ಉಡುಪಿ: ಸೋಮವಾರ 31 ಮಂದಿಗೆ ಕೊರೋನ ಸೋಂಕು ದೃಢ; ಇಬ್ಬರು ಬಲಿ
![ಉಡುಪಿ: ಸೋಮವಾರ 31 ಮಂದಿಗೆ ಕೊರೋನ ಸೋಂಕು ದೃಢ; ಇಬ್ಬರು ಬಲಿ ಉಡುಪಿ: ಸೋಮವಾರ 31 ಮಂದಿಗೆ ಕೊರೋನ ಸೋಂಕು ದೃಢ; ಇಬ್ಬರು ಬಲಿ](https://www.varthabharati.in/sites/default/files/images/articles/2022/02/14/325055-1644856169.jpg)
ಸಾಂದರ್ಭಿಕ ಚಿತ್ರ (PTI)
ಉಡುಪಿ, ಫೆ.14: ಜಿಲ್ಲೆಯಲ್ಲಿ ಸೋಮವಾರ ಹಿರಿಯರಿಬ್ಬರು ಕೋವಿಡ್ಗೆ ಬಲಿಯಾಗಿದ್ದು, 31 ಮಂದಿಗೆ ಸೋಂಕು ದೃಢಪಟ್ಟಿದೆ. 160 ಮಂದಿ ಇಂದು ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸದ್ಯ ಚಿಕಿತ್ಸೆಯಲ್ಲಿರುವವರ ಸಂಖ್ಯೆ 613ಕ್ಕಿಳಿದಿದೆ.
ಕುಂದಾಪುರದ 85 ವರ್ಷಪ್ರಾಯದ ವೃದ್ಧರು ಹಾಗೂ ಉಡುಪಿಯ 82ರ ವೃದ್ಧೆ ರವಿವಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ನಿಂದ ಮೃತಪಟ್ಟಿದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 534ಕ್ಕೇರಿದೆ. ಇತರೆ ಗಂಭೀರ ಕಾಯಿಲೆಯಿಂದ ಬಳಲುತಿದ್ದ ಮಹಿಳೆಯನ್ನು ಕೋವಿಡ್ ಗುಣಲಕ್ಷಣಕ್ಕಾಗಿ ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ರೀತಿ ಕುಂದಾಪುರದ ವೃದ್ಧರು ಫೆ.10ರಂದು ಚಿಕಿತ್ಸೆಗೆಂದು ದಾಖಲಾಗಿದ್ದು ನಿನ್ನೆ ಸಾವನ್ನಪ್ಪಿದರು.
ಇಂದು ಪಾಸಿಟಿವ್ ಬಂದ 31 ಮಂದಿಯಲ್ಲಿ 12 ಮಂದಿ ಪುರುಷರು ಹಾಗೂ 19 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 12 ಮಂದಿ ಉಡುಪಿ ತಾಲೂಕಿಗೆ, ತಲಾ 9 ಮಂದಿ ಕುಂದಾಪುರ ಹಾಗೂ ಕಾರ್ಕಳ ತಾಲೂಕಿಗೆ ಸೇರಿದವರು. ಪಾಸಿಟಿವ್ ಬಂದವರಲ್ಲಿ 27 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ 47ಕ್ಕಿಳಿದಿದೆ.
ರವಿವಾರ 160 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 17558ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 680 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,065ಕ್ಕೇರಿದೆ.
6314 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 6314 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 660 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 712 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು 6314 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 660 ಮಂದಿ 60 ವರ್ಷ ಮೇಲಿನ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 712 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 406 ಮಂದಿ ಮೊದಲ ಡೋಸ್ ಹಾಗೂ 5196 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ 40 ಮಂದಿ ಮೊದಲ ಡೋಸ್ ಹಾಗೂ 3419 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.