ಧಾರ್ಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು: ಪ್ರೊ. ಅಲಿಕುಟ್ಟಿ ಉಸ್ತಾದ್
ಉಳ್ಳಾಲ ಉರೂಸ್ - ಸನದುದಾನ ಸಮ್ಮೇಳನ

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಸನದು ದಾನ ಮಹಾ ಸಮ್ಮೇಳನ ರವಿವಾರ ದರ್ಗಾ ವಠಾರದಲ್ಲಿ ನಡೆಯಿತು. ಅಲಿ ಕುಟ್ಟಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಭಂಡಾರವಾಗಿಟ್ಟುಕೊಂಡು ಮೌನ ಆಗಿರಬಾರದು. ಇಲ್ಲಿ ಪಡೆದ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ನೀವು ಪ್ರವಾದಿಯವರ ಉತ್ತರಾಧಿಕಾರಿಗಳು ಎಂದು ಹೇಳಿದರು.
ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸೈಯದ್ ಅಲಿ ಬಾಫಕಿ ತಂಗಳ್ ದುಆ ಹಾಗೂ ಪದವಿ ಪ್ರದಾನ ಮಾಡಿದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಕೇಂದ್ರ ಜುಮ್ಮಾ ಇಮಾಮ್, ಅನ್ವರ್ ಅಲಿ ದಾರಿಮಿ, ಮುಫತ್ತಿಸ್ ಹನೀಫ್ ಸಖಾಫಿ, ಯು.ಎಸ್. ಅಬೂಬಕ್ಕರ್ ಹಾಜಿ, ಶರೀಫ್ ಅರ್ಶದಿ, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಕಾರ್ಯದರ್ಶಿ ಅಸೀಫ್ ಅಬ್ದುಲ್ಲಾ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಸ್ವಯಂ ಸೇವಕ ತಂಡದ ನಾಯಕ ಮುಸ್ತಫಾ ಅಬ್ದುಲ್ಲ, ಯುಬಿಎಂ ಮುಹಮ್ಮದ್ ಹಾಜಿ ಉಚ್ಚಿಲ, ಹನೀಫ್ ದಾರಿಮಿ, ಕೌನ್ಸಿಲರ್ ಅಬ್ದುಲ್ ಜಬ್ಬಾರ್ ಹಮೀದ್ ಕೋಡಿ, ಅಲಿಮೋನು, ಜಮಾಲ್ ಬಾರ್ಲಿ, ಎಂ.ಹೆಚ್. ಇಬ್ರಾಹಿಂ, ಅಬ್ದುಲ್ ಮಜೀದ್ ಸಿತಾರ್, ಅಬ್ಬಾಸ್ ಹಾಜಿ ಹಳೆಮನೆ, ಕೋಟೆಪುರ, ಕಬೀರ್ ಚಾಯಬ್ಬ, ಅಝೀಝ್ ಪರ್ತಿಪ್ಪಾಡಿ, ಯೂಸುಫ್ ಉಳ್ಳಾಲ್, ಅಬ್ಬಾಸ್ ಹಾಜಿ, ಕೆನರಾ, ಬಶೀರ್ ಕರಾಯ, ಪಂಪ್ ವೆಲ್ ಮಸೀದಿ ಇಮಾಮ್ ಅಬ್ದುಲ್ ರಹಿಮಾನ್ ಸಖಾಫಿ, ಮುದರ್ರಿಸ್ ಮಜೀದ್ ಸಖಾಫಿ, ಉದ್ಯಮಿ, ಹೈದರ್ ದಾರಿಮಿ, ಹಸೈನಾರ್ ಬೊಟ್ಟು, ಇಬ್ರಾಹಿಂ ಅಹ್ಸನಿ, ಎ.ಕೆ.ಮೊಯ್ದಿನ್ ಹಾಜಿ, ಹೈದರ್ ಮದನಿ, ಅಬೂಬಕ್ಕರ್ ಹಾಜಿ, ಬಾಸಿತ್ ಮದನಿ, ಉಮ್ಮರ್ ಫೈಝಿ ಸಾಲ್ಮರ, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ಹಸೈನಾರ್ ಬೊಟ್ಟು, ಅಬ್ದುಲ್ ರಹಿಮಾನ್ ಮೇಲಂ ನಿಝಾಂ ಮೇಲಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.










