ಇಲ್ಲಿ ಹಿಜಾಬ್ ವಿವಾದವಿಲ್ಲ, ನಾವು ಧಾರ್ಮಿಕ ಭಾವನೆಗೆ ಗೌರವ ನೀಡುತ್ತೇವೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ನಿತೀಶ್ ಕುಮಾರ್
ಪಾಟ್ನಾ, ಫೆ. 14: ಬಿಹಾರದಲ್ಲಿ ಹಿಜಾಬ್ ವಿವಾದ ಇಲ್ಲ. ನಾವು ಧಾರ್ಮಿಕ ಭಾವನೆಗಳಿಗೆ ಗೌರವ ನೀಡುತ್ತೇವೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ. ತರಗತಿಯಲ್ಲಿ ಯಾರಾದರು ತಮ್ಮ ತಲೆಯ ಮೇಲೆ ಏನನ್ನಾದರೂ ಹಾಕಿಕೊಂಡರೆ, ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯತೆ ಇಲ್ಲ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಬಿಹಾರದಲ್ಲಿ ಇದು ವಿವಾದವಲ್ಲ. ನಾವು ಇಂತಹ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಬಾರದು. ಗಮನ ಕೇಂದ್ರೀಕರಿಸುವುದು ನಿಷ್ಪ್ರಯೋಜಕ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ‘‘ಬಿಹಾರದ ಶಾಲೆಯಲ್ಲಿ ಸರಿಸುಮಾರು ಎಲ್ಲ ಮಕ್ಕಳು ಒಂದೇ ರೀತಿಯ ಉಡುಪು ಧರಿಸುತ್ತಾರೆ. ಕೆಲವರು ತಮ್ಮ ತಲೆ ಮೇಲೆ ಏನನ್ನೋ ಹಾಕಿಕೊಳ್ಳುತ್ತಾರೆ. ಅದರ ಬಗ್ಗೆ ನಾವು ಪ್ರತಿಕ್ರಿಯಿಸುವ ಅಗತ್ಯತೆ ಇಲ್ಲ. ನಾವು ಅಂತಹ ವಿಷಯಗಳ ಮಧ್ಯೆ ಪ್ರವೇಶಿಸಬಾರದು. ನಾವು ಧಾರ್ಮಿಕ ಭಾವನೆಗಳಿಗೆ ಪರಸ್ಪರ ಗೌರವ ನೀಡಬೇಕು’’ ಎಂದು ಅವರು ಹೇಳಿದರು.
Next Story