ವಿಡಿಯೋ ನೋಡಿ: ಮೈಸೂರಿನ ಹೊಟೇಲ್‌ನಲ್ಲೊಂದು ರೊಬೊಟ್ ಸಪ್ಲೈಯರ್ !

ಮೈಸೂರು,ಫೆ.15: ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ಒಂದರಲ್ಲಿ ರೋಬೋಟ್ ಗ್ರಾಹಕರಿಗೆ ಸರ್ವೀಸ್ ನೀಡುವ ಮೂಲಕ ಎಲ್ಲರನ್ನೂ ಆಕರ್ಷಣೆಗೊಳಪಡಿಸುತ್ತಿದೆ.
ನಗರದ ಸಿದ್ಧಾರ್ಥ ಹೋಟೆಲ್ ನಲ್ಲಿ ನೂತನವಾಗಿ ರೋಬೋಟ್ ಸಪ್ಲೈ ಮಾಡುತ್ತಿದ್ದು, ಹೋಟೆಲ್ ಮಾಲೀಕ ಪಿ.ವಿ.ಗಿರಿ ದೆಹಲಿಯಿಂದ 2.30 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಿ ತಂದಿದ್ದಾರೆ.
ಈ ರೋಬೋಟ್ ಆರ್ಡರ್ ಮಾಡಿದ ಗ್ರಾಹಕರಿಗೆ ಅವರು ಏನು ಹೇಳಿದ್ದಾರೆ ಅದನ್ನು ಅವರ ಟೇಬಲ್ ಗೆ ತಂದು ಕೊಡಲಿದೆ.
ಬಹಳ ಆಕರ್ಷಕವಾಗಿ ಸೀರೆ ತೊಡುವುದರ ಮೂಲಕ ಗಮನ ಸೆಳೆದಿರುವ ರೋಬೋಟ್ ತನ್ನ ಇತಿ ಮಿತಿಗೆ ನಿಗದಿ ಮಾಡಿರುವ ಜಾಗಕ್ಕೆ ಸರಿಯಾಗಿ ಹೋಗಿ ಅವರು ಕೇಳಿದ ತಿಂಡಿ, ಊಟ, ಕಾಫಿ, ಜ್ಯೂಸ್ ಸೇರಿದಂತೆ ಇತ್ಯಾದಿ ಆಹಾರಗಳನ್ನು ಸಪ್ಲೈ ಮಾಡಲಿದೆ.
ಹೋಟೆಲ್‍ನ ವಿಸ್ತೀರ್ಣ, ಮತ್ತು ಇದಕ್ಕೆ ಬೇಕಾದ ಆಪ್ ಅನ್ನು ಸಿದ್ದಪಡಿಸಲಾಗಿದ್ದು, ಇಂತಹ ಟೇಬಲ್‍ಗೆ ಸಪ್ಲೈ ಮಾಡಬೇಕು ಎಂದು ಹೇಳಿದರೆ ಅಲ್ಲಿಗೆ ಸರಿಯಾಗಿ ಹೋಗಿ ಸಪ್ಲೈ ಮಾಡಲಿದೆ. ಇದರಿಂದ ಬೇರೆ ಸಪ್ಲೈಯರ್‍ಗೆ ತೊಂದರೆ ಇಲ್ಲ, ಇದನ್ನು ಆಕರ್ಷಣೆಗಾಗಿ ತರಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದರು.
ಪ್ರಾವಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಮತ್ತು ಇತರೆ ಹೋಟೆಲ್ ಗಳೊಂದಿಗೆ ಸ್ಪರ್ಧೆ ಮಾಡುವ ಉದ್ದೇಶದಿಂದ ಈ ರೋಬೋಟ್ ಅನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ ಎಂದು ಹೋಟೆಲ್ ನ ಐಟಿ ವಿಭಾಗದ ಉಮೇಶ್ ತಿಳಿಸಿದರು.







