ನಿಮ್ಮ ಮೊಬೈಲ್ ಗೆ ಕ್ಯೂಆರ್ ಕೋಡ್ ಕಳುಹಿಸಿದರೆ ಎಚ್ಚರ ವಹಿಸಿ!
ಮಂಗಳೂರಿನ ಮ್ಯಾನೇಜರ್ ಒಬ್ಬರಿಗೆ ಹೀಗೊಂದು ವಂಚನೆ

ಸಾಂದರ್ಭಿಕ ಚಿಂತನೆ
ಮಂಗಳೂರು, ಫೆ.15: ನಗರದ ಕಂಪೆನಿಯೊಂದರ ಮ್ಯಾನೇಜರ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕ್ಯೂ ಆರ್ ಕೋಡ್ ಕಳುಹಿಸಿ ಹಂತ ಹಂತವಾಗಿ 96,996 ರೂ. ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ನಗರದ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ದೂರುದಾರ ವ್ಯಕ್ತಿಗೆ ಜ.25ರಂದು ಅಪರಿಚಿತ ವ್ಯಕ್ತಿಯೊಬ್ಬ 6900789640 ಮತ್ತು 9735403133 ಸಂಖ್ಯೆಯಿಂದ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕನಾಗಿದ್ದು ಶಾಲೆಯೊಂದರ ಕಾಮಗಾರಿಗಾಗಿ 300 ಚೀಲ ಸಿಮೆಂಟ್ ಬೇಕಾಗಿದೆ ಎಂದು ತಿಳಿಸಿದ ಎನ್ನಲಾಗಿದೆ.
ಆತ ತನ್ನ ಗುರುತಿನ ಚೀಟಿ ಮತ್ತಿತರ ವಿವರಗಳನ್ನು ಮ್ಯಾನೇಜರ್ನ ವಾಟ್ಸಪ್ ಸಂಖ್ಯೆಗೆ ಕಳುಹಿಸಿದ. ಅದನ್ನು ನಂಬಿದ ಮ್ಯಾನೇಜರ್ 300 ಚೀಲ ಸಿಮೆಂಟ್ನ್ನು ವಾಹನದಲ್ಲಿ ತುಂಬಿಸಿ ಕಳುಹಿಸಿಕೊಟ್ಟರು. ಅಪರಿಚಿತ ವ್ಯಕ್ತಿ ಕೆಲವು ಸಮಯದ ಅನಂತರ ಕರೆ ಮಾಡಿ ಮೊದಲಿಗೆ ಅರ್ಧ ಹಣ, ಅನಂತರ ಪೂರ್ತಿ ಹಣ ಪಾವತಿಸುವುದಾಗಿ ತಿಳಿಸಿದನಲ್ಲದೆ ಮ್ಯಾನೇಜರ್ನ ಪೋನ್ ಪೇ ಸಂಖ್ಯೆಯನ್ನು ವಾಟ್ಸಪ್ ಮೂಲಕ ಪಡೆದುಕೊಂಡ ಎಂದು ಹೇಳಲಾಗಿದೆ.
ಬಳಿಕ ಆತನ ಕ್ಯೂರ್ ಆರ್ ಕೋಡ್ನ್ನು ಮ್ಯಾನೇಜರ್ನ ಪೋನ್ ಪೇ ನಂಬರ್ಗೆ ಕಳುಹಿಸಿದ. ಆತ ತಿಳಿಸಿದಂತೆ ಮ್ಯಾನೇಜರ್ 1 ರೂ.ವನ್ನು ಯುಪಿಐ ಮುಖಾಂತರ ಪಾವತಿಸಿದರು. ಅನಂತರ ಅಪರಿಚಿತ ವ್ಯಕ್ತಿಯು 4 ಕ್ಯೂ ಆರ್ ಕೋಡ್ನ್ನು ವಾಟ್ಸಪ್ ಮೂಲಕ ಮ್ಯಾನೇಜರ್ಗೆ ಕಳುಹಿಸಿದ. ಮ್ಯಾನೇಜರ್ ಆ ಕ್ಯೂ ಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದ ಕೂಡಲೆ ಅಪರಿಚಿತ ವ್ಯಕ್ತಿ ಮ್ಯಾನೇಜರ್ನ ಐಡಿಎಫ್ಸಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 96,996 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಭಿವೃದ್ಧಿ ಕಮಿಟಿ ಸಮವಸ್ತ್ರ ಕಡ್ಡಾಯಗೊಳಿಸಿರುವ ಕಾಲೇಜಿಗಳಿಗೆ ಹೈಕೋರ್ಟ್ ಆದೇಶ ಅನ್ವಯ: ಉಡುಪಿ ಡಿಸಿ