ನಾನು ಹಿಂದೂಸ್ತಾನ್ ಝಿಂದಾಬಾದ್ ಘೋಷಣೆ ಕೂಗುತ್ತೇನೆ : ಮುಸ್ಕಾನ್ ಖಾನ್

ಮುಸ್ಕಾನ್ ಖಾನ್
ಬೆಂಗಳೂರು: ಮತ್ತೆ ಇದು ಸಂಭವಿಸಿದರೆ ನಾನು ಹಿಂದೂಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುತ್ತೇನೆ ಎಂದು ಹಿಜಾಬ್ ವಿವಾದದಲ್ಲಿ ದಿಟ್ಟತನ ಪ್ರದರ್ಶಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಹೇಳಿದ್ದಾರೆ.
ಮಂಡ್ಯದಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿ, ಕ್ಯಾಂಪಸ್ ಪ್ರವೇಶಿಸುವ ವೇಳೆ ಕೇಸರಿ ಶಾಲು ಧರಿಸಿ, ಜೈ ಶ್ರೀರಾಂ ಘೋಷಣೆ ಕೂಗುತ್ತಿದ್ದ ಯುವಕರ ಗುಂಪು ಆಕ್ಷೇಪಿಸಿದಾಗ ಗುಂಪನ್ನು ದಿಟ್ಟವಾಗಿ ಎದುರಿಸಿದ ಮುಸ್ಕಾನ್ ಖಾನ್ ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
"ಧಾರ್ಮಿಕ ನೆಲೆಯಲ್ಲಿ ನಾನು ಅಲ್ಲಾಹ್ ಅಕ್ಬರ್ ಎಂದು ಕೂಗುವುದಿಲ್ಲ. ಹಿಂದೂ- ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮುಸ್ಕಾನ್ ಕಾನೂನು ಅಧ್ಯಯನ ಮಾಡುವ ಕನಸು ಕಾಣುತ್ತಿದ್ದಾರೆ.
"ಬಾಲ್ಯದಿಂದಲೂ ಹಿಜಾಬ್ ಧರಿಸುವುದು ನನ್ನ ಆದ್ಯತೆಯಾಗಿತ್ತು. ನನ್ನ ಕುಟುಂಬದ ಪ್ರತಿಯೊಬ್ಬರೂ ಹಿಜಾಬ್ ಧರಿಸುತ್ತಾರೆ. ಇದು ನಮಗೆ ಇಸ್ಲಾಂನ ಸಂಕೇತದಿಂದ ಹೆಚ್ಚು. ಇದು ನಮ್ಮ ಆತ್ಮಗೌರವ ಅಕ್ಷಯಪಾತ್ರೆ" ಎಂದು ಅವರು ವಿಶ್ಲೇಷಿಸಿದರು.
ಫೆ. 8ರಂದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ಯುವಕರು ಜೈ ಶ್ರೀರಾಂ ಘೋಷಣೆ ಕೂಗಿದಾಗ, ಮುಸ್ಕಾನ್ ಇದನ್ನು ಎದುರಿಸಿ, ’ಅಲ್ಲಾಹ್ ಅಕ್ಬರ್’ ಎಂದು ಘೋಷಣೆ ಕೂಗಿ ನಿರ್ಭೀತಿಯಿಂದ ಕಾಲೇಜಿನ ಒಳಕ್ಕೆ ಹೋಗಿದ್ದರು.







