ಜೆಪ್ಪು ಸಂತ ಆಂತೋನಿ ಆಶ್ರಮದ ಪುಣ್ಯ ಸ್ಮರಣಿಕೆಗಳ ಹಬ್ಬದ ಆಚರಣೆ

ಮಂಗಳೂರು, ಫೆ.15: ನಗರದ ಜೆಪ್ಪುವಿನಲ್ಲಿರುವ ಸಂತ ಆಂತೋನಿ ಆಶ್ರಮದ ವತಿಯಿಂದ ಸಂತ ಆಂತೋನಿ ಪುಣ್ಯ ಸ್ಮರಣಿಕೆಗಳ ಹಬ್ಬದ ಆಚರಣೆಯು ಮಂಗಳವಾರ ನಡೆಯಿತು.
ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಜೆಪ್ಪುಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಗೌರವಾರ್ಥ ಸಂಭ್ರಮದ ಬಲಿಪೂಜೆ ಅರ್ಪಿಸಿದರು.
ಬಳಿಕ ತನ್ನ ಪ್ರವಚನದಲ್ಲಿ ಅವರು ಹಸಿವು-ಬಾಯಾರಿಕೆ ಎನ್ನದೆ ನಿರಂತರವಾಗಿ ಸಂತ ಆಂತೋನಿಯವರು ದೇವರ ವಾಕ್ಯವನ್ನು ಸಾರಿದರು. ಈ ಕಾರಣಕ್ಕಾಗಿ ದೇವರು ಸಂತ ಆಂತೋನಿಯವರಲ್ಲಿ ಊಹಿಸಲಾಸಧ್ಯವಾದ ಪವಾಡವನ್ನೇ ಮಾಡಿದ್ದಾರೆ ಎಂದರು.
ಬಲಿ ಪೂಜೆಯ ಮೊದಲು ಬಿಷಪರು ಆಶ್ರಮಕ್ಕೆ ನೂತನವಾಗಿ ನಿರ್ಮಿಸಲಿರುವ ಪ್ರವೇಶದ್ವಾರದ ಕೆಸರು ಕಲ್ಲನ್ನು ಆಶೀರ್ವಚನ ಮಾಡಿದರು.
ಮಿಲಾಗ್ರಿಸ್ ಚರ್ಚಿನ ಆವರಣದಲ್ಲಿ ಮಂಗಳವಾರ ಸಂಜೆ ಹಬ್ಬದ ಸಂಭ್ರಮದ ಬಲಿಪೂಜೆಯನ್ನು ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ಅರ್ಪಿಸಿದದರು. ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ಡಾ.ಜೋಸೆಫ್ ಮಾರ್ಟಿಸ್ ಪ್ರವಚನ ನೀಡಿದರು.
ಫಾ.ಲ್ಯಾರಿ ಪಿಂಟೊ ಜೆಪ್ಪುಸಂತ ಆಂತೋನಿ ಆಶ್ರಮದಲ್ಲಿ ನಿವಾಸಿಗಳಿಗಾಗಿ ಬಲಿಪೂಜೆ ಅರ್ಪಿಸಿದರು. ಅಲ್ಲದೆ ಬಳಕುಂಜೆ ಸಂತ ಪಾವ್ಲ್ ದೇವಾಲಯದ ಧರ್ಮಗುರು ಫಾ. ಗಿಲ್ಬರ್ಟ್ ಡಿಸೋಜ ಬಲಿಪೂಜೆ ಅರ್ಪಿಸಿದರು.
ಮಿಲಾಗ್ರಿಸ್ ದೇವಾಲಯದಲ್ಲಿ ಬೆಥರಮ್ ಸಭೆಯ ಫಾ. ಜೇಕಬ್ ಮಲಯಾಳಂ ಭಾಷೆಯಲ್ಲಿ ಬಲಿಪೂಜೆ ಅರ್ಪಿಸಿದರು.