ಅಡ್ವೆ-ನಂದಿಕೂರು: ಕೊಟಿ ಚೆನ್ನಯ ಜೋಡುಕರೆ ಕಂಬಳ

ಪಡುಬಿದ್ರಿ: ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಅಡ್ವೆ ನಂದಿಕೂರಿನಲ್ಲಿ ನಡೆದ 29 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವಕ್ಕೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ರವಿವಾರ ಚಾಲನೆ ನೀಡಿ ಶುಭ ಹಾರೈಸಿದರು.
ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವೈ.ಪ್ರಪುಲ್ಲ ಶೆಟ್ಟಿ. ಅಡ್ವೆ ಮಹಾಗಣಪತಿ ದೇವಸ್ಥಾನದ ಜೆನ್ನಿ ರವಿಶಂಕರ ಭಟ್, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ದಿನೇಶ್ ಭಟ್, ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಸುಂದರ ಯು ಸುವರ್ಣ, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಅಡ್ವೆ ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ, ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ, ಅಡ್ವೆ ಕಂಕಣಗುತ್ತು ಅಶ್ರಿತ್ ಹರೀಶ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಶಶಿಕುಮಾರ ಶೆಟ್ಟಿ ಸಾಂತೂರು ಬಾಲ್ಕಟ್ಟ ಮನೆ, ಕಾರ್ಯದರ್ಶಿಗಳಾದ ಶಶಿಧರ ಹೆಗ್ಡೆ ಅಡ್ವೆ, ಉದಯ ರೈ ಅರಂತಡೆ, ಕೃಷ್ಣಕುಮಾರ್ ಶೆಟ್ಟಿ ಸನ್ನೋಣಿ, ಕೋಶಾಧಿಕಾರಿಗಳಾದ ಲಕ್ಷ್ಮಣ್ ಎಲ್ ಶೆಟ್ಟಿ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಜೊತೆ ಕೋಶಾಧಿಕಾರಿಗಳಾದ ಅಮರನಾಥ ಶೆಟ್ಟಿ ಅಣ್ಣಾಜಿಗೋಳಿ, ಗಣೇಶ್‍ರಾಜ್ ಶೆಟ್ಟಿ ಅಡ್ವೆ, ರವೀಂದ್ರ ಪ್ರಭು ಸಾಂತೂರು, ಶೇಖರ ಶೆಟ್ಟಿ ಪಲಿಮಾರು ಭೋಜ ಶೆಟ್ಟಿ, ಅರುಣ್ ಶೆಟ್ಟಿ, ಲೀಲಾಧರ ಸಿ ಕುಂದರ್ ಅಡ್ವೆ, ಪ್ರವೀಣ್ ಕುಮಾರ್, ವಿನೋದ್ ಶೆಟ್ಟಿ, ಸುಧಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಂಕಣಗುತ್ತು ದಿ. ಹರೀಶ್ ಶೆಟ್ಟಿ ಸ್ಮರಣಾರ್ಥ ಮನೆಯವರು ಹಾಗೂ ಹಿತೈಷಿಗಳಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಕನೆ ಹಲಗೆ, ಅಡ್ಡ ಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ನೂರಾರು ಜೊತೆ ಕೋಣಗಳು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದವು.