ಕುಕ್ಕುದಕಟ್ಟೆ: ಬಸ್ ಪ್ರಯಾಣಿಕರ ತಂಗುದಾಣಕ್ಕೆ ಶಿಲಾನ್ಯಾಸ

ಮಂಗಳೂರು, ಫೆ.16: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ರಾ.ಹೆ.169ರ ಕುಕ್ಕುದಕಟ್ಟೆದಲ್ಲಿ ಗ್ರಾಪಂ ಅನುದಾನ ದಲ್ಲಿ ನಿರ್ಮಾಣಗೊಳ್ಳಲಿರುವ ಬಸ್ ಪ್ರಯಾಣಿಕರ ತಂಗುದಾಣಕ್ಕೆ ಗ್ರಾಪಂ ಅಧ್ಯಕ್ಷ ಯಶವಂತ್ ಕುಮಾರ್ ಶೆಟ್ಟಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ದಿಲ್‌ಶಾದ್ ಎ, ಸದಸ್ಯರಾದ ಸದಾಶಿವ ಶೆಟ್ಟಿ ಕೆ, ಶೋಭಾ ಎ, ಸಂಪಾ, ಬಬಿತಾ, ಬಾಲಕೃಷ್ಣ ಕೋಟ್ಯಾನ್, ಎಡ್ಲಿನ್ ಕ್ಲೀಟಾ ಡಿಸೋಜ, ಮರಿಯಮ್ಮ, ಅಝ್ಮೀನಾ ಹಾಗೂ ಪಿಡಿಒ ಅಬೂಬಕರ್, ಕಾರ್ಯದರ್ಶಿ ಅಶೋಕ್, ತಾಪಂ ಮಾಜಿ ಸದಸ್ಯ ಯಶವಂತ ಆಳ್ವ, ಜಗದೀಶ ಪೂಜಾರಿ ಬಡಕರೆ, ಇರ್ಶಾದ್, ಹರಿಮಲ್ಲಿ, ಪುರುಷೋತ್ತಮ ಮಲ್ಲಿ, ಸ್ಟೀವನ್, ಗೋಪಾಲ, ಮೆಲ್ವಿನ್ ಸಲ್ಡಾನ, ಚಂದ್ರಹಾಸ ಕಾವ, ಶೀನ, ರುಕ್ಕಯ್ಯ, ಶೇಖರ ಕಾಮ, ಭಾಸ್ಕರ್ ಮತ್ತಿತರರು ಭಾಗವಹಿಸಿದ್ದರು.
Next Story





