ಚಿಕ್ಕಮಗಳೂರು: ಎತ್ತಿನಗಾಡಿ ಢಿಕ್ಕಿಯಾಗಿ ಓರ್ವ ಮೃತ್ಯು

ಚಿಕ್ಕಮಗಳೂರು, ಫೆ.13: ಪೈಪೋಟಿಯಲ್ಲಿ ಎತ್ತಿನಗಾಡಿ ಓಡಿಸಿದ ವೇಳೆ ನಿಯಂತ್ರಣ ತಪ್ಪಿ ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ನಡೆದಿದೆ.
ಮೃತರನ್ನು , ಅಜ್ಜಂಪುರ ತಾಲೂಕಿನ ಅಬ್ಬಿನಹೊಳಲು ಗ್ರಾಮದ ನಿವಾಸಿ ಜಕಣಾಚಾರಿ (49) ಎಂದು ಗುರುತಿಸಲಾಗಿದೆ.
ಅಂತರಗಟ್ಟೆ ಜಾತ್ರೆಗೆ ತೆರಳುತ್ತಿದ್ದ ಎತ್ತಿನಗಾಡಿಗಳು ವೇಗವಾಗಿ ಓಡಿಸಲು ಪೈಪೋಟಿ ನಡೆಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅತೀವೇಗದಲ್ಲಿ ಚಲಿಸಿದ ಎತ್ತಿನಗಾಡಿ ಜಕಣಾಚಾರಿಗೆ ಢಿಕ್ಕಿ ಹೊಡೆದು ಉರುಳಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಜಕಣಾಚಾರಿ ಮೃತಪಟ್ಟಿದ್ದಾರೆ. ರಾಸುಗಳಿಗೂ ಗಾಯಗಳಾಗಿವೆ.
Next Story





