ಎಸ್ಸೆಸ್ಸೆಫ್ ತಲಪಾಡಿ: ನೂತನ ಸಮಿತಿ ರಚನೆ
ಉಳ್ಳಾಲ, ಫೆ.13: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್‌ನ ಎಸ್ಸೆಸ್ಸೆಫ್ ತಲಪಾಡಿ ಘಟಕದ ಮಹಾಸಭೆಯು ಇತ್ತೀಚೆಗೆ ನಡೆಯಿತು. ಘಟಕದ ನೂತನ ಅಧ್ಯಕ್ಷರಾಗಿ ನೌಶಾದ್ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಸ್ಗರ್, ಕೋಶಾಧಿಕಾರಿಯಾಗಿ ಆಸಿಫ್, ಕಾರ್ಯದರ್ಶಿಗಳಾಗಿ ಫಾರೂಕ್ ಆಯ್ಕೆಯಾಗಿದ್ದಾರೆ.
ಮಜೀದ್, ಸುಹೈಲ್, ಶಿಹಾಬ್, ಶುಹೈಬ್ ಶಹೀರ್ ಆಶಿಕ್, ಝಕರಿಯ ಅವರನ್ನೊಳಗೊಂಡ 19 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ನೇಮಿಸಲಾಯಿತು.
ಸಭೆಯಲ್ಲಿ ಎಸ್‌ವೈಎಸ್ ತಲಪಾಡಿ ಬ್ರಾಂಚ್‌ನ ಕಾರ್ಯದರ್ಶೀ ಶರೀಫ್ ಮಕ್ಯಾರ್, ಜಿಲ್ಲಾ ನಾಯಕ ಹಮೀದ್ ತಲಪಾಡಿ, ಸೆಕ್ಟರ್ ನಾಯಕರಾದ ಮುಝಮ್ಮಿಲ್, ಇಬ್ರಾಹಿಂ ಮುಸ್ತಫ ಉಪಸ್ಥಿತರಿದ್ದರು.
Next Story





