ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೋನಿಷ ಶೆಟ್ಟಿಗಾರ್

ಉಡುಪಿ, ಫೆ.12: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಮೋನಿಷ ಕೆ. ಶೆಟ್ಟಿಗಾರ್ ಉತ್ತೀರ್ಣರಾಗಿದ್ದಾರೆ.
ಇವರು ಉಡುಪಿಯ ಭಾರತೀಶ್ ಬಲ್ಲಾಳ್ ನೇತೃತ್ವದ ಭಾರತೀಶ ಆ್ಯಂಡ್ ಅಸೋಸಿಯೇಟ್ಸ್‌ನಲ್ಲಿ ಆರ್ಟಿಕಲ್‌ಶಿಪ್ ಪೂರೈಸಿದ್ದು, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಇವರು ಉಡುಪಿ ಅಂಬಲಪಾಡಿಯ ವಾರಿಜ ಮತ್ತು ಕೆ. ಅಶೋಕ್ ಶೆಟ್ಟಿಗಾರ್ ದಂಪತಿಯ ಪುತ್ರಿ.
Next Story