Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶಿರವಸ್ತ್ರದೊಂದಿಗೆ ತಲೆ ಎತ್ತಿ...

ಶಿರವಸ್ತ್ರದೊಂದಿಗೆ ತಲೆ ಎತ್ತಿ ಮಿಂಚಿದವರು

ವಾರ್ತಾಭಾರತಿವಾರ್ತಾಭಾರತಿ13 Feb 2022 10:02 AM IST
share

ತಲೆಗೆ ಧರಿಸುವ ಶಿರವಸ್ತ್ರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ, ಜಗತ್ತಿನಾದ್ಯಂತ ಶಿರವಸ್ತ್ರ ಧರಿಸಿಯೇ ಅಗಾಧ ಸಾಧನೆ ಮಾಡಿರುವ ಕೆಲವರ ಕಿರುಪರಿಚಯವನ್ನು ಇಲ್ಲಿ ನೀಡಲಾಗಿದೆ. ಶಿರವಸ್ತ್ರ ಸಾಧನೆಗೆ ಅಡ್ಡಿಯಲ್ಲ ಎನ್ನುವುದನ್ನು ಈ ಸಾಧಕರು ನಿರೂಪಿಸಿದ್ದಾರೆ.

ಮನಮೋಹನ್ ಸಿಂಗ್:

ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆದ ಬಳಿಕ ರಾಜಕೀಯ ಪ್ರವೇಶಿಸಿ ಹಣಕಾಸು ಸಚಿವರಾಗಿ ಹಾಗೂ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಮನಮೋಹನ್ ಸಿಂಗ್ ತಲೆವಸ್ತ್ರ (ಪೇಟ) ಧರಿಸುತ್ತಾರೆ. ಉದಾರೀಕರಣದ ಯುಗದಲ್ಲಿ ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಯನ್ನು ಪ್ರಗತಿಪಥದತ್ತ ಕೊಂಡೊಯ್ದ ರಾಜಕೀಯ ಮತ್ತು ಆರ್ಥಿಕ ಮುತ್ಸದ್ದಿ. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತದ ಆರ್ಥಿಕತೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅವರು ಬಾಲ್ಯದಿಂದಲೂ ಶಿರವಸ್ತ್ರ ಧರಿಸಿಯೇ ಶಿಕ್ಷಣ ಗಳಿಸಿದ್ದರು.

ಪ್ರತಿಭಾ ಪಾಟೀಲ್:

ಭಾರತೀಯ ರಾಜಕಾರಣಿ ಮತ್ತು ವಕೀಲೆಯಾಗಿರುವ ಪ್ರತಿಭಾ ಪಾಟೀಲ್, 2007ರಿಂದ 2012ರವರೆಗೆ ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಈ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದ ಮೊದಲ ಮಹಿಳೆ ಅವರಾಗಿದ್ದಾರೆ. ಅದಕ್ಕೂ ಮೊದಲು, ಅವರು 2004ಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿದ್ದರು. ಅವರು ಸದಾ ತಮ್ಮ ಸೀರೆಯ ಸೆರಗನ್ನು ತಮ್ಮ ತಲೆಗೆ ಹೊದ್ದುಕೊಂಡಿರುತ್ತಾರೆ.

ಮದರ್ ತೆರೇಸಾ (1910-1997):

ನೊಬೆಲ್ ಪ್ರಶಸ್ತಿ ವಿಜೇತ ಸಮಾಜ ಸೇವಕಿ ಮದರ್ ತೆರೇಸಾ ಸಮಾಜದ ದುರ್ಬಲ ವರ್ಗದವರ, ಅಶಕ್ತರ ಮತ್ತು ರೋಗಿಗಳ ಸೇವೆಗಾಗಿ ತನ್ನ ಬದುಕನ್ನು ಮುಡುಪಾಗಿಟ್ಟವರು. 1950ರಲ್ಲಿ ಮಿಶನರೀಸ್ ಆಫ್ ಚಾರಿಟಿಯನ್ನು ಸ್ಥಾಪಿಸಿದ ಅವರು, ಅದರ ಮೂಲಕ ಎಚ್‌ಐವಿ/ಏಡ್ಸ್ ರೋಗಿಗಳು, ಕುಷ್ಠರೋಗಿಗಳು ಮತ್ತು ಕ್ಷಯ ರೋಗಿಗಳಿಗೆ ಆಶ್ರಯ ನೀಡಿ ಅವರ ಸೇವೆ ಮಾಡಿದರು. ಅವರು ಅನಾಥಾಶ್ರಮ ಮತ್ತು ಶಾಲೆಗಳನ್ನೂ ನಡೆಸಿದರು. ಅವರು ಸದಾ ಶಿರವಸ್ತ್ರವನ್ನು ಧರಿಸಿರುತ್ತಿದ್ದರು.

ಹರ್ಕಿಶನ್ ಸಿಂಗ್ ಸುರ್ಜೀತ್ (1916-2008):

ಹರ್ಕಿಶನ್ ಸಿಂಗ್ ಸುರ್ಜೀತ್ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದರು. ಅವರು 1992ರಿಂದ 2005ರವರೆಗೆ ಸಿಪಿಎಮ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1964ರಿಂದ 2008ರವರೆಗೆ ಅವರು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು. ಅವರು ಸದಾ ತಲೆ ಮುಚ್ಚುವ ಪೇಟವನ್ನು ಧರಿಸಿರುತ್ತಿದ್ದರು.

ಸಾವಿತ್ರಿಬಾಯಿ ಫುಲೆ (1831-1897):

ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ಸಮಾಜ ಸುಧಾರಕಿ, ಶಿಕ್ಷಣವಾದಿ ಮತ್ತು ಕವಯಿತ್ರಿ ಆಗಿದ್ದರು. ಅವರು ತನ್ನ ಗಂಡನ ಜೊತೆ ಸೇರಿ ಭಾರತದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಜಾತಿ ಮತ್ತು ಲಿಂಗದ ಆಧಾರದಲ್ಲಿ ಜನರನ್ನು ತಾರತಮ್ಯದಿಂದ ನೋಡುವ ವ್ಯವಸ್ಥೆಯ ರದ್ದತಿಗಾಗಿ ಅವರು ಶ್ರಮಿಸಿದರು. ಅವರನ್ನು ಭಾರತದ ಸಮಾಜ ಸುಧಾರಣಾ ಚಳವಳಿಯಲ್ಲಿ ಮಹತ್ವದ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ಅವರು ಸದಾ ತನ್ನ ತಲೆಗೆ ಸೀರೆಯ ಸೆರಗು ಹೊದ್ದುಕೊಂಡಿರುತ್ತಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ (1778-1829):

ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದರು. ಆ ಹೋರಾಟದಲ್ಲಿ ಅವರು ಜಯಶಾಲಿಯಾದರು. ಆದರೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ವಿರುದ್ಧದ ಎರಡನೇ ಯುದ್ಧದಲ್ಲಿ ಅವರು ಸೆರೆಸಿಕ್ಕಿ ಜೈಲಿನಲ್ಲಿ ಮೃತಪಟ್ಟರು. ಅವರು ಭಾರತೀಯ ಸ್ವಾತಂತ್ರ ಚಳವಳಿಯ ಸಂಕೇತವಾದರು. ಅವರು ಯಾವಾಗಲೂ ತಲೆಯ ಮೇಲೆ ಸೀರೆಯ ಸೆರಗು ಹೊದ್ದುಕೊಂಡಿರುತ್ತಿದ್ದರು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ (1828-1858):

ಝಾನ್ಸಿ ರಾಣಿ ಲಕ್ಷ್ಮೀಬಾಯಿ 1843ರಿಂದ 1853ರವರೆಗೆ ಮರಾಠ ರಾಜ್ಯ ಝಾನ್ಸಿಯ ರಾಣಿಯಾಗಿದ್ದರು. 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಭಾರತೀಯ ಪ್ರತಿರೋಧದ ಸಂಕೇತವಾದರು. ಅವರು ಸದಾ ತನ್ನ ಸೀರೆಯ ಸೆರಗನ್ನು ತಲೆಯ ಮೇಲೆ ಹೊದ್ದುಕೊಂಡಿರುತ್ತಿದ್ದರು.

ಊದಾ ದೇವಿ:

ಊದಾ ದೇವಿ ದಲಿತ ಸ್ವಾತಂತ್ರ ಹೋರಾಟಗಾರ್ತಿಯಾಗಿದ್ದು, 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ವಿರುದ್ಧ ಹೋರಾಡಿದರು. ಮೇಲ್ವರ್ಗದವರು ಬರೆದಿರುವ ಇತಿಹಾಸಗಳು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದ ಮೇಲ್ಜಾತಿಯ ಹೋರಾಟಗಾರ್ತಿಯರಿಗೆ ಪ್ರಾಮುಖ್ಯತೆ ನೀಡಿವೆ. ಆದರೆ, ಸ್ವಾತಂತ್ರ ಹೋರಾಟದಲ್ಲಿ ಊದಾ ದೇವಿಯಂತಹ ದಲಿತ ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ. ಊದಾದೇವಿ ಸದಾ ತಲೆಗೆ ಸೀರೆಯ ಸೆರಗು ಹಾಕಿಕೊಂಡಿರುತ್ತಿದ್ದರು.

ಕಮಲಾ ಸುರಯ್ಯ (1934-2009):

ಕೇರಳದವರಾಗಿದ್ದ ಕಮಲಾ ಸುರಯ್ಯ ಇಂಗ್ಲಿಷ್‌ನಲ್ಲಿ ಬರೆಯುವ ಭಾರತೀಯ ಕವಯಿತ್ರಿಯಾಗಿದ್ದರು. ಅವರು ಮಲಯಾಳಂನಲ್ಲಿ ಬರೆಯುವ ಲೇಖಕಿಯೂ ಆಗಿದ್ದರು. ಮಹಿಳಾವಾದಿ ನಿಲುವುಗಳಿಗೆ ಅವರು ಖ್ಯಾತರಾಗಿದ್ದರು. ಸಂಪ್ರದಾಯವಾದಿ ಹಿಂದೂ ನಾಯರ್ ಕುಟುಂಬದಲ್ಲಿ ಕಮಲಾ ಆಗಿ ಜನಿಸಿದ ಅವರು, ಮದುವೆಯಾದ ಬಳಿಕ ಕಮಲಾ ದಾಸ್ ಆದರು. 1999 ಡಿಸೆಂಬರ್ 11ರಂದು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು, ತನ್ನ ಹೆಸರನ್ನು ಕಮಲಾ ಸುರಯ್ಯ ಎಂಬುದಾಗಿ ಬದಲಾಯಿಸಿದರು. ಮತಾಂತರಗೊಂಡ ಬಳಿಕ ಅವರು ಬುರ್ಖಾ ಧರಿಸುತ್ತಿದ್ದರು.

ಜನರಲ್ ಬಿಕ್ರಮ್ ಸಿಂಗ್:

ಜನರಲ್ ಬಿಕ್ರಮ್ ಸಿಂಗ್ ಭಾರತೀಯ ಸೇನೆಯ 24ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಅವರು 2012 ಜೂನ್ 1ರಿಂದ 2014 ಜುಲೈ 31ರವರೆಗೆ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು. ಅವರು ಭಾರತೀಯ ಸೇನೆಯ ಮುಖ್ಯಸ್ಥನ ಹುದ್ದೆಯನ್ನು ಏರಿದ ಎರಡನೇ ಸಿಖ್ ಆಗಿದ್ದಾರೆ. ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಸೇನಾ ಪದಕ ಮತ್ತು ಕಮಾಂಡರ್ ಆಫ್ ದ ಲೀಜನ್ ಆಫ್ ಮೆರಿಟ್ ಪ್ರಶಸ್ತಿಗಳು ಲಭಿಸಿವೆ. ಅವರು ತಲೆ ಮುಚ್ಚುವ ಪೇಟವನ್ನು ಯಾವಾಗಲೂ ಧರಿಸುತ್ತಾರೆ.

ಶೇಖ್ ಹಸೀನಾ ವಾಜಿದ್:

ಶೇಖ್ ಹಸೀನಾ ವಾಜಿದ್ 2009 ಜನವರಿಯಿಂದ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು 1996 ಜೂನ್‌ನಿಂದ 2001 ಜುಲೈವರೆಗೆ ಆ ದೇಶದ ಪ್ರಧಾನಿಯಾಗಿದ್ದರು. ಅವರು ಬಾಂಗ್ಲಾದೇಶದ ಇತಿಹಾಸದಲ್ಲೇ ಅತಿ ಹೆಚ್ಚಿನ ಅವಧಿಗೆ ಅಂದರೆ ಒಟ್ಟು 18 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸೀರೆಯ ಸೆರಗನ್ನು ಸದಾ ತಲೆಯ ಮೇಲೆ ಹೊದ್ದುಕೊಂಡಿರುತ್ತಾರೆ.

 ಬೇನಝೀರ್ ಭುಟ್ಟೊ (1953-2007):

ಬೇನಝೀರ್ ಭುಟ್ಟೊ 1988ರಿಂದ 1990 ಮತ್ತು 1993ರಿಂದ 1996ರವರೆಗೆ ಕ್ರಮವಾಗಿ ಪಾಕಿಸ್ತಾನದ 11 ಮತ್ತು 13ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರು ಮುಸ್ಲಿಮ್ ಬಹುಸಂಖ್ಯಾತ ದೇಶವೊಂದರಲ್ಲಿ ಪ್ರಜಾಸತ್ತಾತ್ಮಕ ಸರಕಾರವೊಂದರ ನೇತೃತ್ವವನ್ನು ವಹಿಸಿದ ಮೊದಲ ಮಹಿಳೆಯಾಗಿದ್ದರು. ಅವರು 1980ರ ದಶಕದ ಆರಂಭದಿಂದ 2007ರಲ್ಲಿ ಹತ್ಯೆಯಾಗುವವರೆಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಅಥವಾ ಉಪಾಧ್ಯಕ್ಷೆಯಾಗಿದ್ದರು. ಅವರು ಹಿಜಾಬ್ ಧರಿಸುತ್ತಿದ್ದರು.

ಹಲೀಮಾ ಯಾಕೂಬ್:

ಹಲೀಮಾ ಯಾಕೂಬ್ ಸಿಂಗಾಪುರದ ಅಧ್ಯಕ್ಷೆಯಾಗಿದ್ದಾರೆ. ಅವರು ದೇಶದ ಇತಿಹಾಸದಲ್ಲೇ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಪೀಪಲ್ಸ್ ಆ್ಯಕ್ಷನ್ ಪಾರ್ಟಿಗೆ ರಾಜೀನಾಮೆ ನೀಡಿದ ಅವರು 2017ರಲ್ಲಿ ಸಿಂಗಾಪುರ ಅಧ್ಯಕ್ಷ ಹುದ್ದೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಎದುರಾಳಿಯು ಸ್ಪರ್ಧಾ ಕಣದಿಂದ ಹಿಂದೆ ಸರಿದ ಕಾರಣ ಅವರು ಯಾವುದೇ ಪ್ರತಿರೋಧವಿಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಸದಾ ಹಿಜಾಬ್ ಧರಿಸಿರುತ್ತಾರೆ.

ಸಮಿಯಾ ಸುಲುಹು ಹಸನ್:

ಸಮಿಯಾ ಸುಲುಹು ಹಸನ್ ತಾಂಝಾನಿಯದ ಅಧ್ಯಕ್ಷೆಯಾಗಿದ್ದಾರೆ. ಅವರು ಈಸ್ಟ್ ಆಫ್ರಿಕನ್ ಕಮ್ಯುನಿಟಿ (ಇಎಸಿ) ದೇಶವೊಂದರ ಸರಕಾರದ ಆರನೇ ಮಹಿಳಾ ಮುಖ್ಯಸ್ಥರಾಗಿದ್ದಾರೆ. ಅವರು ತಾಂಝಾನಿಯದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಜಾನ್ ಮಗುಫುಲಿಯ ಸಾವಿನ ಬಳಿಕ ಸಮಿಯಾ 2021 ಮಾರ್ಚ್ 19ರಂದು ದೇಶದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರು ಹಿಜಾಬ್ ಧರಿಸುತ್ತಾರೆ.

ಯಾಸ್ಮೀನ್ ಅಬ್ದುಲ್ ಮಜೀದ್:

ಯಾಸ್ಮೀನ್ ಅಬ್ದುಲ್ ಮಜೀದ್ ಭಾರೀ ಸಾಹಸಮಯವಾದ ‘ಫಾರ್ಮುಲಾ ವನ್’ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಚಾಲಕಿಯಾಗಿ ಭಾಗವಹಿಸಿದ ಪ್ರಥಮ ಮುಸ್ಲಿಮ್ ಮಹಿಳಾ ಸ್ಪರ್ಧಿಯಾಗಿದ್ದಾರೆ. ಸುಡಾನ್ ಸಂಜಾತ ಯಾಸ್ಮೀನ್ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾರೆ. ಬ್ರಿಸ್ಬೇನ್ ವಿಶ್ವವಿದ್ಯಾನಿಲಯದಿಂದ ಪದವೀಧರರಾದ ಅವರಿಗೆ ಫೆರಾರಿ ಕಾರುಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರು ಹಿಜಾಬ್ ಧರಿಸುತ್ತಾರೆ.

ಲಾಲಿಹ್ ಸಿದ್ದೀಕ್:

ಸದಾ ಸ್ಕಾರ್ಫ್ ಧರಿಸಿಯೇ ಕಾಣಿಸಿಕೊಳ್ಳುವ ಲಾಲಿಹ್ ಸಿದ್ದೀಕ್ ಇರಾನ್‌ನ ಫಾರ್ಮುಲಾ-3 ಕಾರ್ ರೇಸಿಂಗ್ ಸ್ಪರ್ಧಿಯಾಗಿದ್ದಾರೆ. ಅವರನ್ನು ಇರಾನ್‌ನ ಅತ್ಯಂತ ಜನಪ್ರಿಯ ಕ್ರೀಡಾಳುಗಳ ಪೈಕಿ ಒಬ್ಬರೆಂದು ಪರಿಗಣಿಸಲಾಗಿದೆ.

ಅಸೀಲ್ ಅಲ್-ಹಮಾದ್:

ಅಸೀಲ್ ಅಲ್-ಹಮಾದ್ ಸೌದಿ ಅರೇಬಿಯದ ಇಂಟೀರಿಯರ್ ಡಿಸೈನರ್, ಇಂಜಿನಿಯರ್ ಮತ್ತು ಮೋಟೊಸ್ಪೋರ್ಟ್ ಆಸಕ್ತೆ. ಅವರು ಸೌದಿ ಅರೇಬಿಯನ್ ಮೋಟರ್ ಫೆಡರೇಶನ್‌ನ ಕಾರ್ಯಕಾರಿ ಮಂಡಳಿಯ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ಈಗ ಅವರು ಅಂತರ್‌ರಾಷ್ಟ್ರೀಯ ಆಟೊಮೊಬೈಲ್ ಫೆಡರೇಶನ್‌ನ ಸದಸ್ಯೆಯಾಗಿದ್ದಾರೆ.

ಖದೀಜಾ ಮೆಲ್ಲಾ:

ಖದೀಜಾ ಮೆಲ್ಲಾ ಸ್ಪರ್ಧಾತ್ಮಕ ಬ್ರಿಟಿಷ್ ಕುದುರೆ ರೇಸ್‌ನಲ್ಲಿ ಮೊದಲ ಹಿಜಾಬ್‌ಧಾರಿ ಜಾಕಿಯಾಗಿದ್ದರು. ಕುದುರೆ ರೇಸ್‌ಗೆ ಹೊಸಬರಾಗಿದ್ದರೂ, ಅವರು ತನ್ನ ಕುದುರೆ ‘ಹ್ಯಾವರ್‌ಲ್ಯಾಂಡ್’ ಮೂಲಕ ಮ್ಯಾಗ್ನೋಲಿಯ ಕಪ್ ಗೆದ್ದರು. ಅವರ ಬಗ್ಗೆ 2019ರಲ್ಲಿ ‘ರೈಡಿಂಗ್ ದ ಡ್ರೀಮ್’ ಎಂಬ ಹೆಸರಿನಲ್ಲಿ ಟಿವಿ ಸಾಕ್ಷಚಿತ್ರವೊಂದನ್ನು ನಿರ್ಮಿಸಲಾಗಿದೆ.

ಇಲ್ಹಾನ್ ಉಮರ್:

ಇಲ್ಹಾನ್ ಅಬ್ದುಲ್ಲಾಹಿ ಉಮರ್ ಅಮೆರಿಕದ ಹಾಲಿ ಸಂಸದೆ. ಸೊಮಾಲಿಯ ಮೂಲದ ಇಲ್ಹಾನ್ ಅಮೆರಿಕದ ಸಂಸತ್ತು ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನಲ್ಲಿ 2019ರಿಂದ ಮಿನಸೋಟ ರಾಜ್ಯದ 5ನೇ ಕಾಂಗ್ರೆಸ್ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಡೆಮಾಕ್ರಟಿಕ್ ಫಾರ್ಮರ್ ಲೇಬರ್ ಪಕ್ಷದ ಸದಸ್ಯೆ. ಅವರು ಹಿಜಾಬ್ ಧರಿಸಿಯೇ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುತ್ತಾರೆ.

ಕೇಟ್ ಮಿಡಲ್‌ಟನ್:

ಬ್ರಿಟನ್ ರಾಜಕುಮಾರ ಹಾಗೂ ಕೇಂಬ್ರಿಜ್‌ನ ಡ್ಯೂಕ್ ವಿಲಿಯಮ್‌ರ ಪತ್ನಿ ಕೇಟ್ ಮಿಡಲ್‌ಟನ್ ಬ್ರಿಟನ್ ರಾಜ ಕುಟುಂಬದ ಸದಸ್ಯೆಯಾಗಿದ್ದಾರೆ. ಅವರು ಕೇಂಬ್ರಿಜ್‌ನ ಡಚೆಸ್ ಆಗಿದ್ದಾರೆ. 2019ರಲ್ಲಿ ವಿಲಿಯಮ್ ಮತ್ತು ಕೇಟ್ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಲಾಹೋರ್‌ನಲ್ಲಿರುವ ಬಾದ್‌ಶಾ ಮಸೀದಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೇಟ್ ಮಿಡಲ್‌ಟನ್ ಹಿಜಾಬ್ ಧರಿಸಿದ್ದರು.

ಲಿಂಡ್ಸೇ ಲೋಹನ್:

ಲಿಂಡ್ಸೇ ಲೋಹನ್ ಅಮೆರಿಕದ ನಟಿ, ರೂಪದರ್ಶಿ, ಗಾಯಕಿ, ಪದ್ಯಬರಹಗಾರ್ತಿ, ನಿರ್ಮಾಪಕಿ ಮತ್ತು ಉದ್ಯಮಿಯಾಗಿದ್ದಾರೆ. ಲಂಡನ್ ಮೋಡೆಸ್ಟ್ ಫ್ಯಾಶನ್ ವೀಕ್‌ನಲ್ಲಿ ಹಿಜಾಬ್ ಧರಿಸಿ ಭಾಗವಹಿಸಿ ಅವರು ಎಲ್ಲರ ಗಮನ ಸೆಳೆದರು.

ಇಬ್ತಿಹಾಜ್ ಮುಹಮ್ಮದ್:

ಇಬ್ತಿಹಾಜ್ ಮುಹಮ್ಮದ್ ಅಮೆರಿಕದ ಕತ್ತಿವರಸೆ ಪಟು ಆಗಿದ್ದಾರೆ. 2016ರ ರಿಯೋ ಡಿ ಜನೈರೋ ಒಲಿಂಪಿಕ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ ಅವರು, ಟೀಮ್ ಸ್ಯಾಬರ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಒಲಿಂಪಿಕ್ಸ್‌ನ ಕ್ರೀಡೆಯೊಂದರಲ್ಲಿ ಹಿಜಾಬ್ ಧರಿಸಿ ಸ್ಪರ್ಧಿಸಿದ ಅಮೆರಿಕದ ಮೊದಲ ಮಹಿಳೆಯಾಗಿ ದಾಖಲೆ ನಿರ್ಮಿಸಿದರು. ಅವರು ಒಲಿಂಪಿಕ್ಸ್‌ನಲ್ಲಿ ಪದಕವೊಂದನ್ನು ಗೆದ್ದ ಮೊದಲ ಮಹಿಳಾ ಮುಸ್ಲಿಮ್-ಅಮೆರಿಕನ್ ಅತ್ಲೀಟ್ ಕೂಡ ಆಗಿದ್ದಾರೆ.

ಸಾರಾ ಅಹ್ಮದ್:

ಈಜಿಪ್ಟ್‌ನ ವೇಟ್‌ಲಿಫ್ಟರ್ ಸಾರಾ ಅಹ್ಮದ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯ 69 ಕೆಜಿ ವಿಭಾಗದಲ್ಲಿ ಹಿಜಾಬ್ ಧರಿಸಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದರು. ಅವರು ಒಟ್ಟು 255 ಕೆಜಿ ಭಾರ ಎತ್ತಿದರು. ಅದು 1948ರ ಬಳಿಕ ಈಜಿಪ್ಟ್‌ನ ಮೊದಲ ವೇಟ್‌ಲಿಫ್ಟಿಂಗ್ ಪದಕವಾಗಿತ್ತು. ಅದು ಒಲಿಂಪಿಕ್ಸ್ ಒಂದರ ಯಾವುದೇ ಕ್ರೀಡೆಯಲ್ಲಿ ಅರಬ್ ದೇಶವೊಂದರ ಮಹಿಳೆಗೆ ಸಿಕ್ಕಿದ ಮೊದಲ ಪದಕವಾಗಿತ್ತು.

ರಫಿಯಾ ಅರ್ಶದ್:

ನಲ್ವತ್ತು ವರ್ಷದ ಬ್ರಿಟಿಶ್ ಮುಸ್ಲಿಮ್ ಮಹಿಳೆ ರಫಿಯಾ ಅರ್ಶದ್ 2020ರ ಮೇ ತಿಂಗಳಲ್ಲಿ ಮಿಡ್‌ಲ್ಯಾಂಡ್ಸ್ ಸರ್ಕೀಟ್‌ನ ಉಪ ಜಿಲ್ಲಾ ನ್ಯಾಯಾಧೀಶೆಯಾಗಿ ನೇಮಕಗೊಂಡರು. ಇದರೊಂದಿಗೆ ಅವರು ಮೊದಲ ಬ್ರಿಟಿಷ್ ಹಿಜಾಬ್‌ಧಾರಿ ನ್ಯಾಯಾಧೀಶರಾದರು.

‘‘ಸ್ಕಾಲರ್‌ಶಿಪ್ ಸಂದರ್ಶನವೊಂದಕ್ಕೆ ಹೋಗುವ ಮುನ್ನ ಹಿಜಾಬನ್ನು ತೆಗೆದುಹೋಗುವಂತೆ ನನ್ನ ಕುಟುಂಬ ಸದಸ್ಯರು ಹೇಳಿದರು. ಹಿಜಾಬ್ ನನ್ನ ಆಯ್ಕೆಯ ಅವಕಾಶಗಳನ್ನು ಕಡಿಮೆ ಮಾಡುತ್ತದೆ ಎನ್ನುವ ಭೀತಿಯನ್ನು ಅವರು ಹೊಂದಿದ್ದರು. ಅದು ನನ್ನ ವೃತ್ತಿಜೀವನದ ನಿರ್ಣಾಯಕ ಕ್ಷಣವಾಗಿತ್ತು. ಆದರೆ, ನಾನು ಅಪಾಯವನ್ನು ಎದುರಿಸಲು ಸಿದ್ಧಳಾದೆ ಹಾಗೂ ಹಿಜಾಬ್ ಧರಿಸಿಯೇ ಸಂದರ್ಶನಕ್ಕೆ ಹಾಜರಾದೆ. ನಾನು ಕಾನೂನು ಶಾಲೆಯೊಂದರ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದು ಮಾತ್ರವಲ್ಲ, ಇಂದು 17 ವರ್ಷಗಳ ಕಾನೂನು ಕ್ಷೇತ್ರದ ಅನುಭವದ ಬಳಿಕ ಇದೀಗ ಬ್ರಿಟನ್‌ನ ಮೊದಲ ಹಿಜಾಬ್‌ಧಾರಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದೇನೆ’’ ಎಂಬುದಾಗಿ ರಫಿಯಾ ಅರ್ಶದ್ ಹೇಳಿದ್ದಾರೆ.

ಕಿಮಿಯಾ ಅಲಿಝಾದೇ ಝಿನೂರಿನ್:

ಕಿಮಿಯಾ ಅಲಿಝಾದೇ ಝಿನೂರಿನ್ ಒಲಿಂಪಿಕ್ ಪದಕವೊಂದನ್ನು ಗೆದ್ದ ಇರಾನ್‌ನ ಮೊದಲ ಮಹಿಳಾ ಅತ್ಲೀಟ್ ಆಗಿದ್ದಾರೆ. ಅವರು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಟೇಕ್ವೋಂಡೊ ಕ್ರೀಡೆಯಲ್ಲಿ ಹಿಜಾಬ್ ಧರಿಸಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದರು.

ಮಲಾಲಾ ಯೂಸುಫ್ ಝಾಯಿ:

ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸಿದ ಮಲಾಲಾ ಯೂಸುಫ್ ಝಾಯಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅವರು ಈವರೆಗೆ ನೊಬೆಲ್ ಪ್ರಶಸ್ತಿ ಪಡೆದವರ ಪೈಕಿ ಅತಿ ಕಿರಿಯರಾಗಿದ್ದಾರೆ. ಶಾಲೆಗೆ ಹೋಗುವ ತನ್ನ ಹಕ್ಕನ್ನು ಕೇಳಿರುವುದಕ್ಕಾಗಿ ಪಾಕಿಸ್ತಾನದಲ್ಲಿ ಅವರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ತೀವ್ರವಾಗಿ ಗಾಯಗೊಂಡ ಅವರನ್ನು ಬಳಿಕ ಬ್ರಿಟನ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಚೇತರಿಸಿಕೊಂಡ ಬಳಿಕ ಅವರು ಕುಟುಂಬದೊಂದಿಗೆ ಅಲ್ಲೇ ನೆಲೆಸಿದ್ದಾರೆ.

ಅಸ್ಮತ್ ಶರ್ಮೀನ್:

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು)ದ 2019-20ನೇ ಶೈಕ್ಷಣಿಕ ವರ್ಷದ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‌ನ ವಿದ್ಯಾರ್ಥಿನಿ ಅಸ್ಮತ್ ಶರ್ಮೀನ್ ಟಿ.ಎಸ್. 9.42ರ ಸಿಜಿಪಿಎ ಶ್ರೇಯಾಂಕವನ್ನು ಪಡೆದು 13 ಚಿನ್ನದ ಪದಕಗಳೊಂದಿಗೆ 1ನೇ ರ್ಯಾಂಕ್ ಗಳಿಸಿದ್ದಾರೆ. ಇದು ಒಬ್ಬ ವಿದ್ಯಾರ್ಥಿ ಪಡೆದ ಅತೀ ಹೆಚ್ಚು ಚಿನ್ನದ ಪದಕವಾಗಿತ್ತು. ಅಸ್ಮತ್ ಕಾಸರಗೋಡಿನ ಶರೀಫ್ ಮತ್ತು ಶಹೀದಾ ದಂಪತಿಯ ಪುತ್ರಿ.

ಬದ್ರುನ್ನಿಸಾ:

ಗ್ರಾಮೀಣ ಪ್ರದೇಶವಾದ ಕುಂತೂರು ಸಮೀಪದ ಕೋಚಕಟ್ಟೆ ಗ್ರಾಮೀಣ ಭಾಗದ ಯುವತಿ ಬದ್ರುನ್ನಿಸಾ ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ 39ನೇ ರ್ಯಾಂಕ್‌ನಲ್ಲಿ ಸಬ್ ಇನ್‌ಸ್ಪೆೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

ಕುಂತೂರು - ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯೀಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ಪುತ್ರಿಯಾದ ಬದ್ರುನ್ನಿಸಾ ಬೆಂಗಳೂರಿನ ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಎಸ್ಸಿ ಕೃಷಿ ಪದವಿ ಪಡೆದಿರುತ್ತಾರೆ.

ಅಮ್ರೀನ್ ತಾಜ್:

ಚಿಕ್ಕಬಳ್ಳಾಪುರ ತಾಲೂಕಿನ ಚಿಂತಾಮಣಿಯ ಕೈವಾರದ ನಿವಾಸಿ ಅಮ್ರೀನ್ ತಾಜ್ ಅವರು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆೆಕ್ಟರ್ ಹುದ್ದೆ ಪರೀಕ್ಷೆಯಲ್ಲಿ ಸಬ್‌ಇನ್‌ಸ್ಪೆೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ.

ಅಮ್ರೀನ್ ತಾಜ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಚಿಂತಾಮಣಿಯ ಕೈವಾರದ ಸೈಯದ್ ಬಶೀರ್ ಮತ್ತು ಝೈನಬಾ ದಂಪತಿಯ ಪುತ್ರಿ.

ಮುನ್ಸಿದಾ ಬಾನು:

ಕರ್ನಾಟಕ ರಾಜ್ಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಮುನ್ಸಿದಾ ಬಾನು ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಇವರು ಕೊಯ್ಯೂರು ಗ್ರಾಮದ ನಿವಾಸಿ ಅಬ್ದುಲ್ ಹಕೀಂ ಹಾಗೂ ಮೈಮುನ ದಂಪತಿಯ ಪುತ್ರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X