ಉಳ್ಳಾಲ ದರ್ಗಾ ಉರೂಸ್; ಫೆ.13ರಂದು ಸನದು ದಾನ
ಮಂಗಳೂರು : ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಸನದು ದಾನ ಮಹಾ ಸಮ್ಮೇಳನ ಫೆ.13ರಂದು ಮಧ್ಯಾಹ್ನ 2 ಗಂಟೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ.
ಸೈಯದ್ ಅಲಿ ಬಾಫಕಿ ತಂಙಳ್ ದುಆ ನೆರವೇರಿಸಲಿದ್ದಾರೆ. ಶೈಖುಲ್ ಜಾಮಿಅಃ ಶೈಖುನಾ ಆಲಿ ಕುಟ್ಟಿ ಉಸ್ತಾದ್ ಸನದುದಾನ ನೀಡಲಿದ್ದಾರೆ. ಸೈಯ್ಯದ್ ಆಟಕೋಯ ತಂಙಳ್ ಉದ್ಘಾಟಿಸಲಿದ್ದಾರೆ.
ಡಾಕ್ಟರ್ ಬಹಾವುದ್ದೀನ್ ಮುಹಮ್ಮದ್ ನದ್ವಿ ಸನದುದಾನ ಪ್ರಸಂಗ ಮಾಡಲಿದ್ದಾರೆ. ಶೈಖುನಾ ಉಸ್ಮಾನ್ ಪೈಝಿ ತೋಡಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯ್ಯದ್ ಪೂಕೋಯ ತಂಙಳ್, ಸೈಯ್ಯದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್, ಸೈಯ್ಯದ್ ಚೆರೆಕುಂಞಿ ತಂಙಳ್, ತಾಯಕ್ಕೋಡು ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಇನ್ನೂ ಅನೇಕ ಇಸ್ಲಾಮಿಕ್ ಮತ ಪಂಡಿತರು ಭಾಗವಹಿಸಲಿದ್ದಾರೆ ಎಂದು ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.
Next Story





