ಮಂಗಳೂರು: ಫೆ.16 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು: ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಫೆ.16ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಂದರ್ ಪೊಲೀಸ್ ಠಾಣೆ, ಬಾಂಬೆ ಲಕ್ಕಿ ಹೊಟೇಲ್, ಅಜೀಜುದ್ದೀನ್ ರಸ್ತೆ, ಭಟ್ಕಲ್ ಬಝಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಕೆಸಿಸಿಐ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬಿಜೈ ಉಪಕೇಂದ್ರದಿಂದ ಹೊರಡುವ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿಗಳು ನಡೆಯಲಿರುವ ಕಾರಣ ಫೆ.16ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಲ್ಲಾಳ್ಬಾಗ್, ಎಂ.ಜಿ. ರೋಡ್, ಲಾಲ್ಬಾಗ್, ಜೈಲ್ ರೋಡ್, ಸಿ.ಜಿ. ಕಾಮತ್ ರೋಡ್, ವಿವೇಕನಗರ, ಭಾರತೀನಗರ, ಚಂದ್ರಿಕಾ ಬಡಾವಣೆ, ಕೊಡಿಯಾಲ್ಬೈಲ್, ಕೊಡಿಯಾಲ್ ಗುತ್ತು, ಗಣೇಶ್ ರಾವ್ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ನಿರ್ವಹಣಾ ಕಾಮಗಾರಿಗಳು ನಡೆಯಲಿರುವುದರಿಂದ ಫೆ.16 ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬೆಳುವಾಯಿ, ದರೆಗುಡ್ಡೆ, ಶಿರ್ತಾಡಿ, ಅಳಿಯೂರು, ಮಾಂಟ್ರಾಡಿ, ನೆಲ್ಲಿಕಾರು, ವಾಲ್ಪಾಡಿ, ಪೆಂಚಾರ, ಕೆಸರಗದ್ದೆ, ಮಾರ್ನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.