ದ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿ, ಉರೂಸ್ ಯಶಸ್ವಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಸನ್ಮಾನಿಸಿದರು. ಉರೂಸ್ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಯು.ಕೆ.ಇಬ್ರಾಹೀಂ ಹಾಜಿ, ಹಮೀದ್ ಕೋಡಿ, ಅಶ್ರಫ್ ಮುಕ್ಕಚೇರಿ, ಅಬೂಬಕರ್ ಕೋಟೆಪುರ, ಆಸಿಫ್ ಅಬ್ದುಲ್ಲ, ಅಲ್ತಾಫ್ ಹಳೆಕೋಟೆ, ಅಬೂಬಕರ್ ಮುಕ್ಕಚೇರಿ ವುತ್ತಿತರರು ಉಪಸ್ಥಿತರಿದ್ದರು.
Next Story