Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉತ್ತರ ಪ್ರದೇಶ ನೀಡಬಹುದಾದ ಉತ್ತರ!

ಉತ್ತರ ಪ್ರದೇಶ ನೀಡಬಹುದಾದ ಉತ್ತರ!

ದಿನೇಶ್ ಅಮಿನ್ ಮಟ್ಟುದಿನೇಶ್ ಅಮಿನ್ ಮಟ್ಟು13 Feb 2022 12:05 AM IST
share
ಉತ್ತರ ಪ್ರದೇಶ ನೀಡಬಹುದಾದ ಉತ್ತರ!

''ಉತ್ತರಪ್ರದೇಶದ ರಾಜಕೀಯ ಅರ್ಥವಾಗದಿದ್ದರೆ ನಿನಗೆ ದೇಶದ ರಾಜಕೀಯ ಅರ್ಥವಾಗುವುದಿಲ್ಲ'' ಎಂದು ದಿಲ್ಲಿಗೆ ಹೋಗಿದ್ದ ಪ್ರಾರಂಭದಲ್ಲಿ ಹಿರಿಯ ಪತ್ರಕರ್ತರೊಬ್ಬರು ನನಗೆ ಹೇಳಿದ್ದರು. ''ಉತ್ತರಪ್ರದೇಶ ನಿಜವಾಗಿಯೂ ದೇಶದ ರಾಜಕೀಯದ ಪ್ರಯೋಗಶಾಲೆ''. ರಾಜ್ಯದ ಉದ್ದಗಲಕ್ಕೆ ಮೀರತ್ ನಿಂದ ಮಿರ್ಝಾಪುರದ ವರೆಗೆ ಇಟಾವದಿಂದ ಗೋರಖ್‌ಪುರದವರೆಗೆ ಅಲೆದಾಡಿ ಮೂರು ವಿಧಾನಸಭೆ (2002, 2007, 2012) ಮತ್ತು ಎರಡು ಲೋಕಸಭಾ ಚುನಾವಣೆಗಳನ್ನು (2004 ಮತ್ತು 2009) ವರದಿ ಮಾಡಿದ ನಂತರವೂ ಅಲ್ಲಿನ ರಾಜಕೀಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳುವ ಧೈರ್ಯ ನನಗಿಲ್ಲ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದ್ದು ಮಾರ್ಚ್ ಹತ್ತರವರೆಗೆ ರಾಜ್ಯದ ಮತದಾರರ ಆಯ್ಕೆ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಅಲ್ಲಿಯವರೆಗೆ ಚುನಾವಣೆಯ ಚರ್ಚೆ ನಿರಂತರ.

ಉತ್ತರಪ್ರದೇಶದ ಪೂರ್ವಭಾಗದಿಂದ ಆಗ್ರಾ ಮೂಲಕ ಪಶ್ಚಿಮಕ್ಕೆ ಪ್ರವೇಶಿಸಿದಾಗ ಸ್ವಾಗತಿಸುವ ಯಮುನೆಯ ನೀರಿನಿಂದ ಸಮೃದ್ಧವಾದ ಫಲವತ್ತಾದ ಗದ್ದೆಗಳು, ಕಬ್ಬು ಮತ್ತು ಭತ್ತದ ಬೆಳೆಗಳು, ಟ್ರಾಕ್ಟರ್ ಓಡಿಸುತ್ತಿರುವ ರೈತರು, ದನ-ಕರುಗಳ ಹಿಂಡು... ಎದುರಾಗುವ ಜನರ ಜಾತಿ, ವೃತ್ತಿ, ಸಾಮಾಜಿಕ ಜೀವನ, ಸ್ವಭಾವ ಎಲ್ಲವನ್ನು ನೋಡುತ್ತಾ ಹೋದಂತೆ ಒಂದು ಕ್ಷಣ ಮಂಡ್ಯ, ಮೈಸೂರು ಭಾಗದ ಊರುಗಳು ನೆನಪಾಗಬಹುದು.

ಘಾಝಿಯಾಬಾದ್, ಗೌತಮ್ ಬುದ್ಧ ನಗರ, ಭಾಗಪತ್, ಮೀರತ್ ಮುಝಫ್ಫರ್‌ನಗರ, ಶಾಮ್ಲಿ, ಹಾಪುರ್, ಆಗ್ರಾ, ಅಲಿಗಡ, ಮಥುರಾ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಉತ್ತರಪ್ರದೇಶ ಒಂದು ಕಾಲದ ಚೌದರಿ ಚರಣ್ ಸಿಂಗ್ ಅವರ ರಾಜಕೀಯದ ಕರ್ಮ ಭೂಮಿ. ಚರಣ್ ಸಿಂಗ್ ನಂತರ ಕಾಣಿಸಿಕೊಂಡ ಮಹೇಂದ್ರಸಿಂಗ್ ಟಿಕಾಯತ್ ಎಂಬ ಜಾಟ್ ಸಮುದಾಯದ ನಾಯಕ ನೇರವಾಗಿ ರಾಜಕೀಯ ಪ್ರವೇಶಿಸದೆ ಇದ್ದರೂ ತಮ್ಮ ಭಾರತ ಕಿಸಾನ್ ಯೂನಿಯನ್ ಮೂಲಕ ಜಾಟರ ರಾಜಕೀಯ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದರು. ಈ ಟಿಕಾಯತ್ ಎಂಬ ಘಾಟಿ ರೈತ ನಾಯಕ ದಿಲ್ಲಿಯ ಸಂಸತ್ ಭವನದ ಎದುರಿನ ರಾಜ್ ಪಥದಲ್ಲಿ ಟ್ರಾಕ್ಟರ್ ಮತ್ತು ಎತ್ತಿನಗಾಡಿಗಳನ್ನು ಅಡ್ಡಹಾಕಿ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರನ್ನೇ ತನ್ನ ಬಳಿ ಕರೆಸಿಕೊಂಡದ್ದು. ಇದೇ ಪ್ರದೇಶದಿಂದಲೇ ಬಂದ ರೈತರು ದಿಲ್ಲಿಗೆ ಮುತ್ತಿಗೆ ಹಾಕಿ 56 ಇಂಚು ಎದೆಯ ಪ್ರಧಾನಿಯನ್ನು ಮಂಡಿ ಊರುವಂತೆ ಮಾಡಿದ್ದು. ಈ ಇಬ್ಬರು ಹಿರಿಯ ನಾಯಕರು ನೇಪಥ್ಯಕ್ಕೆ ಸರಿದ ನಂತರ ಅಪ್ಪನ ಮುಂಡಾಸು ಧರಿಸಿ ರಾಜಕೀಯ ಪ್ರವೇಶಿಸಿದ ಅಜಿತ್ ಸಿಂಗ್ ಜಾಟರ ಪ್ರಶ್ನಾತೀತ ನಾಯಕರಾಗಿದ್ದರು. ಈಗ ಮಗ ಜಯಂತ್ ಚೌದರಿ ಅಜ್ಜ- ಅಪ್ಪನ ರಾಜಕೀಯ ವಾರಸುದಾರರಾಗಿದ್ದಾರೆ. ಅಪ್ಪ ಮಹೇಂದ್ರ ಸಿಂಗ್ ಟಿಕಾಯತ್‌ನಂತೆ ಮಗ ರಾಕೇಶ್ ಮತ್ತು ನರೇಶ್ ಟಿಕಾಯತ್ ಕೂಡಾ ನೇರ ರಾಜಕೀಯ ಪ್ರವೇಶ ಮಾಡದೆ ರೈತ ಸಂಘಟನೆಯ ಮೂಲಕ ಈ ಪ್ರದೇಶದ ರಾಜಕೀಯವನ್ನು ನಿಯಂತ್ರಿಸುವ ರಿಮೋಟ್ ಕಂಟ್ರೋಲ್ ಆಗಿದ್ದಾರೆ.

ಚೌದರಿ ಚರಣ್ ಸಿಂಗ್ ನಂತರ ಅಪ್ಪನ ರಾಜಕೀಯ ವಾರಸುದಾರಿಕೆ ಯನ್ನು ಅಜಿತ್ ಸಿಂಗ್ ಪಡೆದರೂ ಅಪ್ಪನ ರಾಜಕೀಯ ಯಶಸ್ಸು ಮಗನಿಗೆ ಸಿಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ- ಅಧಿಕಾರಕ್ಕಾಗಿ ಅಜಿತ್ ಸಿಂಗ್ ನಡೆಸುತ್ತಿದ್ದ ಪಕ್ಷಾಂತರದ ಆಟಗಳು. ಯಾವಾಗ ಅಜಿತ್ ಸಿಂಗ್ ವಾಜಪೇಯಿ ಸರಕಾರ ಸೇರಿ ಕೇಂದ್ರ ಸಚಿವರಾದರೊ ಮುಸ್ಲಿಮರು ನಿಧಾನವಾಗಿ ಅವರ ಪಕ್ಷದಿಂದ ದೂರ ಸರಿಯತೊಡಗಿದ್ದರು. 2007ರಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳಕ್ಕೆ ಸಿಕ್ಕಿದ್ದು ಕೇವಲ ಹತ್ತು ಸ್ಥಾನ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಆರ್‌ಎಲ್‌ಡಿಗೆ ಸಿಕ್ಕಿದ್ದು ಒಂದು ಸ್ಥಾನ ಮಾತ್ರ.
ಪಶ್ಚಿಮ ಉತ್ತರಪ್ರದೇಶದ ರಾಜಕೀಯದ ಬಣ್ಣ-ವಿನ್ಯಾಸಗಳು ಬದಲಾಗಿದ್ದು ಪ್ರಮುಖವಾಗಿ ಮೂರು ಬೆಳವಣಿಗೆಗಳಿಂದ. ಎಂಭತ್ತರ ದಶಕದ ಕೊನೆಭಾಗದಲ್ಲಿ ನಡೆದ ಕಾನ್ಶಿರಾಮ್ ಅವರ 'ಆನೆ'ಯ ಪ್ರವೇಶ, ಎರಡನೆಯದು- 2013ರಲ್ಲಿ ನಡೆದ ಮುಝಫ್ಫರ್‌ನಗರದ ಕೋಮುಗಲಭೆ, ಮೂರನೆಯದ್ದು- ಇತ್ತೀಚಿನ ರೈತ ಚಳವಳಿ.

ಜಾಟರ ಪಾಳೆಪಟ್ಟುವಿನಂತಿದ್ದ ಈ ಪ್ರದೇಶದ ರಾಜಕೀಯ ಬೇರುಗಳನ್ನು ಮೊದಲ ಬಾರಿ ಅಲ್ಲಾಡಿಸಿದ್ದು ಕಾನ್ಶಿರಾಮ್. 1984ರಲ್ಲಿ ಪಂಜಾಬ್‌ನಿಂದ ಉತ್ತರಪ್ರದೇಶಕ್ಕೆ ಬಂದಿದ್ದ ಕಾನ್ಶಿರಾಮ್ ನಂತರದ ದಿನಗಳಲ್ಲಿ ಇಲ್ಲಿಗೆ ಪ್ರವೇಶಿಸಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಮೊದಲ ಬಾರಿ ಅಲ್ಲಾಡಿಸಿಬಿಟ್ಟಿದ್ದರು. 2012ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಬಹಳಷ್ಟು ದಲಿತ ನಾಯಕರು ಕಾನ್ಶಿರಾಮ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ವರ್ಷಗಳ ಕಾಲ ನಾವು ಮತಚಲಾಯಿಸಿರಲೇ ಇಲ್ಲ, ಆ ಮಟ್ಟದ ಜಾಟರ ದಬ್ಬಾಳಿಕೆ ಇತ್ತು. ಭೂಮಾಲಕರಾದ ಜಾಟರು ಇತ್ತೀಚಿನವರೆಗೂ ಪಾಳೆಪಟ್ಟು ರೀತಿಯಲ್ಲಿ ಈ ಪ್ರದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. 2007ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ 68 ಸ್ಥಾನಗಳ ಪೈಕಿ 35ರಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ತಮ್ಮ ಶ್ರಮದ ಫಲವನ್ನು ನೋಡಲು ಕಾನ್ಶಿರಾಮ್ ಜೀವಂತವಾಗಿರಲಿಲ್ಲ. ಒಂದು ಕಾಲದಲ್ಲಿ 'ಜಾಟರ ನಾಡು ಎಂದು ಕರೆಯಲಾಗುತ್ತಿದ್ದ ಈ ಪ್ರದೇಶ 'ಜಾಟ-ಜಾಟವಾರ ನಾಡು ಎಂದು ಕರೆಯುವಷ್ಟು ಬದಲಾಗಿದ್ದು ಈ ರಾಜಕೀಯ ಪಲ್ಲಟದ ನಂತರದ ದಿನಗಳಲ್ಲಿ. (2012ರ ಈ ಪ್ರದೇಶದ ನನ್ನ ಚುನಾವಣಾ ಸಮೀಕ್ಷೆಯ ಹೆಡ್ಡಿಂಗ್: ಹರಿತ್ ಪ್ರದೇಶದಲ್ಲಿ ಜಾಟ-ಜಾಟವಾರ ಕಾಳಗ). ಆಗ್ರಾ ಮತ್ತು ಅಲಿಗಡಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಜ್ಯದ ಸರಾಸರಿಗಿಂತ ಹೆಚ್ಚಿದೆ. 2007ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಬಿಎಸ್‌ಪಿ ದೊಡ್ಡ ಪ್ರಮಾಣದ ಗೆಲುವು ಸಾಧಿಸಿತ್ತು.

ಎರಡನೆಯ ಬೆಳವಣಿಗೆ- 2013ರಲ್ಲಿ ನಡೆದ ಮುಝಫ್ಫರ್‌ನಗರ ಕೋಮುಗಲಭೆ. ಈ ಗಲಭೆಯಿಂದಾಗಿ ಚರಣ್ ಸಿಂಗ್ ಕಾಲದಲ್ಲಿ ಈ ಪ್ರದೇಶದಲ್ಲಿದ್ದ ಜಾಟ್-ಮುಸ್ಲಿಮ್ ಭಾಯಿಚಾರಾ ಛಿದ್ರವಾಗಿತ್ತು. ಗಲಭೆಯಲ್ಲಿ 62 ಮಂದಿ ಮೃತಪಟ್ಟು ಸುಮಾರು 40,000 ಜನ ಊರು ಬಿಟ್ಟು ಹೋಗಿದ್ದರು. ಅಲ್ಲಿಂದ ಬರುತ್ತಿರುವ ವರದಿಗಳ ಪ್ರಕಾರ ಗಲಭೆಯ ಗಾಯ ಇನ್ನೂ ಪೂರ್ಣ ಮಾಸಿಲ್ಲ. ಉತ್ತರಪ್ರದೇಶದ ಮುಸ್ಲಿಮ್ ಜನಸಂಖ್ಯಾ ಪ್ರಮಾಣ ಶೇ.19.3. ಆದರೆ ಪಶ್ಚಿಮ ಉತ್ತರಪ್ರದೇಶದ ಮುಝಫ್ಫರ್‌ನಗರ, ಮೀರತ್, ಘಾಝಿಯಾಬಾದ್, ಭಾಗಪತ್, ಬುಲಂದ್ ಶಹರ್ ಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಶೇಕಡಾ 25ರಿಂದ 40ರಷ್ಟಿದೆ. ಜಾಟರ ಜನಸಂಖ್ಯೆ ಶೇ.15ರಿಂದ 20ರಷ್ಟಿದೆ.

ಮುಝಫ್ಫರ್ ಗಲಭೆಯ ನಂತರ 2014 ಮತ್ತು 2019ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿಯವರೆಗೆ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಬಿಜೆಪಿ ಈ ಪ್ರದೇಶದ ತುಂಬಾ ಆವರಿಸಿಕೊಂಡು ಬಿಟ್ಟಿತು. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸಿಎಸ್ ಡಿಎಸ್-ಲೋಕನೀತಿಯವರ ಸಮೀಕ್ಷೆ ಪ್ರಕಾರ ಶೇ.91ರಷ್ಟು ಜಾಟರು ಬಿಜೆಪಿಗೆ ಮತಹಾಕಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಗಳಿಸಿದ್ದ ಮತಪ್ರಮಾಣ ಶೇ.42, ಈ 58 ಕ್ಷೇತ್ರಗಳಲ್ಲಿ ಶೇ.51.8. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯವ್ಯಾಪಿ ಮತಪ್ರಮಾಣ ಶೇ.39.7, ಈ 58 ಕ್ಷೇತ್ರಗಳಲ್ಲಿ ಶೇ.46.3. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗಳಿಸಿದ್ದ ಮತಪ್ರಮಾಣ ಶೇ.49.5, ಈ 58 ಕ್ಷೇತ್ರಗಳಲ್ಲಿ ಅದು ಶೇ.56. ಬಿಜೆಪಿಯ ಗೆಲುವನ್ನು ಅಂದಾಜಿಸಲು ಈ ಅಂಕಿ-ಸಂಖ್ಯೆ ಸಾಕು.

ಇದೇ ಬಿಜೆಪಿ 2002ರ ಕಾಲದಲ್ಲಿ ಜಾರು ದಾರಿಯಲ್ಲಿತ್ತು. ರಾಮ ಜನ್ಮಭೂಮಿ ಚಳವಳಿಯ ರಥ ಏರಿ ಹೊರಟಿದ್ದ ಬಿಜೆಪಿ 1991ರಲ್ಲಿ 221 ಸ್ಥಾನಗಳನ್ನು ಗೆದ್ದು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದರ ನಂತರದ ಹತ್ತು ವರ್ಷಗಳ ಅವಧಿಯಲ್ಲಿ ನಡೆದಿದ್ದ ಐದು ಚುನಾ ವಣೆಗಳಲ್ಲಿ ಬಿಜೆಪಿ ಬಲ ಕುಸಿಯುತ್ತಾ ಹೋಗಿ 2012ರಲ್ಲಿ ಅದು 47 ಸದಸ್ಯ ಬಲಕ್ಕೆ ತಲುಪಿತ್ತು. ಈ ನಡುವೆ ಮಾಯಾವತಿಯವರ ಬಿಎಸ್‌ಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ನಾಲ್ಕುವರೆ ವರ್ಷ ಅಧಿಕಾರದಲ್ಲಿದ್ದರೂ 1991ರ ವೈಭವದ ದಿನಗಳನ್ನು ಮರಳಿ ಗಳಿಸಲಾಗಿಲ್ಲ. ಮುಝಫ್ಫರ್‌ನಗರದ ಒಂದು ಗಲಭೆ ಮತ್ತೆ ಬಿಜೆಪಿಯನ್ನು ಗತವೈಭವದ ದಿನಗಳಿಗೆ ಮರಳಿಸಿತ್ತು.

ಮೂರನೆಯದು- 2020ರ ನವೆಂಬರ್‌ನಲ್ಲಿ ಪ್ರಾರಂಭವಾಗಿ ಸುಮಾರು ಒಂದು ವರ್ಷ ಕಾಲ ನಡೆದಿರುವ ರೈತ ಪ್ರತಿಭಟನೆ. ಈ ಚುನಾವಣೆಯಲ್ಲಿಯೂ ಬಿಜೆಪಿಯ ಜೈತ್ರಯಾತ್ರೆ ಸುಗಮವಾಗಿ ಮುಂದು ವರಿಯುತ್ತಿತ್ತೋ ಏನೋ? ಆದರೆ ಪ್ರಕೃತಿದತ್ತ ನ್ಯಾಯದಾನದ ರೀತಿಯಲ್ಲಿ ನಡೆದುಹೋದ ರೈತಚಳವಳಿ ಇಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಪಲ್ಲಟಕ್ಕೆ ಕಾರಣವಾಗಿದೆ. ಕೋಮುಧ್ರುವೀಕರಣದಿಂದಾಗಿ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಅಖಂಡ ಬೆಂಬಲಿಗರಾಗಿದ್ದ ಜಾಟ್ ಸಮುದಾಯ ಬಿಜೆಪಿಯ ಸೋಲನ್ನೇ ಗುರಿಯಾಗಿಟ್ಟುಕೊಂಡು ಚುನಾ ವಣೆಯಲ್ಲಿ ಪಾಲ್ಗೊಳ್ಳುತ್ತಿದೆ. ಕೇವಲ ರೈತವಿರೋಧಿ ಕೃಷಿ ಕಾಯ್ದೆಗಳಿಂದ ಮಾತ್ರವಲ್ಲ ರಾಜ್ಯ ಸರಕಾರದ ಗೋಹತ್ಯೆ ನಿಷೇಧ ಕಾನೂನು, ಕೃಷಿ ಪಂಪ್ ಸೆಟ್‌ಗಳ ವಿದ್ಯುತ್ ದರದ ಏರಿಕೆ ಮತ್ತು ನಿರುದ್ಯೋಗದ ಕಾರಣಗಳಿಂದಾಗಿಯೂ ರೈತ ಸಮುದಾಯ ಬಿಜೆಪಿಗೆ ತಿರುಗಿಬಿದ್ದಂತೆ ಕಾಣುತ್ತಿದೆ.

ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಮುಸ್ಲಿಮ್ ಓಲೈಕೆ ಬಗ್ಗೆ ಅಸಹನೆ ಇದ್ದರೂ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಗೆ ಮತಹಾಕಿದ್ದ ಜಾಟರಲ್ಲಿ ಕನಿಷ್ಠ ಅರ್ಧದಷ್ಟಾದರೂ ವಾಪಸ್ ಬರುವ ನಿರೀಕ್ಷೆಯಿದೆ. ಉತ್ತರಪ್ರದೇಶದಲ್ಲಿ ಸದ್ಯಕ್ಕೆ ಆರ್‌ಎಲ್‌ಡಿಯ ಜಯಂತ್ ಚೌದರಿಯವರನ್ನು ಬಿಟ್ಟರೆ ಜಾಟ್ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಬೇರೆ ನಾಯಕರಿಲ್ಲ. ವಿಧಾನಸಭೆಯಲ್ಲಿ ತಮ್ಮ ಪರವಾದ ದನಿಯಾಗಲಿರುವ ಜಯಂತ್ ಚೌದರಿಯವರನ್ನು ಗೆಲ್ಲಿಸಬೇಕೆಂದು ಜಾಟರು ತೀರ್ಮಾನಿಸಿದಂತಿದೆ.

ಇದೇ ರೀತಿ ಮುಸ್ಲಿಮರಿಗೂ ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಚುನಾವಣಾ ನಂತರದ ಮೈತ್ರಿಯಲ್ಲಿ ಬಿಜೆಪಿ ಕೂಡಾ ಅಸ್ಪೃಶ್ಯ ಅಲ್ಲ ಎಂದು ಈಗಾಗಲೇ ಬಿಎಸ್‌ಪಿ ಹೇಳಿರುವ ಕಾರಣ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದ ಸ್ಥಿತಿಯಲ್ಲಿ ಮುಸ್ಲಿಮರಿಗೂ ಬೇರೆ ಆಯ್ಕೆ ಇಲ್ಲ. ಬಿಎಸ್‌ಪಿಯ ಮಾಯಾವತಿ ಸ್ವಯಂಕೃತ ಅಪರಾಧಗಳಿಂದಾಗಿ ಏಕಾಂಗಿಯಾಗಿದ್ದಾರೆ. ಹದಿನೈದು ವರ್ಷಗಳ ಹಿಂದೆ ಇಲ್ಲಿನ ಜಾಟರ ಕೋಟೆಗೆ ನುಗ್ಗಿ ಬಲಪ್ರದರ್ಶನ ಮಾಡಿದ್ದ ಆನೆ ಬಡಕಲಾಗಿ ಹೋಗಿದೆ. ಒಂದು ಕಾಲದಲ್ಲಿ ಭಾಯಿಚಾರಾದ ಮೂಲಕ ಬಂದಿದ್ದ ಬ್ರಾಹ್ಮಣರು ದೂರವಾಗಿದ್ದಾರೆ, ಮುಸ್ಲಿಮರು ನಂಬಿಕೆ ಕಳೆದುಕೊಂಡಿದ್ದಾರೆ, ದಲಿತರಲ್ಲಿಯೂ ಜಾಟವೇತರ ದಲಿತ ಸಮುದಾಯಗಳಿಗೂ ಬೆಹನ್‌ಜಿ ಬೇಡವಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಆರ್‌ಎಲ್‌ಡಿ-ಎಸ್‌ಪಿ ಮೈತ್ರಿಕೂಟ ಪಶ್ಚಿಮ ಉತ್ತರಪ್ರದೇಶದ ಗೆಲ್ಲುವ ಜೋಡಿಯಾಗಿ ಕಾಣುತ್ತಿದೆ. ಉತ್ತರಪ್ರದೇಶದಲ್ಲಿ ಪ್ರಾರಂಭದಿಂದಲೂ ಯಾದವೇತರ ಹಿಂದುಳಿದ ಜಾತಿಗಳನ್ನು ಒಲಿಸಿಕೊಳ್ಳಲು ಮಾಡಿರುವ ಪ್ರಯತ್ನಕ್ಕೆ ಬಿಹಾರ ರಾಜ್ಯದಲ್ಲಿ ಸಿಕ್ಕಿರುವ ಯಶಸ್ಸು ಇಲ್ಲಿ ಸಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ ಈ ರಾಜ್ಯದಲ್ಲಿ ಒಬ್ಬ ನಿತೀಶ್ ಕುಮಾರ್ ಅವರನ್ನು ಹುಟ್ಟುಹಾಕಲು ಬಿಜೆಪಿಗೆ ಸಾಧ್ಯವಾಗಿಲ್ಲ. ಜಾಣ್ಮೆಯಿಂದ ದಾಳ ಉರುಳಿಸುತ್ತಿರುವ ಅಖಿಲೇಶ್ ಸಿಂಗ್ ಸಾಂಪ್ರದಾಯಿಕ ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮರ ಮತಗಳ ಜೊತೆ ಆರ್‌ಎಲ್‌ಡಿ ಜೊತೆಗಿನ ಮೈತ್ರಿಯಿಂದ ಜಾಟರ ಮತಗಳನ್ನು ಮತ್ತು ದುರ್ಬಲ ಬಿಎಸ್‌ಪಿಯಿಂದಾಗಿ ದೂರವಾಗುತ್ತಿರುವ ಒಂದಷ್ಟು ದಲಿತ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವುದರಿಂದ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿಯನ್ನು ಸಂಪೂರ್ಣವಾಗಿ ಪಕ್ಕಕ್ಕಿಡುವ ಮೊದಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದು ಸಾಧಿಸಿದ್ದ ಅಭೂತಪೂರ್ವ ಗೆಲುವಿನ ಕಡೆಗೊಂದು ನೋಟ ಹರಿಸಲೇಬೇಕು. 2017ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಉತ್ತರಪ್ರದೇಶದ ಐವತ್ತೆಂಟು ಕ್ಷೇತ್ರಗಳಲ್ಲಿ ಐವತ್ತಮೂರನ್ನು ಬಿಜೆಪಿ ಗೆದ್ದಿತ್ತು. ಸಮಾಜವಾದಿ ಮತ್ತು ಬಿಎಸ್‌ಪಿ ತಲಾ ಎರಡು ಮತ್ತು ಆರ್‌ಎಲ್‌ಡಿ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಇವುಗಳಲ್ಲಿ ಕನಿಷ್ಠ ಅರ್ಧದಷ್ಟು ಸ್ಥಾನಗಳನ್ನು ಉಳಿಸಿಕೊಂಡರೂ ಬಿಜೆಪಿ ಸಮಾಧಾನ ಪಟ್ಟುಕೊಳ್ಳಬಹುದು. ಚುನಾವಣೆಗಳಲ್ಲಿ ಸಣ್ಣದಾಗಿ ಏಳುವ ಸುಳಿಗಾಳಿ ಯಾರಿಗೂ ಸುಳಿವೇ ನೀಡದೆ ಸುಂಟರಗಾಳಿಯಾಗುವುದೂ ಇದೆ. ಸಾಮಾನ್ಯವಾಗಿ ಆಡಳಿತಾ ರೂಢ ಪಕ್ಷವೇ ಇಂತಹ ಸುಂಟರಗಾಳಿಗೆ ಬಲಿಯಾಗುವುದು.

share
ದಿನೇಶ್ ಅಮಿನ್ ಮಟ್ಟು
ದಿನೇಶ್ ಅಮಿನ್ ಮಟ್ಟು
Next Story
X