ತುಳು ಪಾಡ್ದನ ಸಮೀಕ್ಷೆ: ಪ್ರಿಯಾಗೆ ಪ್ರಥಮ ಬಹುಮಾನ

ಉಡುಪಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ತುಳು ಪಾಡ್ದನ ಸಮೀಕ್ಷೆ ಕುರಿತ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಿಯಾ ಪ್ರಥಮ ಬಹುಮಾನ 2,000ರೂ. ಪಡೆದಿದ್ದಾರೆ.
ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಮಲ್ಲಿಕಾ ದ್ವಿತೀಯ ಬಹುಮಾನ(1500 ರೂ.) ಪಡೆದರೆ, ಅದೇ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಶುಭಧರ ತೃತೀಯ ಬಹುಮಾನ (1000ರೂ.) ಗೆದ್ದುಕೊಂಡಿದ್ದಾರೆ.
‘ನನಗೆ ಪಾಡ್ದನ ಅಂದರೆ ಏನು ಎಂದೇ ಗೊತ್ತಿರಲಿಲ್ಲ. ಈ ಸ್ಪರ್ಧೆ ತುಳು ಪಾಡ್ದನಗಳ ಅಧ್ಯಯನಕ್ಕೆ ಪ್ರೇರಣೆ ನೀಡಿದೆ ಎಂದು ಬಹುಮಾನ ವಿಜೇತೆ ಮಲ್ಲಿಕಾ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
Next Story





