ಯಶ್ಪಾಲ್ ಸುವರ್ಣ ಹೇಳಿಕೆ: ಜನಾಂಗೀಯ ದ್ವೇಷದ ಸ್ಪಷ್ಟ ನಿದರ್ಶನ; ಕ್ಯಾಂಪಸ್ ಫ್ರಂಟ್
ಉಡುಪಿ, ಫೆ.14: ವಿದ್ಯಾರ್ಥಿನಿಯರು ತಮ್ಮ ಸಂವಿಧಾನಬದ್ಧ ಹಕ್ಕಿನ ಬಗ್ಗೆ ಧ್ವನಿ ಎತ್ತಿದರೆಂಬ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಆ ವಿದ್ಯಾರ್ಥಿನಿಯರನ್ನು ಭಯೋತ್ಪಾದಕರೆಂದು ಕರೆದಿರುವುದು ಮುಸ್ಲಿಂ ಸಮುದಾಯದ ಮೇಲಿರುವ ಜನಾಂಗೀಯ ದ್ವೇಷ ಹಾಗೂ ಸಂವಿಧಾನ ವಿರೋಧಿ ಮನೋಸ್ಥಿತಿಯ ಸ್ಪಷ್ಟ ನಿದರ್ಶನವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಖಂಡಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಇವರನ್ನು ತಕ್ಷಣವಾಗಿ ಈ ಸಮಿತಿ ಯಿಂದ ವಜಾಗೊಳಿಸಬೇಕು. ಇದೀಗಾಗಲೇ ಈ ಕುರಿತು ವಿಚಾರಣೆ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇದರ ನಡುವೆ ಇಂತಹ ಕೋಮು ಪ್ರಚೋದನೆಯ ಹೇಳಿಕೆಗಳು ಮಧ್ಯಂತರ ಆದೇಶದ ಉಲ್ಲಂಘನೆಯಾಗಿದ್ದು, ಇವರ ವಿರುಧ್ದ ಪೋಲಿಸ್ ಇಲಾಖೆಯು ಕಠಿಣ ಕಾನೂನು ಕ್ರಮ ಜರುಗಿಸಿ ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story