1 ಕ್ರೇಟ್ ಮಾವಿನ ಹಣ್ಣು 31 ಸಾವಿರ ರೂ.ಗೆ ಹರಾಜು !

Photo: ANI
ಮುಂಬೈ: ಪುಣೆಯ ವ್ಯಾಪಾರಿಯೋರ್ವ ಹರಾಜಿನಲ್ಲಿ ಜನಪ್ರಿಯ ಅಲ್ಫೋನ್ಸಾ ಮಾವಿನ ಹಣ್ಣಿನ ಕ್ರೇಟ್ ಅನ್ನು 31 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ಇದು 50 ವರ್ಷಗಳಲ್ಲೇ ಅತ್ಯಂತ ದುಬಾರಿ ಖರೀದಿ ಎಂದು ವ್ಯಾಪಾರಿ ಹೇಳಿಕೊಂಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣಕ್ಕೆ ಬಂದ ಮೊದಲ ಹೊರೆ ಮಾವಿನ ಹಣ್ಣಿನ ಹರಾಜಿನಲ್ಲಿ ವ್ಯಾಪಾರಿಗಳು ಭಾಗವಹಿಸಿದರು. ಮಾವಿನ ಹಣ್ಣಿನ ಋತು ಅಧಿಕೃತವಾಗಿ ಆರಂಭವಾದ ಬಳಿಕ ಎರಡು ತಿಂಗಳಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಿರ್ಧಾರವಾಗುತ್ತದೆ. ಆದುದರಿಂದ ಈ ಹರಾಜು ವ್ಯಾಪಾರಿಗಳಿಗೆ ಮುಖ್ಯವಾಗಿದೆ.
ಯುಟ್ಯೂಬ್ ವೀಡಿಯೊವೊಂದರಲ್ಲಿ ಮಾವಿನ ಹಣ್ಣಿನ ಕ್ರೇಟ್ಗಳಿಗೆ ಹೂವಿನ ಹಾರ ಹಾಕಿರುವುದು ಹಾಗೂ ಜನರು ಅದರ ಮುಂದೆ ನಿಂತು ಈ ಋತುವಿನಲ್ಲಿ ಬಂಪರ್ ವ್ಯಾಪಾರವಾಗಲಿ ಎಂದು ಪ್ರಾರ್ಥಿಸುತ್ತಿರುವುದು ಕಂಡು ಬಂದಿದೆ.
‘‘ಇವು ಈ ಋತುವಿನ ಮೊದಲ ಮಾವಿನ ಹಣ್ಣಿನ ಹೊರೆ. ಇವು ಮಾರುಕಟ್ಟೆಗೆ ಬಂದಾಗ, ಅವರು ಈ ರೀತಿ ಹರಾಜು ಮಾಡುತ್ತಾರೆ. ವ್ಯಾಪಾರಿಗಳು ಖರೀದಿಸಲು ಪ್ರಯತ್ನಿಸುತ್ತಾರೆ’’ ಎಂದು ಮಾವಿನ ಕ್ರೇಟ್ ಅನ್ನು ತಂದ ವ್ಯಕ್ತಿ ಹೇಳಿದ್ದಾರೆ. ಈ ವರ್ಷ ಮಾವಿನ ಹಣ್ಣಿನ ಒಂದು ಕ್ರೇಟ್ನ ಹರಾಜು 5 ಸಾವಿರ ರೂಪಾಯಿಯಿಂದ ಆರಂಭವಾಯಿತು. ಅದು 31 ಸಾವಿರ ರೂಪಾಯಿಗೆ ಖರೀದಿ ಆಯಿತು.
ಆಲ್ಫೋನ್ಸಾ ಅತ್ಯುತ್ತಮ ಮಾವಿನ ಹಣ್ಣು ಎಂದು ವ್ಯಾಪಕವಾಗಿ ಪರಿಗಣಿತವಾಗಿದೆ. ಅಲ್ಲದೆ ಈ ಮಾವಿನ ಹಣ್ಣನ್ನು ಮಾವಿನ ಹಣ್ಣಿನ ರಾಜಾ ಎಂದು ಗುರುತಿಸುತ್ತಾರೆ. ಮಹಾರಾಷ್ಟ್ರದಲ್ಲಿ ಅಲ್ಫೋನ್ಸಾ ಮಾವಿನ ಹಣ್ಣಿನ ಉತ್ಪಾದನೆಯನ್ನು ಮುಖ್ಯವಾಗಿ ಕೊಂಕಣ ಹಾಗೂ ರತ್ನಗಿರಿ ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ.





