ಮಂಗಳೂರು: ಆಯುರ್ವೇದ ಸಂಬಂಧಿ ಪುಸ್ತಕ ಬಿಡುಗಡೆ

ಮಂಗಳೂರು, ಫೆ. 15: ಸಾಗರದ ಆಪ್ಯಂ ಆಯುರ್ವೇದ ಫೌಂಡೇಶನ್ ಮತುತಿ ಬೆಂಗಳೂರಿನ ಆಪ್ಯಂ ಸಂಶೋಧನಾ ಸಂಸ್ಥೆಯ ಸಹಕಾರದಲ್ಲಿ ಡಾ. ದಿವ್ಯಜ್ಯೋತಿ ಮತ್ತು ಡಾ.ದೀಪಾ ಕೆ.ಕೆ ಅವರು ಸಂಸ್ಕೃತದಿಂದ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಬರೆದ ಸಂಜೀವಿನಿ ಸಾಮ್ರಾಜ್ಯ ಮತ್ತು ಪದಾರ್ಥ ಪ್ರಶ್ನೋತ್ತರ ಶತಕ ಅಯುರ್ವೇದ ಸಂಬಂಧಿ ಪುಸ್ತಕಗಳನ್ನು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಲಾಯಿತು.
ಜಿ.ಆರ್. ಮೆಡಿಕಲ್ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಹಾಗೂ ಕರಾವಳಿ ಸಮೂಹ ಸಂಸ್ಥೆಯ ಸ್ಥಾಪಕರಾದ ಎಸ್. ಗಣೇಶ್ ರಾವ್ ಬಿಡುಗಡೆಗೊಳಿಸಿದರು.
ಸಾಗರದ ಆಪ್ಯಂ ಫೌಂಡೇಷನ್ ಆಯುರ್ವೇದ ಪದ್ದತಿಯ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪುಸ್ತಕದಲ್ಲಿ 400ಕ್ಕೂ ಅಧಿಕ ಔಷದ ಸೇವನೆಯ ವಿಧಿಗಳನ್ನು ವಿವರಿಸಲಾಗಿದೆ .ಒಂದೇ ಸಂಜೀವಿನಿ ಮಾತ್ರೆಯನ್ನು ಬೇರೆಬೇರೆ ಔಷಧಗಳ ಜೊತೆ ಬೇರೆ ಅನೇಕ ರೋಗಗಳಲ್ಲಿ ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಡಾ.ದೀಪಾ ಕೆ.ಕೆ ಪ್ರಾಸ್ತಾವಿಕವಾಗಿ ವಿವರ ನೀಡಿದರು.
ಡಾ.ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.