ಉಕ್ರೇನ್ನಿಂದ ಭಾರತೀಯರನ್ನು ಕರೆ ತರಲು ಹೆಚ್ಚಿನ ವಿಮಾನಗಳು ಸಜ್ಜು: ಭಾರತ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಕರಿಛಾಯೆ ಆವರಿಸಿದೆ. ಉಭಯ ದೇಶಗಲು ಗಡಿಭಾಗಗಳಲ್ಲಿ ಸೇನಾ ತುಕಡಿಯನ್ನು, ಯುದ್ಧ ಟ್ಯಾಂಕುಗಳನ್ನು, ಯುದ್ಧ ವಿಮಾನಗಳನ್ನು ಇಟ್ಟಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ತಾಯ್ನಾಡುಗಳಿಗೆ ಮರಳಲು ವಿಮಾನ ಟಿಕೆಟ್ ಸಿಗದಿರುವುದು ವಿದೇಶಿ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ. ಸದ್ಯ, ಭಾರತವು ಉಕ್ರೇನ್ನಲ್ಲಿರುವ ಭಾರತೀಯರಿಗೆ ಆತಂಕ ಪಡದಂತೆ ಸೂಚನೆ ನೀಡಿದೆ.
ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತರಲು ಹೆಚ್ಚಿನ ವಿಮಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಛೇರಿ ಟ್ವೀಟ್ ಮಾಡಿದೆ.
ಹೆಚ್ಚುವರಿ ವಿಮಾನಗಳು ಯಾವಾಗ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ರಾಯಭಾರ ಕಚೇರಿ ಸ್ಪಷ್ಟಪಡಿಸಿಲ್ಲ.
"ಭಾರತದ ರಾಯಭಾರ ಕಚೇರಿಯು ಉಕ್ರೇನ್ನಿಂದ ಭಾರತಕ್ಕೆ ವಿಮಾನಗಳ ಲಭ್ಯತೆಯಿಲ್ಲದ ಕುರಿತು ಹಲವಾರು ಮನವಿಗಳನ್ನು ಸ್ವೀಕರಿಸುತ್ತಿದೆ. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಭಯಭೀತರಾಗಬೇಡಿ, ಆದರೆ ಭಾರತಕ್ಕೆ ಪ್ರಯಾಣಿಸಲು ಲಭ್ಯವಿರುವ ಆರಂಭಿಕ ಮತ್ತು ಅನುಕೂಲಕರ ವಿಮಾನಗಳನ್ನು ಕಾಯ್ದಿರಿಸಿ" ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.





