ರಾಜ್ಯಸಭಾ ಕಲಾಪಗಳನ್ನು ಪ್ರಸಾರ ಮಾಡುವ ಸಂಸದ್ ಟಿವಿ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ್ದ ದುಷ್ಕರ್ಮಿಗಳು !

ಸಂಸದ್ ಟಿವಿ
ಹೊಸದಿಲ್ಲಿ,ಫೆ.15: ಅನಧಿಕೃತ ಚಟುವಟಿಕೆಗಳ ಮೂಲಕ ಕೆಲವು ಸೈಬರ್ ದುಷ್ಕರ್ಮಿಗಳು ತನ್ನ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಿದ್ದರು ಎಂದು ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಪ್ರಸಾರಿಸುವ ಸಂಸದ್ ಟಿವಿ ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿಕೋರ ಚಾನೆಲ್ನ ಹೆಸರನ್ನು ‘ಎಥೆರಿಯಂ (ಒಂದು ಕ್ರಿಪ್ಟೊಕರೆನ್ಸಿ)’ ಎಂದು ಬದಲಿಸಿದ್ದ ಎಂದೂ ಅದು ಹೇಳಿದೆ.
ನಂತರ ಯುಟ್ಯೂಬ್ ಭದ್ರತಾ ಬೆದರಿಕೆಗಳನ್ನು ಶಾಶ್ವತವಾಗಿ ನಿವಾರಿಸಲು ಕಾರ್ಯಾಚರಣೆಯನ್ನು ಆರಂಭಿಸಿತ್ತು ಮತ್ತು ಚಾನೆಲ್ ಅನ್ನು ಆದಷ್ಟು ಶೀಘ್ರವಾಗಿ ಮರುಸ್ಥಾಪಿಸುವುದಾಗಿ ಅದು ತಿಳಿಸಿದೆ. ಲೈವ್ ಸ್ಟ್ರೀಮಿಂಗ್ ಸೇರಿದಂತೆ ಸಂಸದ್ ಟವಿಯ ಯುಟ್ಯೂಬ್ ಚಾನೆಲ್ ಅನ್ನು ಮಂಗಳವಾರ ನಸುಕಿನ ಒಂದು ಗಂಟೆಗೆ ಹ್ಯಾಕ್ ಮಾಡಲಾಗಿತ್ತು. ಟಿವಿಯ ಸಾಮಾಜಿಕ ಮಾಧ್ಯಮ ತಂಡವು ಶ್ರಮಿಸಿ ನಸುಕಿನ 3:45ರ ಸುಮಾರಿಗೆ ಚಾನೆಲ್ ಅನ್ನು ಮರುಸ್ಥಾಪಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡವೂ ಘಟನೆಯನ್ನು ವರದಿ ಮಾಡಿತ್ತು ಮತ್ತು ಸಂಸದ್ ಟವಿಗೆ ಎಚ್ಚರಿಕೆಯನ್ನು ನೀಡಿತ್ತು. ಆದಾಗ್ಯೂ ಯುಟ್ಯೂಬ್ ಭದ್ರತಾ ಬೆದರಿಕೆಗಳನ್ನು ಶಾಶ್ವತವಾಗಿ ನಿವಾರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ಸಾಧ್ಯವಾದಷ್ಟು ಶೀಘ್ರ ಅದನ್ನು ಮರುಸ್ಥಾಪಿಸಲಾಗುವುದು ಎಂದು ಹೇಳಿಕೆಯು ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಸಂಸದ್ ಟಿವಿಯ ಯುಟ್ಯೂಬ್ ಚಾನೆಲ್ನ ಸ್ಕ್ರೀನ್ಶಾಟ್ಗಳು ಯುಟ್ಯೂಬ್ನ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಈ ಖಾತೆಯನ್ನು ಅಂತ್ಯಗೊಳಿಸಲಾಗಿದೆ ಎಂಬ ಸಂದೇಶವನ್ನು ತೋರಿಸಿವೆ.







