ಕುಸಿದು ಬಿದ್ದ ಐಪಿಎಲ್ ಹರಾಜು ನಿರೂಪಕ ಎಡ್ಮೀಡ್ಸ್, ಆಸ್ಪತ್ರೆಗೆ ದಾಖಲು
ಮಧ್ಯಾಹ್ನ 3:30 ಕ್ಕೆ ಹರಾಜು ಪ್ರಕ್ರಿಯೆ ಪುನರಾರಂಭ

Photo: Twitter
ಬೆಂಗಳೂರು: ಇಲ್ಲಿನ ಹೊಟೇಲ್ ನಲ್ಲಿ ಐಪಿಎಲ್ 2022 ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಹರಾಜು ನಿರೂಪಕ ಹ್ಯೂಗ್ ಎಡ್ಮೀಡ್ಸ್ (62 ವರ್ಷ)ವೇದಿಕೆಯ ಮೇಲೆ ಕುಸಿದು ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ನಂತರ ಐಪಿಎಲ್ 2022 ಹರಾಜು ಪ್ರಕ್ರಿಯೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಘಟನೆ ನಡೆದಾಗ ಶ್ರೀಲಂಕಾ ಆಲ್ರೌಂಡರ್ ವನಿಂದು ಹಸರಂಗ ಅವರ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು.
ಹರಾಜು ನಿರೂಪಕ ಹ್ಯೂ ಎಡ್ಮೀಡ್ಸ್ ವೇದಿಕೆಯ ಮೇಲೆ ಕುಸಿದು ಬಿದ್ದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಐಪಿಎಲ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಸ್ಥಗಿತಗೊಂಡಿರುವ ಐಪಿಎಲ್ 2022 ರ ಹರಾಜು ಪ್ರಕ್ರಿಯೆ ಮಧ್ಯಾಹ್ನ 3:30 ಕ್ಕೆ ಪುನರಾರಂಭವಾಗಲಿದೆ. ಐಪಿಎಲ್ ಹರಾಜು ನಿರೂಪಕ ಹ್ಯೂಗ್ ಎಡ್ಮೀಡ್ಸ್ ವೈದ್ಯಕೀಯ ನೆರವು ಪಡೆದ ನಂತರ ಉತ್ತಮವಾಗಿದ್ದಾರೆ ಎಂದು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.
Next Story