ಹಿಜಾಬ್ಧಾರಿಗಳಿಗೆ ಶಿಕ್ಷಣದ ಅವಕಾಶ ಮುಕ್ತವಾಗಿರಲಿ: ಎಸ್‌ವೈಎಸ್

ಬಂಟ್ವಾಳ,ಫೆ.13: ಹಿಜಾಬ್ಧಾರಿಗಳಿಗೆ ಶಿಕ್ಷಣದ ಅವಕಾಶ ಮುಕ್ತವಾಗಿರಲು ಸರಕಾರ ಮತ್ತು ನ್ಯಾಯಾಲಯಗಳು ಕ್ರಮಕೈಗೊಳ್ಳಬೇಕು ಎಂದು ಸುನ್ನಿ ಯುವಜನ ಸಂಘ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಸಿ ರೋಡ್ ಲಯನ್ಸ್ ಸಭಾಂಗಣದಲ್ಲಿ ಎಸ್‌ವೈಎಸ್ ಆಯೋಜಿಸಿದ 'ಲೀಡ್‌ಸಮ್ಮಿಟ್' ಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಲಾಯಿತು.
ಕೇಂದ್ರ ಸಮಿತಿಯ ತರಬೇತುದಾರ ಅಬ್ದುರ್ರಹೀಂ ತರಗತಿ ನಡೆಸಿಕೊಟ್ಟರು. ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಧ್ವಜಾರೋಹಣಗೈದರು. ಜಿಲ್ಲಾ ಜಂಇಯ್ಯತುಲ್ ಖುತಬಾ ಅಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಸಭೆ ಉದ್ಘಾಟಿಸಿದರು. ಜಿಲ್ಲಾ ಎಸ್‌ವೈಎಸ್
ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ರಫೀಕ್ ಹಾಜಿ ಕೋಡಾಜೆ. ಹಕೀಮ್ ಪರ್ತಿಪ್ಪಾಡಿ. ಸೈಯದ್ ಫಲುಲ್ ತಂಙಳ್ ತಾಳಿಪಡ್ಪು, ಕೆಎಂಎ ಕೊಡುಂಗಾಯಿ. ಹನೀಫ್ ಮುಸ್ಲಿಯಾರ್ ಮಿತ್ತಬೈಲು. ಎಂಎಚ್ ಮೊಯಿದಿನ್ ಹಾಜಿ ಅಡ್ಡೂರು, ಕೆಬಿ ದಾರಿಮಿ. ಅಹ್ಮದ್ ಕುಂಞಿ ನಂದರಬೆಟ್ಟು, ಫಾರೂಕ್ ಪರ್ಲಿಯ, ಯುನಿಕ್ ಅಬ್ದುರ್ರಹ್ಮಾನ್. ಇಬ್ರಾಹೀಂ ದಾರಿಮಿ ನಂದರಬೆಟ್ಟು, ಅಬೂ ಸಿರಾಜ್ ಮುಸ್ಲಿಯಾರ್, ಕಿನ್ಯ ಮುಸ್ತಫಾ ಫೈಝಿ, ಕತರ್ ಇಬ್ರಾಹಿಂ ಹಾಜಿ. ಶಾಫಿ ದಾರಿಮಿ. ಮುಹಮ್ಮದ್ ಚೊಕ್ಕಬೆಟ್ಟು ಭಾಗವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಕೆಎಲ್ ದಾರಿಮಿ ಸ್ವಾಗತಿಸಿದರು. ಸಂಯೋಜಕ ಶರೀಫ್ ಮಿತ್ತಬೈಲು ವಂದಿಸಿದರು.







