Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರಕುಶಲ ಪಾತ್ರಗಳು!

ಕರಕುಶಲ ಪಾತ್ರಗಳು!

ಉತ್ತರ ಪ್ರದೇಶ ಚುನಾವಣೆ-2

ದಿನೇಶ್ ಅಮಿನ್ ಮಟ್ಟುದಿನೇಶ್ ಅಮಿನ್ ಮಟ್ಟು14 Feb 2022 11:29 AM IST
share
ಕರಕುಶಲ ಪಾತ್ರಗಳು!

ಉತ್ತರಪ್ರದೇಶದಲ್ಲಿ ಸೋಮವಾರ ಎರಡನೇ ಸುತ್ತಿನ ಮತದಾನ ನಡೆಯಲಿರುವ 55 ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನ ಮೊರಾದಾಬಾದ್. ಬಿಜನೋರ್, ರಾಮಪುರ, ಬರೇಲಿ,ಅಮ್ರೋಹಿ, ಬದೋಯಿ, ಸಂಬಲ್, ಶಹಜಾನಪುರ್, ಮೊರಾದಾಬಾದ್ ಮತ್ತು ಸಹಾರನ್‌ಪುರ ಸೇರಿದಂತೆ 8 ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ 55 ಕ್ಷೇತ್ರಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಸರಾಸರಿ ಶೇ.40ರಿಂದ 50ರಷ್ಟಿದೆ. ಚುನಾವಣೆಯಲ್ಲಿ ಇವರೇ ನಿರ್ಣಾಯಕರು. ಉತ್ತರಪ್ರದೇಶದ ಒಟ್ಟು ಮುಸ್ಲಿಮ್ ಜನಸಂಖ್ಯಾ ಪ್ರಮಾಣ ಶೇ. 19.3ರಷ್ಟಿದ್ದರೆ ಮೊರಾದಾಬಾದ್ ಜಿಲ್ಲೆಯಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ.55ರಷ್ಟಿದೆ.

   ‘ಪೀತಲ್ ನಗರ್’ ಎಂದೇ ಪ್ರಸಿದ್ದಿ ಪಡೆದಿರುವ ಉತ್ತರಪ್ರದೇಶದ ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ 2009ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ( ಆ ಚುನಾವಣೆಯಲ್ಲಿ ಗೆದ್ದಿದ್ದರು ಕೂಡಾ) ಆ ಚುನಾವಣೆಯ ಸಮೀಕ್ಷೆಗೆಂದು ಆ ಪಟ್ಟಣಕ್ಕೆ ಹೋಗಿದ್ದ ನಾನು ಅಲ್ಲಿನ ಮಂಡಿಚೌಕದ ಓಣಿಯಲ್ಲಿ ಮರದ ಅಚ್ಚಿಗೆ ಎರಕ ಹೂಯ್ಯುತ್ತಿದ್ದ ಅಕಿಲ್ ಎಂಬ ಕರಕುಶಲ ಕರ್ಮಿಯನ್ನು ಮಾತನಾಡಿಸಿದ್ದೆ. ಆತ ತಲೆಎತ್ತಿ ದುರುಗುಟ್ಟಿ ನೋಡಿದವನೇ ‘‘ವೋ ಕ್ರಿಕೆಟ್ ಕಾ ಸಿಲ್ಲಿ-ಗಲ್ಲಿವಾಲಾ, ಹಮಾರಾ ಸಿಲ್ಲಿ-ಗಲ್ಲಿಕೇ ಬಾರೆ ಮೇ ಕ್ಯಾ ಜಾನ್ ತಾ?’’ ಎಂದು ದಬಾಯಿಸಿದ್ದ. ಹಿತ್ತಾಳೆ ಸಾಮಗ್ರಿಗಳನ್ನು ತಯಾರಿಸಲು ಬೇರೆಬೇರೆ ಹದದ ಎರಕಗಳಿಗೆ ‘ಸಿಲ್ಲಿ’ ಮತ್ತು ‘ಗಲ್ಲಿ’ ಎಂದು ಹೇಳುತ್ತಾರೆ ಎಂದು ಕೋಪ ತಣಿದ ನಂತರ ನನ್ನನ್ನು ಕೂರಿಸಿ ವಿವರಿಸಿದ್ದ.

ಅಕಿಲ್ ಸಿಟ್ಟಿಗೆ ಬೇರೆ ಕಾರಣ ಇತ್ತು. ಆ ಕಾಲದ ವಿಶ್ವ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಹಿತ್ತಾಳೆ ಕರಕುಶಲ ವಸ್ತುಗಳ ಉದ್ಯಮಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಕರಕುಶಲ ಕರ್ಮಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಅವರ ಪರ ಪ್ರಚಾರಕ್ಕೆ ಬಂದಿರುವ ರಾಜಕೀಯ ಪಕ್ಷಗಳ ನಾಯಕರು ತಮ್ಮ ಸಮಸ್ಯೆ ಬಗ್ಗೆ ಏನಾದರೂ ಮಾತನಾಡಬಹುದೇ ಎಂಬ ನಿರೀಕ್ಷೆ ಅಕಿಲ್ ಅಂತಹವರಲ್ಲಿತ್ತು. ಆ ನಿರೀಕ್ಷೆ ಹುಸಿಯಾಗಿದ್ದ ಕಾರಣಕ್ಕೆ ಆತ ನನ್ನೆದುರು ತನ್ನ ಆಕ್ರೋಶ ಹೊರಹಾಕಿದ್ದ.

 ಹಿತ್ತಾಳೆ ಕರಕುಶಲ ವಸ್ತುಗಳ ತಯಾರಿ ಇಲ್ಲಿ ಜನಪ್ರಿಯ ಗುಡಿಕೈಗಾರಿಕೆ. ಒಂದು ಅಂದಾಜಿನ ಪ್ರಕಾರ ಮೊರಾದಾಬಾದ್ ಜಿಲ್ಲೆಯೊಂದರಲ್ಲಿಯೇ 250ಕ್ಕೂ ಹೆಚ್ಚು ಪೂರ್ಣಪ್ರಮಾಣದ ಕಾರ್ಖಾನೆಗಳಿವೆ. ಜೊತೆಗೆ ಮನೆಮನೆಗಳಲ್ಲಿ ಕಿರುಘಟಕಗಳಿವೆ. ಅಂದಾಜು ಹತ್ತು ಲಕ್ಷ ಮಂದಿಗೆ ಈ ಉದ್ಯಮ ಉದ್ಯೋಗ ಕಲ್ಪಿಸಿದೆ. ಭಾರತದಿಂದ ರಫ್ತಾಗುತ್ತಿರುವ ಒಟ್ಟು ಕರಕುಶಲ ಸಾಮಗ್ರಿಗಳಲ್ಲಿ ಶೇಕಡಾ 40ರಷ್ಟು ಪೂರೈಕೆಯಾಗುತ್ತಿರುವುದು ಮೊರಾದಾಬಾದ್‌ನಿಂದ. ಯುರೋಪ್, ಅಮೆರಿಕ, ಜಪಾನ್, ಇಟಲಿ ದೇಶಗಳಲ್ಲಿನ ಕಂಪೆನಿಗಳ ಪ್ರತಿನಿಧಿಗಳ ಸಾಲು ಇಲ್ಲಿನ ಬರ್ತನ್ ಬಝಾರ್‌ನಲ್ಲಿ ಸಾಮಾನ್ಯ ದೃಶ್ಯವಾಗಿತ್ತಂತೆ.

  ವರ್ಷಕ್ಕೆ ಸುಮಾರು ಮೂರರಿಂದ ನಾಲ್ಕು ಸಾವಿರ ಕೋಟಿ ರೂಪಾಯಿಗಳ ರಫ್ತು ವ್ಯವಹಾರ ಹೊಂದಿರುವ ಈ ಉದ್ಯಮ ಹತ್ತು ವರ್ಷಗಳ ಹಿಂದೆ ಆರ್ಥಿಕ ಹಿಂಜರಿತದ ಹೊಡೆತದಿಂದ ತತ್ತರಿಸಿಹೋಗಿತ್ತು. ಕಚ್ಛಾ ವಸ್ತುಗಳ ಕೊರತೆ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ಆಗಲೇ ಕಷ್ಟದ ಹಾದಿಯಲ್ಲಿದ್ದ ಅಲ್ಲಿನ ಕರಕುಶಲ ವಸ್ತುಗಳ ಉದ್ಯಮ, ಕೊರೋನ ನಂತರದ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳಿಗೆ ಈಡಾಗಿರಬಹುದು. ಆ ಕಾಲದಲ್ಲಿಯೇ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸುಮಾರು ಹತ್ತು ಲಕ್ಷ ಜನರಲ್ಲಿ ಈಗ ಎಷ್ಟು ಮಂದಿ ನಿರುದ್ಯೋಗಿಳಾಗಿ ಬೀದಿಗೆ ಬಿದ್ದಿದ್ದಾರೋ ಗೊತ್ತಿಲ್ಲ.

ಈಗಿನ ಚುನಾವಣೆಯ ಕಾಲದಲ್ಲಿ ಯಾವುದಾದರೂ ಪಕ್ಷದ ನಾಯಕರು ಈ ‘ಪೀತಲ್ ನಗರ’ದ ಸಮಸ್ಯೆಯನ್ನು ಪ್ರಸ್ತಾಪಿಸಬಹುದೇ ಎಂದು ಮಾಧ್ಯಮಗಳ ವರದಿಗಳನ್ನು ಹುಡುಕಾಡಿದರೆ ಎಲ್ಲಿಯೂ ಕಾಣಲಿಲ್ಲ. ಮಂಡೀಚೌಕದ ಓಣಿಯ ಅಕಿಲ್‌ನನ್ನು ಈಗ ಯಾರಾದರೂ ಪ್ರಶ್ನಿಸಿದರೆ ಇನ್ನಷ್ಟು ರೋಷದಿಂದ ಸಿಡಿಯಬಹುದೇನೋ?

ಉತ್ತರಪ್ರದೇಶದಲ್ಲಿ ಸೋಮವಾರ ಎರಡನೇ ಸುತ್ತಿನ ಮತದಾನ ನಡೆಯಲಿರುವ 55 ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನ ಮೊರಾದಾಬಾದ್. ಬಿಜನೋರ್, ರಾಮಪುರ, ಬರೇಲಿ,ಅಮ್ರೋಹಿ, ಬದೋಯಿ, ಸಂಬಲ್, ಶಹಜಾನಪುರ್, ಮೊರಾದಾಬಾದ್ ಮತ್ತು ಸಹಾರನ್‌ಪುರ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಈ 55 ಕ್ಷೇತ್ರಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಸರಾಸರಿ ಶೇಕಡಾ 40ರಿಂದ 50ರಷ್ಟಿದೆ. ಚುನಾವಣೆಯಲ್ಲಿ ಇವರೇ ನಿರ್ಣಾಯಕರು. ಉತ್ತರಪ್ರದೇಶದ ಒಟ್ಟು ಮುಸ್ಲಿಮ್ ಜನಸಂಖ್ಯಾ ಪ್ರಮಾಣ ಶೇಕಡಾ 19.3ರಷ್ಟಿದ್ದರೆ ಮೊರಾದಾಬಾದ್ ಜಿಲ್ಲೆಯಲ್ಲಿ ಮುಸ್ಲಿಮ್ ಜನಸಂಖ್ಯೆ ಶೇಕಡಾ 55ರಷ್ಟಿದೆ.

 ಆಶ್ಚರ್ಯವೆಂದರೆ 2017ರ ವಿಧಾನಸಭಾ ಚುನಾವಣೆಯಲ್ಲಿ ಈ 55 ಕ್ಷೇತ್ರಗಳಲ್ಲಿ 38 ಕ್ಷೇತ್ರಗಳನ್ನು ಗೆದ್ದಿರುವುದು ಬಿಜೆಪಿ. ಸಮಾಜವಾದಿ ಪಕ್ಷಕ್ಕೆ 15 ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾದರೆ, ಕಾಂಗ್ರೆಸ್ ಪಕ್ಷಕ್ಕೆ ದಕ್ಕಿದ್ದು ಕೇವಲ ಎರಡು, ಬಿಎಸ್ ಪಿ ಸಂಪೂರ್ಣ ಧೂಳಿಪಟವಾಗಿ ಹೋಗಿತ್ತು. ಲೆಕ್ಕಾಚಾರ ಬಹಳ ಸರಳವಾದುದು. ಮುಸ್ಲಿಮ್ ಮತಗಳು ಮೂರು ಪಕ್ಷಗಳಲ್ಲಿ ಹಂಚಿಹೋಗಿ ಹಿಂದೂ ಮತಗಳು ಸಾರಾಸಗಟಾಗಿ ಬಿಜೆಪಿಯ ಬುಟ್ಟಿಗೆ ಹೋಗಿ ಬಿದ್ದಿವೆ.

ಬಿಜೆಪಿಯ ಗೆಲುವಿನಲ್ಲಿ ಸುಮಾರು 150 ಕಿ.ಮೀ. ದೂರದಲ್ಲಿರುವ ಮುಝಫ್ಪರ್ ನಗರದಲ್ಲಿ 2013ರಲ್ಲಿ ನಡೆದಿದ್ದ ಕೋಮುಗಲಭೆಯ ಕೊಡುಗೆಯೂ ಇದೆ. ಅಲ್ಲಿಯ ವರೆಗೆ ಮುಸ್ಲಿಮ್ ಬಾಹುಳ್ಯದ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಕೋಮುಗಲಭೆಗಳು ನಡೆದಿರಲಿಲ್ಲ. ಬನಾರಸ್ ಸೀರೆಯಂತೆ ಮೊರಾದಾಬಾದ್ ನ ಹಿತ್ತಾಳೆ ಕರಕುಶಲ ವಸ್ತುಗಳ ತಯಾರಿಕೆಯಲ್ಲಿಯೂ ಹಿಂದೂ-ಮುಸ್ಲಿಮ್ ಸಮುದಾಯಗಳ ಪಾಲುದಾರಿಕೆ ಇದೆ. ಸಾಮಾಗ್ರಿಗಳನ್ನು ತಯಾರಿಸುವವರು ಮುಸ್ಲಿಮ್ ಕರಕುಶಲ ಕರ್ಮಿಗಳು, ಮಾರಾಟ ಮಾಡುವವರು ಹಿಂದೂ ವರ್ತಕರು. 2013ರ ನಂತರದ ದಿನಗಳಲ್ಲಿ ರಾಜಕೀಯದ ಚಿತ್ರ ಬದಲಾಗಿ ಹೋಗಿದೆ, ಸಾಮಾಜಿಕ ವ್ಯವಸ್ಥೆಯೂ ಬದಲಾಗಿರಬಹುದೇನೋ?

ಹೀಗಿರುವಾಗ ಹಿಂದಿನ ಚುನಾವಣೆಯ ಫಲಿತಾಂಶವೇ ಪುನರಾವರ್ತನೆಯಾಗಲಿದೆಯೇ?

ಇದೇ ಲೆಕ್ಕಾಚಾರದ ಬಲದಲ್ಲಿ ಮೋದಿ-ಯೋಗಿ ಜೋಡಿ ಈ ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ‘‘80-20’’. ‘ಕೇರಳ-ಕಾಶ್ಮೀರ-ಬಂಗಾಳ’, ಸ್ಮಶಾನ-ಕಬರ್ ಸ್ಥಾನದ ವಿವಾದಗಳನ್ನು ಮತ್ತೆ ಮತ್ತೆ ಬಿಜೆಪಿ ನಾಯಕರು ಹುಟ್ಟುಹಾಕುತ್ತಿರುವ ದುರುದ್ದೇಶವೇ ಹಿಂದೂ ಮತಗಳ ಕ್ರೋಡೀಕರಣ.

  ಅಲ್ಲಿಂದ ಬರುತ್ತಿರುವ ವರದಿಗಳ ಪ್ರಕಾರ ಅಖಿಲೇಶ್ ಯಾದವ್ ತಮ್ಮ ಪಾರಂಪರಿಕ ಮುಸ್ಲಿಮ್ ಮತಬ್ಯಾಂಕನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಯಲ್ಲಿ ಯಾವುದೇ ಕೋಮುವಿವಾದದ ಹೇಳಿಕೆಗಳನ್ನು ನೀಡದೆ ಬಿಜೆಪಿಯ ಹಿಂದೂ ಮತಗಳನ್ನೂ ಕೂಡಾ ಸೆಳೆಯುವ ಪ್ರಯತ್ನ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಮುಝಾಪರ್ ನಗರದ ಕೋಮುಗಲಭೆಯ ನಂತರ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ ಮತ್ತು ಮುಸ್ಲಿಮರ ಸಂಬಂಧದಲ್ಲಿ ಮೂಡಿದ್ದ ಬಿರುಕು ಕಡಿಮೆಯಾಗಿ ಮೂಡುತ್ತಿರುವ ಪರಸ್ಪರ ಸಾಮರಸ್ಯದ ಹೊಸ ಬೆಳವಣಿಗೆ ಈ ಭಾಗದ ಮೇಲೆಯೂ ಬೀರಿದೆಯಂತೆ. ಸಮಾಜವಾದಿ ಪಕ್ಷದ ರಾಜಕೀಯ ಶಕ್ತಿಯೇ ಯಾದವ-ಮುಸ್ಲಿಮ್ ಕೂಟ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಿಂದ ಎಸ್ ಪಿ ಗೆದ್ದಿದ್ದ ಹದಿನೈದು ಶಾಸಕರಲ್ಲಿ ಹತ್ತು ಮಂದಿ ಮುಸ್ಲಿಮರು. ರಾಜ್ಯದ ಮುಸ್ಲಿಮ್ ಸಮುದಾಯದ ಮೇಲೆ ಗಣನೀಯ ಪ್ರಭಾವ ಹೊಂದಿರುವ ಅಝ್ಮುಲ್ ಖಾನ್ ಮತ್ತು ಮುಲಾಯಂ ಸಿಂಗ್ ಜೋಡಿಯನ್ನು ಉತ್ತರಪ್ರದೇಶದಲ್ಲಿ ‘ರಾಮ್-ರಹೀಮ್ ‘ಎಂದು ಕರೆಯುತ್ತಿದ್ದರು. ಸಮಾಜವಾದಿ ಪಕ್ಷದ ಬೆಳವಣಿಗೆಯಲ್ಲಿ ಇವರಿಬ್ಬರ ನಡುವಿನ ಸ್ನೇಹದ ದೊಡ್ಡ ಕೊಡುಗೆ ಇದೆ. ಇವರಿಬ್ಬರೂ ಸೇರಿ ಮುಸ್ಲಿಮ್-ಯಾದವ್ ಎಂಬ ಹೊಸ ಜಾತಿ ಸಮೀಕರಣವನ್ನು ಹುಟ್ಟುಹಾಕಿ ಸಮಾಜವಾದಿ ಪಕ್ಷವನ್ನು ಕಟ್ಟಿ ನಿಲ್ಲಿಸಿ ಕಾಂಗ್ರೆಸ್ ಪಕ್ಷದ ಅವನತಿಗೆ ಚಾಲನೆ ನೀಡಿದವರು.

 ಇಂತಹ ದಶಕಗಳ ಸ್ನೇಹ ಸಂಬಂಧ ಅಮರ್ ಸಿಂಗ್ ಪ್ರವೇಶದ ನಂತರ ಕೆಲ ಕಾಲ ಹಳಸಿಹೋಗಿ ಇಬ್ಬರು ಒಂದಷ್ಟು ವರ್ಷ ದೂರವಾಗಿದ್ದರು. ಅದರ ನಂತರ ಜೊತೆಗೂಡಿದರೂ ಅಖಿಲೇಶ್ ಯಾದವ್ ಪ್ರವೇಶದ ಬಳಿಕ ಅಜಮ್ ಖಾನ್ ಕೆಲಕಾಲ ಮುನಿಸಿಕೊಂಡಿದ್ದರು. ಈಗ ಜೈಲಲ್ಲಿರುವ ಅಝ್ಮುಲ್ ಖಾನ್ ಜೊತೆಗಿನ ಅಪ್ಪನ ಹಳೆಯ ಸ್ನೇಹಕ್ಕೆ ಜೀವ ತುಂಬಿರುವ ಅಖಿಲೇಶ್ ಯಾದವ್, ಅವರ ಮಗನಿಗೂ ಟಿಕೆಟ್ ನೀಡಿ ಒಲಿಸಿಕೊಂಡ ಹಾಗೆ ಕಾಣುತ್ತಿದೆ. ಈ ಬೆಳವಣಿಗೆ ಮುಸ್ಲಿಮರನ್ನು ಸಮಾಜವಾದಿ ಪಕ್ಷಕ್ಕೆ ಇನ್ನಷ್ಟು ಹತ್ತಿರ ಮಾಡಬಹುದು. ಇದರ ಜೊತೆಗೆ ಹತ್ತು ವರ್ಷಗಳ ಹಿಂದೆ ಮಾಯಾವತಿಯವರ ಬಿಎಸ್ ಪಿಯ ಬೆಂಬಲಕ್ಕೆ ನಿಂತಿದ್ದ ಮುಸ್ಲಿಮ್ ಮತದಾರರು ವಾಪಸು ಎಸ್ ಪಿ ಕಡೆ ಬರುತ್ತಿರುವ ಹಾಗೆ ಕಾಣುತ್ತಿದೆ. ಯಥಾಪ್ರಕಾರ ಕಾಂಗ್ರೆಸ್ ಪಕ್ಷದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ. ಮೊದಲ ಸುತ್ತಿನ ಚುನಾವಣೆಯಲ್ಲಿನ ಬಿಜೆಪಿಯ ಹಿನ್ನಡೆಯನ್ನು ಎರಡನೇ ಸುತ್ತಿನ ಚುನಾವಣೆ ಇನ್ನಷ್ಟು ಹಿಗ್ಗಿಸಬಹುದೇ ಹೊರತು ಕುಗ್ಗಿಸಲಾರದು.

share
ದಿನೇಶ್ ಅಮಿನ್ ಮಟ್ಟು
ದಿನೇಶ್ ಅಮಿನ್ ಮಟ್ಟು
Next Story
X