ಮಂಗಳೂರು: ಅಸ್ಸಾಂ ಸಿಎಂ ವಿರುದ್ಧ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು, ಫೆ.13: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ನೀಡಿದ ಅವಹೇಳನಕಾರಿ ಹೇಳಿಕೆಯ ವಿರುದ್ಧ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ ನೇತೃತ್ವದಲ್ಲಿ ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಮಂಗಳೂರು ಮಿನಿ ವಿಧಾನಸೌದ ಮುಂದೆ ರವಿವಾರ ಪ್ರತಿಭಟನೆ ನಡೆಯಿತು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಅಸ್ಸಾಂ ಮುಖ್ಯಮಂತ್ರಿಯ ಅವಹೇಳನಕಾರಿ ಹೇಳಿಕೆಯು ಖಂಡನೀಯ. ಹಿಮಂತ್ ಬಿಸ್ವ ಶರ್ಮ ನಾಲಗೆಯನ್ನು ಹಿಡಿತದಲ್ಲಿಟ್ಟು ಮಾತನಾಡಬೇಕು ಮತ್ತು ರಾಹುಲ್ ಗಾಂಧಿಯ ಕುಟುಂಬದ ಹಿನ್ನೆಲೆ ತಿಳಿದುಕೊಳ್ಳಬೇಕು ಎಂದು ಗಿರೀಶ್ ಆಳ್ವ ಹೇಳಿದರು.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಡಿಸೋಜ, ಮಹಿಳಾ ಕಾಂಗ್ರೆಸ್ಸಿನ ಮಂಜುಳಾ ನಾಯಕ್, ಎನ್‌ಎಸ್‌ಯುಐ ಕಾರ್ಯದರ್ಶಿ ಸುಹಾನ್ ಆಳ್ವ, ಆಶಿತ್ ಪಿರೇರಾ ಮಾತನಾಡಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಾಕೇಶ್ ದೇವಾಡಿಗ, ಜಯಕುಮಾರ್ ಮೂಡುಬಿದಿರೆ, ಅಶೋಕ್ ಪೂಜಾರ್ ಮುಲ್ಕಿ, ಜೈಸನ್ ಸುರತ್ಕಲ್, ಮುಫೀದ್ ಗುರುಪುರ, ರಾಜ್ಯ ಕಾರ್ಯದರ್ಶಿ ನಾಸಿರ್ ಸಾಮಣಿಗೆ, ಗಿರೀಶ್ ಶೆಟ್ಟಿ, ಚೇತನ್ ಉರ್ವ, ಯೋಗೀಶ್ ನಾಯಕ್, ಸಮರ್ಥ್ ಭಟ್, ಅಶ್ರಫ್ ಅಡ್ಯಾರ್, ನಿತೇಶ್ ಶೆಟ್ಟಿ, ನಿಕಿಲ್ ಪೂಜಾರಿ, ವಿಶಾಲ್ ಶೆಟ್ಟಿ, ನವಾಝ್ ಜೆಪ್ಪು, ಶೇಖ್ ಸೈಫ್, ದಿಲ್‌ಶಾದ್, ನಿಕಿಲ್ ಶೆಟ್ಟಿ, ಶೊನಿತ್ ಬಂಗೇರ, ಶಾನ್ ಸಿರಿ, ಕೃಸ್ಟನ್ ಪಿಂಟೋ, ಅಸಿಫ್ ಬಜಾಲ್, ಸಂಜನಾ ಚಲವಾದಿ, ನಯೀಂ ಬಂದರ್, ರಹ್ಮತ್ ಕುದ್ರೋಳಿ, ವೆಲ್ವಿನ್, ಕ್ಲಿಫರ್ಡ್ ಸೋನ್ಸ್, ಸಂದೇಶ್ ಲೋಬೊ, ಪ್ರಮಿತ್ ಪೂಜಾರಿ ಮಂಜುನಾಥ್ ಕೆಂಬಾರ್, ಅಖಿಲ್, ರಾಹಿಲ್ ಉಪಸ್ಥಿತರಿದ್ದರು.
ಮಂಗಳೂರು ನಗರ ದಕ್ಷಿಣ ಬ್ಲಾಕ್ ಅಧ್ಯಕ್ಷ ಸುನಿಲ್ ಪೂಜಾರಿ ಸ್ವಾಗತಿಸಿದರು. ಅನ್ಸಾರುದ್ದೀನ್ ಸಾಲ್ಮರ ವಂದಿಸಿದರು.