ಉಡುಪಿ: ‘ಸ್ಟ್ಯಾಂಡ್ ಅಪ್ ಫಾರ್ ಚಿಲ್ಡ್ರನ್’ ಮರಳು ಶಿಲ್ಪ ರಚನೆ

ಉಡುಪಿ, ಫೆ.13: ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ವತಿಯಿಂದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಆಯೋಜನೆಯಲ್ಲಿ ‘ಸ್ಟ್ಯಾಂಡ್ ಅಪ್ ಫಾರ್ ಚಿಲ್ಡ್ರನ್’ ಮರಳು ಶಿಲ್ಪಾ ಕೃತಿಯನ್ನು ರವಿವಾರ ಮಲ್ಪೆ ಬೀಚ್‌ನಲ್ಲಿ ರಚಿಸಲಾಯಿತು.
ಉಡುಪಿಯ ಸ್ಯಾಂಡ್ ಥೀಂ ತಂಡ ರಚಿಸಿರುವ ಈ ಕಲಾಕೃತಿಯು ಮಕ್ಕಳಲ್ಲಾಗುವ ಪರಿಣಾಮ ಮತ್ತು ಅವರಿಗೆ ಬೇಕಾದ ಆತ್ಮಸ್ಥೈರ್ಯವನ್ನು ಬಿಂಬಿಸುತ್ತದೆ. ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಪ್ರಸಾದ್ ಆರ್. 4x7 ಅಡಿ ವಿಸ್ತ್ರೀರ್ಣದ ಈ ಕಲಾಕೃತಿಯನ್ನು ರಚಿಸಿದ್ದಾರೆ.
Next Story





