ನಾನು ಭಯೋತ್ಪಾದಕನಲ್ಲ, ಪ್ರಧಾನಿಗಾಗಿ ನನ್ನ ಹೆಲಿಕಾಪ್ಟರ್ ಪ್ರಯಾಣ ತಡೆದದ್ದು ಸರಿಯಲ್ಲ: ಪಂಜಾಬ್ ಸಿಎಂ ಚನ್ನಿ

ಜಲಂಧರ್: ಪ್ರಧಾನಿ ಮೋದಿ ಭೇಟಿಯಿಂದಾಗಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ನನಗೆ ಪ್ರಯಾಣಿಸಲು ಅನುಮತಿ ತಡೆಯಲಾಗಿದ್ದು, ಇದರಿಂದ ರಾಹುಲ್ ಗಾಂಧಿ ಅವರು ಭಾಗವಹಿಸುವ ಚುನಾವಣಾ ರ್ಯಾಲಿಯಲ್ಲಿ ನನಗೆ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಪಂಜಾಬ್ ಸಿಎಂ ಚರನ್ ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
“ಚರನ್‌ಜಿತ್ ಸಿಂಗ್ ಚನ್ನಿ ಒಬ್ಬ ಮುಖ್ಯಮಂತ್ರಿ, ನೀವು ಆತನನ್ನು ಹೊಶಿಯಾರ್‌ಪುರ್ ಇಂದ ಹಾರಾಡದಂತೆ ತಡೆಯಲು ಆತ ಒಬ್ಬ ಭಯೋತ್ಪಾದಕ ಅಲ್ಲ, ಇದು ಸರಿಯಾದ ರೀತಿ ಅಲ್ಲ” ಎಂದು ಪಂಜಾಬ್ ಸಿಎಂ ಆಕ್ರೋಶಗೊಂಡಿದ್ದಾರೆ.
ಪ್ರಧಾನಿಯವರು ಜಲಂಧರ್‌ಗೆ ಭೇಟಿ ನೀಡಿದ ಕಾರಣ "ನೋ-ಫ್ಲೈ ಝೋನ್" ಜಾರಿಯಾಗಿದ್ದು, ಇದರಿಂದಾಗಿ ಮುಖ್ಯಮಂತ್ರಿಯವರು ತಮ್ಮ ಹೆಲಿಕಾಪ್ಟರ್ ಅನ್ನು ಹಾರಾಟಕ್ಕೆ ತೆರವುಗೊಳಿಸಲು ಒಂದು ಗಂಟೆಗೂ ಹೆಚ್ಚು ಕಾಲ ಕಾಯುತ್ತಿದ್ದರು ಎಂದು ವರದಿಯಾಗಿದೆ.
ರಾಹುಲ್ ಗಾಂಧಿಯವರ ರ್ಯಾಲಿಗಾಗಿ ಚಂಡೀಗಢದಿಂದ ಹೋಶಿಯಾರ್‌ಪುರಕ್ಕೆ ತೆರಳಲಿದ್ದ ಸಿಎಂ ಚನ್ನಿಯನ್ನು ತಡೆದ ಕಾರಣದಿಂದ ಅಂತಿಮವಾಗಿ ಅವರು ಹೆಲಿಪ್ಯಾಡ್‌ನಿಂದ ಮನೆಗೆ ಮರಳಬೇಕಾಯಿತು ಎಂದು ndtv ವರದಿ ಮಾಡಿದೆ.





