ಅತೀ ಹೆಚ್ಚು ಜನಸೇರಿದಂತೆ ಫೋಟೊಶಾಪ್ ಮಾಡಿ ತನ್ನ ಚಿತ್ರವನ್ನು ಟ್ವೀಟ್ ಮಾಡಿದ ಆದಿತ್ಯನಾಥ್: ವ್ಯಾಪಕ ವ್ಯಂಗ್ಯ

twitter.com/myogiadityanath
ಲಕ್ನೋ: ತನ್ನ ಸಾರ್ವಜನಿಕ ಸಭೆಯಲ್ಲಿ ಅತೀ ಹೆಚ್ಚು ಜನರು ಸೇರಿದಂತೆ ಫೊಟೋಶಾಪ್ ಮಾಡಿರುವ ಚಿತ್ರವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡು ಸಾಮಾಜಿಕ ತಾಣದಾದ್ಯಂತ ವ್ಯಾಪಕ ವ್ಯಂಗ್ಯಕ್ಕೊಳಗಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಹೀಗೆ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಎಡಿಟ್ ಮಾಡಿರುವ ಚಿತ್ರ ಹಂಚುವುದು ಎಷ್ಟು ಸರಿ ಎಂದೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಆದಿತ್ಯನಾಥ್ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾದ ಚಿತ್ರದಲ್ಲಿ ಆದಿತ್ಯನಾಥ್ ಒಂದು ಕಡೆ ಕೈ ಬೀಸುವುದು ಕಂಡುಬಂದರೆ, ಅಲ್ಲಿರುವ ಜನರು ಇನ್ನೊಂದು ಕಡೆಗೆ ಕೈ ಬೀಸುತ್ತಿರುವುದು ಕಂಡು ಬಂದಿದೆ.
ಕೈ ಬೀಸುವ ಆದಿತ್ಯನಾಥ್ರ ಮೂಲ ಚಿತ್ರ ಕಳೆದ ಡಿಸೆಂಬರ್ 25 ರಂದು ಔಟ್ಲುಕ್ ವೆಬ್ ಪೇಜಿನಲ್ಲಿ ಪ್ರಕಟಗೊಂಡಿತ್ತು. ಸೇರಿರುವ ಜನಸಮೂಹದ ಮೂಲ ಚಿತ್ರ ಎಲ್ಲಿಯದ್ದು ಎನ್ನುವುದರ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.
ಆಲ್ಟ್ ನ್ಯೂಸ್ ಪತ್ರಕರ್ತ ಮಹಮ್ಮದ್ ಝುಬೈರ್ ಎಡಿಟೆಡ್ ಚಿತ್ರ ಹಾಗೂ ಮೂಲ ಚಿತ್ರವನ್ನು ಆದಿತ್ಯನಾಥ್ರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದಾರೆ. ಈ ನಡುವೆ ಟ್ವಿಟರ್ ನಲ್ಲಿ ʼಫೋಟೊಶಾಪ್ʼ ದೇಶಾದ್ಯಂತ ಟ್ರೆಂಡಿಂಗ್ ಆಗಿದೆ.
जनपद इटावा, इतिहास रचने जा रहा है...
— Yogi Adityanath (@myogiadityanath) February 15, 2022
'आतंकियों के रहनुमा' और अपराधियों के सरपरस्त' यहां पस्त होंगे।
इटावा ने ठाना है, हर बूथ पर कमल का फूल खिलाना है...
धन्यवाद इटावा! pic.twitter.com/4RpIPbQSfn
— Mohammed Zubair (@zoo_bear) February 15, 2022
Yogi IT Cell after seeing this pic.twitter.com/2NSccNf8ip
— Siddharth (@ethicalsid) February 15, 2022







